ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರ: ನಕ್ಸಲರಿಂದ ರೈಲ್ವೆ ಹಳಿ, ಬಿಡಿಓ ಕಚೇರಿ ಸ್ಫೋಟ  Search similar articles
PTI
ತಮ್ಮ ನಾಯಕನೊಬ್ಬನ ಬಂಧನ ಪ್ರತಿಭಟನಾರ್ಥವಾಗಿ ಶಂಕಿತ ನಕ್ಸಲರು, ಬಿಹಾರದ ಜಾಮುಯಿ ಜಿಲ್ಲೆಯಲ್ಲಿ ರೈಲ್ವೇ ಹಳಿ ಹಾಗೂ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕಚೇರಿಯ ಸರಕಾರಿ ವಸತಿ ಸಂಕೀರ್ಣದ ಭಾಗಒಂದನ್ನು ಶುಕ್ರವಾರ ನಸುಕಿಗೂ ಮುಂಚಿನ ಅವಧಿಯಲ್ಲಿ ಸ್ಫೋಟಿಸಿದ್ದಾರೆ.

ಈಶಾನ್ಯ ರೈಲ್ವೇಯಡಿ ಬರುವ ನಾರ್ಗಂಜೋ ಮತ್ತು ಗೋರ್ಪರಣಾ ನಿಲ್ದಾಣಗಳ ನಡುವಿನ ಎರಡೂ ಬದಿಯ ಹಳಿಗಳನ್ನು ಮಧ್ಯರಾತಿರ ಒಂದು ಗಂಟೆಗೆ ಸ್ಫೋಟಿಸಿದ್ದು, ಇದರಿಂದಾಗಿ ಪಾಟ್ನಾ-ಹೌರಾ ನಡುವಿನ ಮಾರ್ಗಗಳ ರೈಲು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ ಎಂದು ಪೊಲೀಸ್ ಹಾಗೂ ರೈಲ್ವೇ ಮೂಲಗಳು ತಿಳಿಸಿವೆ. ಇದರಿಂದಾಗಿ ಈ ಮಾರ್ಗಗಳಲ್ಲಿ ಹಾದುಹೋಗುವ ಸುಮಾರು ಅರ್ಧಕ್ಕೂ ಅಧಿಕ ಡಜನ್ ರೈಲುಗಳು ಸ್ಥಗಿತಗೊಂಡಿವೆ.

ಲಕ್ಷ್ಮೀಪುರದ ಸರಕಾರಿ ಸಮುಚ್ಚಯದಲ್ಲಿನ ಕ್ಷೇತ್ರಾಭಿವೃದ್ಧಿ ಅಧಿಕಾರಿ ಕಚೇರಿ, ವೃತ್ತಾಧಿಕಾರಿ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಕ್ಷೇತ್ರಾಭಿವೃದ್ಧಿ ಕಚೇರಿಗೆ ಆಂಶಿಕ ಹಾನಿಯಾಗಿದೆ. ವಿಶೇಷ ಸಹಾಯಕ ಪೊಲೀಸ್(ಎಸ್ಎಪಿ) ಸಿಬ್ಬಂದಿಗಳು ನಕ್ಸಲರ ದಾಳಿಗೆ ತೀವ್ರಪ್ರತಿರೋಧ ಒಡ್ಡಿದರೆಂದು ಪೊಲೀಸ್ ವರಿಷ್ಠಾಧಿಕಾರಿ ವಿನಯ್ ಕುಮಾರ್ ಹೇಳಿದ್ದಾರೆ. ಯಾವುದೇ ಸಾವುನೋವುಗಳ ಕುರಿತು ವರದಿಯಾಗಿದೆ.

ಎಸ್ಪಿಯವರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಕೂಂಬಿಂಗ್ ಕಾರ್ಯಚರಣ್ ಆರಂಭಿಸಲಾಗಿದೆ.

ಏತನ್ಮಧ್ಯೆ, ತಮ್ಮ ನಾಯಕ ಕಮಲೇಶ್ ಅಲಿಯಾಸ್ ದೀಪಕ್‌ನ ಬಂಧನವನ್ನು ವಿರೋಧಿಸಿ ಬಿಹಾರದ ಮಾವೋವಾದಿಗಳು ಜಾಮುಯ್, ಮುಂಗೇರ್, ಭಾಗಲ್ಪುರ್, ಲಕಿಸರಾಯ್ ಮತ್ತು ಬಂಕಾ ಜಿಲ್ಲೆಗಳಲ್ಲಿ 24 ಗಂಟೆಗಳ ಬಂದ್‌ಗೆ ಕರೆ ನೀಡಿದ್ದಾರೆ.
ಮತ್ತಷ್ಟು
ವಿಶ್ವಾಸಮತ: ಯುಪಿಎಗೆ ಮುಸ್ಲಿಂ ಲೀಗ್ ಬೆಂಬಲ
ವಿಶ್ವಾಸಮತ: ಜು.22ರಂದು ಸಂಸತ್ ಕಿರು ಅಧಿವೇಶನ
ಅರುಷಿ ಕೊಲೆಗೆ ದ್ವೇಷ ಕಾರಣ: ರಾಜ್‌ಕುಮಾರ್
ಸಿಂಗ್‌ರಿಂದ ಕಾನೂನು ಉಲ್ಲಂಘನೆ: ಕಾರಟ್
ಐಎಇಎ ಸುರಕ್ಷತಾ ಒಪ್ಪಂದ ಕರಡಿನೊಳಗೇನಿದೆ?
ವಿಶ್ವಾಸ ಮತ ಯಾಚನೆಗೆ ಸಿದ್ಧ : ಮೊಯ್ಲಿ