ಅರುಷಿ ಕೊಲೆ ಪ್ರಕರಣಕ್ಕೆ ದ್ವೇಷ ಸಾಧನೆ ಕಾರಣ ಎಂಬ ಅಂಶ ರಾಜ್‌ಕುಮಾರ್ ಮೇಲೆ ನಡೆಸಲಾದ ಮಂಪರು ಪರೀಕ್ಷೆಯಲ್ಲಿ ದೃಢೀಕರಣಗೊಂಡಿದೆ. ನೋಯ್ಡದ ದಂತವೈದ್ಯರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರ ಪುತ್ರಿ ಅರುಷಿ ಹಾಗು ಅವರ ಮನೆಯ ಕೆಲಸದಾಳು ಹೇಮ್‌ರಾಜ್ ನಿಗೂಢವಾಗಿ ಕೊಲೆಯಾಗಿದ್ದರು. ಅರುಷಿ ತಂದೆಯನ್ನು ಪ್ರಕರಣದ ಆರೋಪಿಯನ್ನಾಗಿಸಲಾಗಿತ್ತು.
ಬೆಂಗಳೂರಿನಲ್ಲಿ ಬುಧವಾರ ರಾಜ್‌ಕುಮಾರ್ ಮೇಲೆ ಮಂಪರು ಪರೀಕ್ಷೆ ನಡೆಸಲಾಗಿತ್ತು. ತಲ್ವಾರ್ ಅವರ ಕುಟುಂಬ ಸ್ನೇಹಿತರಾಗಿರುವ ಮತ್ತು ಅವರ ಕ್ಲಿನಿಕ್ ಹಂಚಿಕೊಳ್ಳುತ್ತಿದ್ದ ಡಾ.ಅನಿತ ಅವರ ಮನೆ ಸಹಾಯಕನಾಗಿ ಸೇರ್ಪಡೆಗೊಂಡಿದ್ದ ರಾಜ್‌ಕುಮಾರ್, ಮಂಪರು ಪರೀಕ್ಷೆಯ ಸಂದರ್ಭದಲ್ಲಿ, ಡಾ.ತಲ್ವಾರ್ ಅವರ ಕ್ಲಿನಿಕ್‌ನಲ್ಲಿ ಕಂಪೌಡರ್ ಆಗಿದ್ದ ಕೃಷ್ಣ, ತನ್ನ ಯಜಮಾನನ ಬಗ್ಗೆ ಅಸಮಧಾನಗೊಂಡಿದ್ದ ಮತ್ತು ಅದಕ್ಕಾಗಿ ಅರುಷಿಯನ್ನು ಕೊಲೆ ಮಾಡಲು ಬಯಸಿದ್ದ ಎಂಬ ವಿಚಾರ ಬಹಿರಂಗ ಪಡಿಸಿದ್ದಾನೆ ಎಂದು ಹೇಳಲಾಗಿದೆ.
ಕೊಲೆಗೆ ಕಾರಣ ಕೊಲೆ ನಡೆದ ರಾತ್ರಿ ಹೇಮ್‌ರಾಜ್, ತನ್ನನ್ನು, ಕೃಷ್ಣ ಮತ್ತು ಶಂಬು ಎಂಬ ವ್ಯಕ್ತಿಯನ್ನು ಡಾ.ತಲ್ವಾರ್ ಅವರ ಮನೆಯಲ್ಲಿರುವ ತನ್ನ ಕೊಠಡಿಗೆ ಆಹ್ವಾನಿಸಿದ್ದ ಎಂದು ರಾಜ್‌ಕುಮಾರ್ ಮಂಪರು ಪರೀಕ್ಷಯ ವೇಳೆ ತಿಳಿಸಿದ್ದಾನೆ. ಜೊತೆಯಾಗಿ ಬಿಯರ್ ಕುಡಿಯುತ್ತಿರುವಾಗ ಕೃಷ್ಣ, ಡಾ.ತಲ್ವಾರ್ ಅವರು ತಾನು ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ಪೇಶಂಟ್‌ಗಳ ಎದುರಿನಲ್ಲೆ ತನ್ನನ್ನು ಅವಮಾನಿಸಿದರು ಎಂದು ತಿಳಿಸಿದ. ಅವನು ಡಾ.ತಲ್ವಾರ್ ಅವರು ತನ್ನನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದ ಎಂಬ ವಿಚಾರಗಳನ್ನು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂಬುದಾಗಿ ಕೃಷ್ಣ ಪರೀಕ್ಷೆಯಲ್ಲಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.
ಕುಡಿತದ ಅವಧಿಯಲ್ಲಿ "ನಾನು ಡಾಕ್ಟರ್‌ರೊಂದಿಗೆ ಎಷ್ಟು ವರ್ಷಗಳಿಂದ ದುಡಿಯುತ್ತಿದ್ದೇನೆ, ಅವರು ನನಗೆ ಹೀಗೆ ಮಾಡಬಹುದೇ? ನಾನು ಈ ಅವಮಾನಕ್ಕೆ ಸೇಡು ತೀರೀಸಿಕೊಳ್ಳಬೇಕು" ಎಂದು ಕೃಷ್ಣ ಹೇಳಿದ್ದಾಗಿ ವರದಿಯಾಗಿದೆ.
ಅರುಷಿ ಹಾಗು ಹೇಮ್‌ರಾಜ್ ಕೊಲೆ ಯಾಕೆ ಮತ್ತು ಹೇಗೆ.... ಅರುಷಿ ಅವರುಗಳ ಈ ಮಾತುಕತೆಯನ್ನು ಬಯಲಿಗೆಳೆಯುವುದಾಗಿ ಬೆದರಿಸಿದ ಹಂತದಲ್ಲಿ ಕೃಷ್ಣ ಅವಳ ಗಂಟಲನ್ನು ಕುಕ್ರಿಯಿಂದ ಸೀಳಿದ ಎಂದು ರಾಜ್‌ಕುಮಾರ್ ಹೇಳಿದ್ದಾನೆ. ಹದಿಹರೆಯದ ಹುಡುಗಿಯ ಕತೆ ಮುಗಿಸಿದ ಮೇಲೆ ಅವರು ಅಲ್ಲಿಂದ ಪಲಾಯನ ಮಾಡಲು ಬಯಸಿದ್ದರು. ಆದರೆ ಭಯಭೀತ ಹೇಮ್‌ರಾಜ್ ವಿಷಯವನ್ನು ತಲ್ವಾರ್ ಅವರಿಗೆ ತಿಳಿಸುವುದಾಗಿ ಹೆದರಿಸಿದ. ಅಪಾಯದ ಜಾಡು ಹಿಡಿದು, ಕೃಷ್ಣ ಮತ್ತು ರಾಜ್‌ಕುಮಾರ್ ಅವರಿಬ್ಬರು ಅವನನ್ನು ಟೆರೇಸ್ ಮೇಲೆ ಎಳೆದೊಯ್ದು ಕೊಲೆಗೈದುದಾಗಿ ರಾಜ್‌ಕುಮಾರ್ ಮಂಪರು ಪರೀಕ್ಷೆಯ ವೇಳೆ ಹೊರಗೆಡಹಿದ್ದಾನೆ. ರಾಜ್‌ಕುಮಾರ್,ಈ ಮೊದಲು ಕೃಷ್ಣ ತಿಳಿಸಿರುವಂತೆ ಈ ಕೊಲೆಗಳಲ್ಲಿ ಡಾ.ತಲ್ವಾರ್ ಯಾವುದೇ ಪಾತ್ರ ವಹಿಸಿಲ್ಲ ಎಂದು ತಿಳಿಸಿದ್ದಾನೆ.
|