ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸ ಮತಯಾಚನೆ ನಂತರ ಐಎಇಎ ಬಳಿಗೆ  Search similar articles
PTI
ಅಮೆರಿಕ-ಭಾರತ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ, ಭಾರತಕ್ಕೆ ನಿರ್ದಿಷ್ಟವಾಗಿರುವ ಸುರಕ್ಷತಾ ಒಪ್ಪಂದದ ಅಂಗೀಕಾರಕ್ಕಾಗಿ, ಲೋಕಸಭೆಯಲ್ಲಿ ವಿಶ್ವಾಸ ಮತ ಗೆದ್ದ ಬಳಿಕವೇ, ಯುಪಿಎ ಸರಕಾರ ಐಎಇಎ ಬಳಿ ತೆರಳಲಿದೆ ಉನ್ನತ ಮೂಲಗಳು ಹೇಳಿವೆ.

ಐಎಇಎ ಮಂಡಳಿಯ ಗವರ್ನರ್‌ಗಳಿಗೆ ಸುರಕ್ಷತಾ ಒಪ್ಪಂದದ ಕರಡನ್ನು ಹಂಚುವುದರಿಂದ ಅಂಗೀಕಾರ ಪಡೆದಂತಾಗುವುದಿಲ್ಲ, ಇದೊಂದು ಪ್ರಕ್ರಿಯೆಯಾಗಿದ್ದು ದಾಖಲೆಯನ್ನು ಓದಲು ಐಎಇಎ ಸದಸ್ಯರಿಗೆ ಸಾಕಷ್ಟು ಸಮಯಾವಕಾಶ ನೀಡಿದಂತಾಗುತ್ತದೆ ಅಷ್ಟೆ ಎಂಬುದಾಗಿ ಸರಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ರಾಜಕೀಯ ಪ್ರಾಧಿಕಾರ ಮತ್ತು ಕರಡು ದಾಖಲೆಯ ವಿತರಣೆಗಾಗಿ ಬುಧವಾರ ಐಎಇಎಯನ್ನು ಸಂಪರ್ಕಿಸಿರುವ ಕಾರ್ಯಕಾರಿ ನಡುವೆ ಯಾವುದೇ ವಿರೋಧಾಭಾಸಗಳಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ವಿಶ್ವಾಸಮತ ಯಾಚನೆಯ ಬಳಿಕವೇ ಐಎಇಎ ಬಳಿ ತೆರಳುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರು ನೀಡಿರುವ ಹೇಳಿಕೆಗೂ ಸರಕಾರದ ನಡೆಯಲ್ಲೂ ವೈರುಧ್ಯಗಳಿವೆ ಎಂಬ ಟೀಕೆಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಒಮ್ಮೆ ಸರಕಾರದಿಂದ ಹೊರ ನಡೆದ ಮೇಲೆ ಎಡಪಕ್ಷಗಳಿಗೆ ಇದರ ಕುರಿತು ಟೀಕಿಸಲು ಅಧಿಕಾರವಿಲ್ಲ. ಎರಡು ಪಕ್ಷಗಳ ನಡುವೆ ಸಂಬಂಧ ಕಡಿದು ಹೋಗಿದ್ದು, ಈ ಕುರಿತ ರಾಜಕೀಯ ಯಂತ್ರ ಸ್ಥಗಿತಗೊಂಡ ಬಳಿಕ ಅವರಿಗೆ ಸರಕಾರವನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಮೂಲಗಳು ಎಡಪಕ್ಷಗಳ ಪ್ರತಿಕ್ರಿಯೆಗಳನ್ನು ತಳ್ಳಿ ಹಾಕಿವೆ.
ಮತ್ತಷ್ಟು
ವೈದ್ಯ ತಲ್ವಾರ್‌ಗೆ ಬಿಡುಗಡೆಯ ಭಾಗ್ಯ?
ಜೀಪ್ ಅಫಘಾತ, ಏಳು ಮಂದಿ ಸಾವು
ಜು.21,22ಕ್ಕೆ ಅಧಿವೇಶನ, ವಿಶ್ವಾಸಮತ ಯಾಚನೆ
ಸಿಬಿಐ ಅಫಿದಾವತ್‌ಗೆ ಕೇಂದ್ರದ ಒತ್ತಡ: ಬಿಎಸ್ಪಿ
ಬಿಹಾರ: ನಕ್ಸಲರಿಂದ ರೈಲ್ವೆ ಹಳಿ, ಬಿಡಿಓ ಕಚೇರಿ ಸ್ಫೋಟ
ಹಣೆ ಚಚ್ಚಿಕೊಂಡು ಸರಕಾರದ ವಿರುದ್ಧ ಪ್ರತಿಭಟನೆ!