ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸಮತ: ಯುಪಿಎಗೆ ಮುಸ್ಲಿಂ ಲೀಗ್ ಬೆಂಬಲ  Search similar articles
ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆಯ ವೇಳೆ ಆಡಳಿತಾರೂಡ ಯುಪಿಎ ಸರಕಾರಕ್ಕೆ ಬೆಂಬಲ ನೀಡುವುದಾಗಿ ಯುಪಿಎ ಮೈತ್ರಿ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಭರವಸೆ ನೀಡಿದೆ.

ಐಯುಎಂಎಲ್ ಮುಖ್ಯಸ್ಥ ಸೈಯದ್ ಪಾನಕ್ಕಾಡ್ ಶಿಹಾಬ್ ಅವರ ನಿವಾಸದಲ್ಲಿ ಪಕ್ಷದ ನಾಯಕರೊಂದಿಗೆ ಮೂರು ಗಂಟೆಗಳ ಕಾಲ ನಡೆದ ಸಭೆಯ ನಂತರ ರಾಜ್ಯ ವಿದೇಶಾಂಗ ಸಚಿವ ಇ.ಅಹ್ಮದ್ ಈ ನಿರ್ಧಾರವನ್ನು ಘೋಷಿಸಿದ್ದಾರೆ.

ಭಾರತ ಅಮೆರಿಕ ಅಣು ಒಪ್ಪಂದ ಜಾರಿಯಲ್ಲಿ ಪಕ್ಷವು ಆಸಕ್ತಿಯನ್ನು ಹೊಂದಿದ್ದು, ಸರಕಾರದ ವಿಶ್ವಾಸ ಮತ ಕೋರಿಕೆಯ ವೇಳೆ ಕಾಂಗ್ರೆಸ್‌ನೊಂದಿಗೆ ಐಯುಎಂಎಲ್ ಪಕ್ಷವು ಕೂಡಾ ಬೆಂಬಲ ನೀಡಲಿದೆ ಎಂದು ಅಹ್ಮದ್ ತಿಳಿಸಿದ್ದಾರೆ.

ಸರಕಾರದ ಎಲ್ಲಾ ರಾಜಕೀಯ ಕಾರ್ಯಕ್ರಮಗಳಿಗೆ ಮತ್ತು ಕಾನೂನುಗಳಿಗೆ ಎಲ್ಲಾ ಬೆಂಬಲವನ್ನು ಪಕ್ಷವು ನೀಡುತ್ತದೆ. ಏನೇ ಆದರೂ, ಒಪ್ಪಂದದ ಕುರಿತಾಗಿ ಪಕ್ಷಕ್ಕೆ ಕೆಲವು ಆತಂಕಗಳಿದ್ದು, ಅದನ್ನು ಯುಪಿಎ ನಾಯಕರಿಗೆ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ವಿಶ್ವಾಸಮತ: ಜು.22ರಂದು ಸಂಸತ್ ಕಿರು ಅಧಿವೇಶನ
ಅರುಷಿ ಕೊಲೆಗೆ ದ್ವೇಷ ಕಾರಣ: ರಾಜ್‌ಕುಮಾರ್
ಸಿಂಗ್‌ರಿಂದ ಕಾನೂನು ಉಲ್ಲಂಘನೆ: ಕಾರಟ್
ಐಎಇಎ ಸುರಕ್ಷತಾ ಒಪ್ಪಂದ ಕರಡಿನೊಳಗೇನಿದೆ?
ವಿಶ್ವಾಸ ಮತ ಯಾಚನೆಗೆ ಸಿದ್ಧ : ಮೊಯ್ಲಿ
ಮನೆಗೆ ಮರಳಿದ ಪ್ರಧಾನಿ ಸಿಂಗ್