ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗ್‌ರಿಂದ ಕಾನೂನು ಉಲ್ಲಂಘನೆ: ಕಾರಟ್  Search similar articles
PTI
"ಲೋಕಸಭೆಯಲ್ಲಿ ಬಹುಮತವಿಲ್ಲದ ಸಂದರ್ಭದಲ್ಲಿ ಯಾವುದೇ ಕಾಯಿದೆ, ಒಪ್ಪಂದಗಳನ್ನು ಜಾರಿಗೆ ತರಬಾರದು ಎಂಬ ಅಂಶ ಗೊತ್ತಿದ್ದರೂ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಣುಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ. ಜೊತೆಗೆ ದೇಶದ ಜನತೆಗೆ ದ್ರೋಹ ಎಸಗಿದ್ದಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಗುರುವಾರ ಆಪಾದಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣು ಒಪ್ಪಂದದ ಬಗ್ಗೆ ಸಾರ್ವಜನಿಕವಾಗಿ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಅನೇಕ ಬಾರಿ ಮನವಿ ಮಾಡಿಕೊಂಡರೂ, ಇದನ್ನು ಪರಿಗಣಿಸಿಲ್ಲ ಎಂಬುದಾಗಿ ಖೇದ ವ್ಯಕ್ತಪಡಿಸಿದರು. ಇದೀಗ ಒಪ್ಪಂದಕ್ಕೆ ಏಕಾಏಕಿ ಸಹಿ ಹಾಕಿರುವುದರ ಹಿಂದಿರುವ ಮರ್ಮವಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

"ಕೇಂದ್ರದ ಯುಪಿಎ ಸರಕಾರಕ್ಕೆ ಸದನದಲ್ಲಿ ಬಹುಮತವಿಲ್ಲ. ಆದರೂ ಕೂಡಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದಕ್ಕೆ ಕಾನೂನು ಪ್ರಕಾರ ಯಾವುದೇ ಮಾನ್ಯತೆಯಿಲ್ಲ. ಮನಮೋಹನ್ ಸಿಂಗ್ ಅವರಿಗೆ ಒಪ್ಪಂದದ ಬಗ್ಗೆ ಅಷ್ಟೊಂದು ಕಾಳಜಿ ಇದ್ದಲ್ಲಿ ಸದನದಲ್ಲಿ ಬಹಮತ ಸಾಬೀತು ಪಡಿಸಿ ಮುಂದುವರೆಯಲಿ" ಎಂದು ಕಾರಟ್ ಸವಾಲು ಹಾಕಿದರು. ಬುಧವಾರ ಮಧ್ಯಾಹ್ನದವರೆಗೆ ಒಪ್ಪಂದ ಪರಿಶೀಲನೆಯಲ್ಲಿದೆ ಎಂದು ಹೇಳುತ್ತಿದ್ದ ಅವರು, ರಾತ್ರಿ ಆಗುತ್ತಿದ್ದಂತೆಯೇ ಅಧಿಕೃತವಾಗಿ ಸಹಿ ಹಾಕಿರುವುದು ಎಷ್ಟು ಸರಿ ಎಂದು ಕಾರಟ್ ಪ್ರಶ್ನಿಸಿದ್ದಾರೆ.

ಅಮೆರಿಕದ ಒತ್ತಡದ ಹಿನ್ನಲೆಯಲ್ಲಿ ಪ್ರಧಾನಿ ಸಿಂಗ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಆರೋಪಿಸಿದ ಅವರು, ಇದೊಂದು ಕೌಟುಂಬಿಕ ವ್ಯವಹಾರ ಎಂಬಂತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಿಡಿಕಾರಿದರು. ಪರಮಾಣು ಒಪ್ಪಂದದ ಸಂಪೂರ್ಣ ವರದಿಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿ ಎಂದು ಅನೇಕ ಸಲ ಒತ್ತಾಯಿಸಲಾಗಿತ್ತು. ಆದರೆ, ಈ ಒಪ್ಪಂದದ ಸಮಗ್ರ ವರದಿಯನ್ನು ಅಮೆರಿಕದ ವೆಬ್ ಸೈಟ್ ಮೂಲಕ ತಿಳಿದುಕೊಳ್ಳಬೇಕಾಗಿರುವುದು ವಿಷಾದಕರ ಎಂದವರು ನುಡಿದರು.

ಪುಸ್ತಕ ಬಿಡುಗಡೆ
ಎಡಪಕ್ಷಗಳು ಈ ಅಣು ಒಪ್ಪಂದವನ್ನು ಯಾಕೆ ವಿರೋಧಿಸುತ್ತಿವೆ ಎಂಬುದನ್ನು ಪುಸ್ತಕ ರೂಪದಲ್ಲಿ ಹೊರತಂದಿವೆ. 'ಲೆಫ್ಟ್ಸ್ ಸ್ಟಾಂಡ್ ಆನ್ ನ್ಯೂಕ್ಲಿಯರ್ ಡೀಲ್' ಎಂಬ ಪುಸ್ತಕವನ್ನು ಕಾರಟ್ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಈ ಪುಸ್ತಕದಲ್ಲಿ ಅಣು ಒಪ್ಪಂದದಿಂದ ದೇಶ ಎದುರಿಸಬಹುದಾದ ಸಮಸ್ಯೆಗಳ ಕುರಿತು ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ಐಎಇಎ ಸುರಕ್ಷತಾ ಒಪ್ಪಂದ ಕರಡಿನೊಳಗೇನಿದೆ?
ವಿಶ್ವಾಸ ಮತ ಯಾಚನೆಗೆ ಸಿದ್ಧ : ಮೊಯ್ಲಿ
ಮನೆಗೆ ಮರಳಿದ ಪ್ರಧಾನಿ ಸಿಂಗ್
ಐಎಇಎಗೆ ಸುರಕ್ಷತಾ ಒಪ್ಪಂದದ ಕರಡು
ರಾಷ್ಟ್ರಧ್ವಜ ಅವಮಾನ: ಆಡ್ವಾಣಿ ವಿರುದ್ಧ ದೂರು
ಶಿವಸೇನಾ ನಾಯಕನಿಗೆ ಒಂದು ವರ್ಷ ಜೈಲು