ಬಿಎಸ್ಪಿ ಮುಖ್ಯಸ್ಥೆ, ಯುಪಿ ಮುಖ್ಯಮಂತ್ರಿ ಮಾಯಾವತಿ ಅವರ ವಿರುದ್ದ ಸಿಬಿಐ ದಾಖಲಿಸಿರುವ ಅದಾಯಕ್ಕಿಂತ ಹೆಚ್ಚು ಹೊಂದಿರುವಿಕೆಯ ಪ್ರಮಾಣಪತ್ರದ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಎಸ್‌ಪಿ, ಇದಕ್ಕೆ ಕೇಂದ್ರದ ಒತ್ತಡ ಕಾರಣ ಎಂದು ಅಪಾದಿಸಿದೆ.
ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಸಮಾಜವಾದಿ ಪಕ್ಷದಿಂದ ಪಡೆದಿರುವ ಬೆಂಬಲಕ್ಕೆ ಬದಲಾಗಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕೇಂದ್ರವು, ತನಿಖಾ ತಂಡದಮೇಲೆ ಒತ್ತಡ ಹೇರಿದೆ ಎಂಬುದಾಗಿ ಗುರುವಾರ ರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆಪಾದಿಸಿದೆ.
ಈ 'ಒಪ್ಪಂದ'ದ ಅಡಿಯಲ್ಲಿ ಮುಖ್ಯಮಂತ್ರಿಗಳ ವಿರುದ್ದ ಸುಳ್ಳು ಪ್ರಕರಣ ದಾಖಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಮ್ಮ ಹೇಳಿಕೆಯಲ್ಲಿ ಬಿಎಸ್‌ಪಿ ವಕ್ತಾರರನ್ನು ಉಲ್ಲೇಖಿಸಿ ಆಪಾದಿಸಲಾಗಿದೆ.
ಅಫಿದಾವತ್ ಪ್ರತಿ ಮುಖ್ಯಮಂತ್ರಿಗಳ ವಕೀಲರ ಕೈಗೆ ಸಿಗುವ ಮೊದಲೆ ಅದನ್ನು ಮಾಧ್ಯಮ ಪ್ರತಿನಿಧಿಗಳಿಗೆ ಹಂಚಿರುವ ಸಿಬಿಐನ ಕ್ರಮವನ್ನೂ ಬಿಎಸ್ಪಿ ಟೀಕಿಸಿದೆ.
|