ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸ ಮತ ಯಾಚನೆಗೆ ಸಿದ್ಧ : ಮೊಯ್ಲಿ  Search similar articles
ಐಎಇಎಯಿಂದ ಸುರಕ್ಷತಾ ಒಪ್ಪಂದದ ಕರಡಿಗೆ ಅನುಮೋದನೆ ಪಡೆಯುವ ಮುಂಚಿತವಾಗಿ ಸರಕಾರವು ವಿಶ್ವಾಸಮತ ಯಾಚಿಸಲು ಸಿದ್ದವಾಗಿದೆ ಎಂದು ಕಾಂಗ್ರೆಸ್ ವಕ್ತಾರ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಸುರಕ್ಷತಾ ಒಪ್ಪಂದದ ಕರಡನ್ನು ಹಂಚಿದ್ದರಿಂದ ಯುಪಿಎ ನಾಯಕತ್ವದ ಸರಕಾರವು ವಚನ ಭ್ರಷ್ಟವಾಗಿಲ್ಲ ಎಂದು ಅವರು ಹೇಳಿದರು.

ಪ್ರಮುಖ ವಿರೋಧ ಪಕ್ಷ ಬಿಜೆಪಿ, ಸರಕಾರವು ಸಂಸತ್ತಿನ ಹಸಿರು ನಿಶಾನೆ ಪಡೆಯದೆ ಸುರಕ್ಷತಾ ಒಪ್ಪಂದದ ಕರಡಿಗೆ ಅನುಮೋದನೆ ಪಡೆಯಲು ಐಎಇಎ ಮಂಡಳಿಗೆ ತೆರಳುತ್ತಿರುವುದರ ಮೂಲಕ ತನ್ನ ಪ್ರಜೆಗಳನ್ನು ವಂಚಿಸುತ್ತಿದೆ ಎಂದು ತೀಕ್ಷ್ಣವಾಗಿ ಟೀಕಾ ಪ್ರಹಾರ ನಡೆಸಿತ್ತು.

"ಸರಕಾರ ಐಎಇಎ ಬೋರ್ಡ್‌‌ನೊಂದಿಗಿನ ಒಪ್ಪಂದದ ಕರಡನ್ನು ಹಂಚುತ್ತಿದೆ ಎಂಬ ಪತ್ರಿಕೆಗಳ ವರದಿ ಮತ್ತು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರ ಹೇಳಿಕೆಗೆ ಯಾವುದೇ ಸಂಬಂಧವಿಲ್ಲ" ಎಂದು ಮೊಯ್ಲಿ ಹೇಳಿದರು.

"ಕರಡನ್ನು ಹಂಚಬಹುದು ಎಂದು ಹೇಳಿದ್ದೆವೆ ಹೊರತು, ಮಾತುಕತೆ ಮುಂದುವರೆಸುವುದಾಗಿ ಅವರು ಹೇಳಿಲ್ಲ. ನವಂಬರ್ 16,2007ರ ಜಂಟಿ ಪ್ರಕಟನೆಯಲ್ಲಿ ಸುರಕ್ಷತಾ ಒಪ್ಪಂದದ ಕರಡಿನ ಬಗ್ಗೆ ಸಮಾಲೋಚನೆ ಮುಂದುವರೆಸಬಹುದು ಎಂದು ಅಂಗೀಕೃತವಾಗಿತ್ತು, ಇದು ಇಡೀ ರಾಷ್ಟ್ರಕ್ಕೆ ತಿಳಿದ ವಿಷಯ. ಅದ್ದರಿಂದಲೇ ಕಳೆದ ಜಂಟಿ ಸಭೆಯ ಸಂದರ್ಭದಲ್ಲಿ ಕರಡು ಪ್ರತಿಯನ್ನು ಪ್ರಸ್ತುತ ಪಡಿಸಲಾಗಿತ್ತು. ಐಎಇಎಯ ಗವರ್ನರ್‌ಗಳ ಸಮಿತಿಯನ್ನು ಭೇಟಿಯಾಗುವ ಮೊದಲು ನಾವು ಸಂಸತ್ತಿನ ವಿಶ್ವಾಸಮತವನ್ನು ಖಂಡಿತವಾಗಿ ಪಡೆದಿರುತ್ತೇವೆ ಎಂಬುದು ಸ್ಪಷ್ಟ" ಎಂದು ಮೊಯ್ಲಿ ನುಡಿದರು.

ಕರಡು ಪ್ರತಿಯನ್ನು ಹಂಚುವ ಸರಕಾರದ ನಡೆಯನ್ನು, ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೆಡ್ಡಿ ಅವರು ದೇಶದ ಜನರನ್ನು ಗುರಿಯಾಗಿಸಿಕೊಂಡ "ನಡುರಾತ್ರಿಯ ವಂಚನೆ" ಎಂದು ಜರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸುತ್ತಾ ಮೊಯ್ಲಿ ಅವರು " ನಡುರಾತ್ರಿಯ ನಿರ್ಣಯಗಳು ದೇಶಕ್ಕೆ ಶುಭಕರವಾಗಿ ಪರಿಣಮಿಸಿದೆ, ನಾವು ಸ್ವಾತಂತ್ರ್ಯವನ್ನು ಸಹ ಮಧ್ಯರಾತ್ರಿಯಲ್ಲೆ ಪಡೆದೆವು. ಬಿಜೆಪಿಯು ಅಣು ಒಪ್ಪಂದದ ವಿರೋಧಿಯಾಗಿಲ್ಲ, ಆದರೆ ಯುಪಿಎ ಸರಕಾರ ಇದನ್ನು ಸಾಧಿಸುತ್ತಿರುವುದನ್ನು ಅವರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ" ಎಂದು ನುಡಿದರು.
ಮತ್ತಷ್ಟು
ಮನೆಗೆ ಮರಳಿದ ಪ್ರಧಾನಿ ಸಿಂಗ್
ಐಎಇಎಗೆ ಸುರಕ್ಷತಾ ಒಪ್ಪಂದದ ಕರಡು
ರಾಷ್ಟ್ರಧ್ವಜ ಅವಮಾನ: ಆಡ್ವಾಣಿ ವಿರುದ್ಧ ದೂರು
ಶಿವಸೇನಾ ನಾಯಕನಿಗೆ ಒಂದು ವರ್ಷ ಜೈಲು
ರಾಷ್ಟ್ರಪತಿಗೆ ಬೆಂಬಲ ಪತ್ರ ಒಪ್ಪಿಸಿದ ಎಸ್ಪಿ
ಬುಹುಮತ ಸಾಬೀತಿಗೆ ಎಡಪಕ್ಷಗಳ ಒತ್ತಾಯ