ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಿವಸೇನಾ ನಾಯಕನಿಗೆ ಒಂದು ವರ್ಷ ಜೈಲು  Search similar articles
ಇಲ್ಲಿನ ವಿಶೇಷ ಮ್ಯಾಜೆಸ್ಟ್ರೇಟ್ ನ್ಯಾಯಾಲಯವೊಂದು, 1993ರ ಮುಂಬೈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ನಾಯಕ ಮಧುಕರ್ ಸರ್ಪೋತೆದಾರ್ ಮತ್ತು ಇತರ ಇಬ್ಬರನ್ನು ದೋಷಿಗಳೆಂದು ತೀರ್ಮಾನಿಸಿದ್ದು, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮಧುಕರ್ ಜತೆಗೆ ಶಿವಸೇನಾ ಕಾರ್ಯಕರ್ತರಾದ ಅಶೋಕ್ ಶಿಂಧೆ ಮತ್ತು ಜಯವಂತ್ ಪರಾದ್ ಅವರುಗಳಿಗೂ ಶಿಕ್ಷೆ ವಿಧಿಸಲಾಗಿದ್ದು, ಇದರೊಂದಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಶಿಕ್ಷೆಗೀಡಾಗಿರುವ ಶಿವಸೇನಾ ನಾಯಕರ ವಿರುದ್ಧ, ಗಲಭೆ ವೇಳೆಗೆ ಧರ್ಮಗಳೊಳಗೆ ದ್ವೇಷಾ ಭಾವನೆ ಹುಟ್ಟಿಸುವಂತಹ ಉದ್ರೇಕಕಾರಿ ಭಾಷಣ ಮಾಡಿರುವ ಆರೋಪ ಹೊರಿಸಲಾಗಿದೆ.

ನ್ಯಾಯಾಲಯದ ತೀರ್ಪಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿರುವ ಮಧುಕರ್ ಇದನ್ನು ಗೌರವಿಸುವುದಾಗಿ ಹೇಳಿದ್ದಾರೆ.

"ವಿವಾದಾಸ್ಪದ ರ‌್ಯಾಲಿಯು ರಾಜಕೀಯ ರ‌್ಯಾಲಿಯಾಗಿರಲಿಲ್ಲ, ಬದಲಿಗೆ ಧಾರ್ಮಿಕ ರ‌್ಯಾಲಿಯಾಗಿತ್ತು. ತನ್ನ ಪಕ್ಷವು ತನ್ನ ಪರವಾಗಿ ನಿಲ್ಲಲಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು" ಎಂದು ಅವರು ಹೇಳಿದ್ದಾರೆ.

ಬಾಂದ್ರಾದ ಗಣೇಶ ದೇವಾಲಯದ ಬಳಿಯಲ್ಲಿ 1992ರಲ್ಲಿ ನಡೆದ ಸಭೆಯಲ್ಲಿ ಮಾಡಿರುವ ಭಾಷಣಕ್ಕಾಗಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು
ರಾಷ್ಟ್ರಪತಿಗೆ ಬೆಂಬಲ ಪತ್ರ ಒಪ್ಪಿಸಿದ ಎಸ್ಪಿ
ಬುಹುಮತ ಸಾಬೀತಿಗೆ ಎಡಪಕ್ಷಗಳ ಒತ್ತಾಯ
ಬೆಂಬಲ ಹಿಂತೆಗೆದ ಎಡರಂಗ: ರಾಷ್ಟ್ರಪತಿ ಹೆಜ್ಜೆ ಏನು?
ಭಾರತ - ಅಮೆರಿಕಕ್ಕೆ ಅಣುಒಪ್ಪಂದ ಅತ್ಯಗತ್ಯ: ಬುಷ್
ಇಂದು ಎಡಪಕ್ಷಗಳಿಂದ ಪಾಟೀಲ್ ಭೇಟಿ
ಅಣುಒಪ್ಪಂದದ ಹಿಂದೆ 'ಒಪ್ಪಂದ' : ಅಡ್ವಾಣಿ ಆರೋಪ