ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸಮತ: ಜು.22ರಂದು ಸಂಸತ್ ಕಿರು ಅಧಿವೇಶನ  Search similar articles
ಅಣು ಒಪ್ಪಂದದ ಹಿನ್ನೆಲೆಯಲ್ಲಿ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡ ಬಳಿಕ ರಾಷ್ಟ್ರಪತಿಯವರ ಆಹ್ವಾನದ ಮೇರೆಗೆ ಗುರುವಾರ ಅವರನ್ನು ಭೇಟಿಯಾದ ಪ್ರಧಾನಿ ಮನಮೋಹನ್ ಸಿಂಗ್, ಸದನದಲ್ಲಿ ವಿಶ್ವಾಸ ಮತ ಯಾಚಿಸಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಂಸತ್ತಿನ ಕಿರು ಅಧಿವೇಶನವನ್ನು ಜು.22ರಂದು ಕರೆಯುವ ಸಾಧ್ಯತೆಗಳು ಬಹುತೇಕ ದಟ್ಟವಾಗಿದೆ.

ಈ ಬಗ್ಗೆ ಸುಳಿವು ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ವಯಲಾರ್ ರವಿ, ಜುಲೈ 22ರ ಬಳಿಕ ಯುಪಿಎಯ ಎಲ್ಲ ಸದಸ್ಯರು ರಾಜಧಾನಿಯಲ್ಲಿರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ಸಚಿವರೂ ಸೇರಿದಂತೆ ನಾಲ್ಕು ಮಂದಿ ಸಂಸದರಿಗೆ ಕೂಡ ಆ ದಿನ ನವದೆಹಲಿಗೆ ಮರಳುವಂತೆ ಸೂಚನೆ ನೀಡಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರವಿ ಹೇಳಿದರು.

ವಿದೇಶದಲ್ಲಿರುವವರೆಂದರೆ ಕರ್ನಾಟಕದ ಇಕ್ಬಾಲ್ ಅಹಮದ್ ಸರಡಗಿ, ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಮತ್ತು ಆಂಧ್ರ ಪ್ರದೇಶದ ಕಾಂಗ್ರೆಸ್ ಸಂಸದ ಮಧು ಯಕ್ಷಿ ಗೌಡ್.

ಈ ಮಧ್ಯೆ, ವಿಶ್ವಾಸ ಮತ ಗಳಿಸುವ ವಿಶ್ವಾಸವನ್ನು ಯುಪಿಎ ವ್ಯಕ್ತಪಡಿಸಿದೆ.
ಮತ್ತಷ್ಟು
ಅರುಷಿ ಕೊಲೆಗೆ ದ್ವೇಷ ಕಾರಣ: ರಾಜ್‌ಕುಮಾರ್
ಸಿಂಗ್‌ರಿಂದ ಕಾನೂನು ಉಲ್ಲಂಘನೆ: ಕಾರಟ್
ಐಎಇಎ ಸುರಕ್ಷತಾ ಒಪ್ಪಂದ ಕರಡಿನೊಳಗೇನಿದೆ?
ವಿಶ್ವಾಸ ಮತ ಯಾಚನೆಗೆ ಸಿದ್ಧ : ಮೊಯ್ಲಿ
ಮನೆಗೆ ಮರಳಿದ ಪ್ರಧಾನಿ ಸಿಂಗ್
ಐಎಇಎಗೆ ಸುರಕ್ಷತಾ ಒಪ್ಪಂದದ ಕರಡು