ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಷಿ ಕೊಲೆ: ತಲ್ವಾರ್‌ಗೆ ಜಾಮೀನು  Search similar articles
ಅರುಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ, ಆಕೆಯ ತಂದೆ ರಾಜೇಶ್ ತಲ್ವಾರ್ ಅವರನ್ನು 10 ಲಕ್ಷರೂಪಾಯಿ ಮುಚ್ಚಳಿಕೆಯೊಂದಿಗೆ ಶುಕ್ರವಾರ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ.

ಇವರ ವಿರುದ್ಧ ಯಾವುದೇ ಪುರಾವೆಗಳನ್ನು ಕಂಡು ಹಿಡಿಯಲು ಸಿಬಿಐ ವಿಫಲವಾಗಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿದೆ.

ಈ ವಿಚಾರವನ್ನು ಗಜಿಯಾಬಾದ್ ನ್ಯಾಯಲಯಕ್ಕೆ ಮನವರಿಕೆ ಮಾಡಿದ್ದು, ತಲ್ವಾರ್ ಜಾಮೀನು ಅರ್ಜಿಯ ಕುರಿತು ಸೂಕ್ತ ಆದೇಗಳನ್ನು ಪಾಸು ಮಾಡಲು ಕೇಳಿಕೊಂಡಿರುವುದಾಗಿ ಸಿಬಿಐ ಹೇಳಿದೆ.

ನೋಯ್ಡಾ ಪೊಲೀಸರು ತಲ್ವಾರ್ ಅವನ್ನು ಮೇ ತಿಂಗಳಲ್ಲಿ ಬಂಧಿಸಿದ ವಿಚಾರವನ್ನು ಪ್ರಸ್ತಾಸಿದ ಸಿಬಿಐ, ಬಂಧನ ವೇಳೆಗೂ ನೋಯ್ಡಾ ಪೊಲೀಸರು ಯಾವುದೇ ಪುರಾವೆ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಆರೋಪಿಗಳಲ್ಲೊಬ್ಬನಾದ ಕೃಷ್ಣನ ಹೇಳಿಕೆಯಾಧಾರದಲ್ಲಿ ಹೇಳಿಕೆಯಾಧಾರದಲ್ಲಿ ,ತನ್ನ ಪುತ್ರಿಯನ್ನು ಮನೆಗೆಲಸದಾಳು ಹೇಮರಾಜ್ ಜೊತೆ ನೋಡಬಾರದ ಸ್ಥಿತಿಯಲ್ಲಿ ಕಂಡ ತಲ್ವಾರ್ ಸಿಟ್ಟುಗೊಂಡಿದ್ದರು ಎಂಬ ಆರೋಪವನ್ನು ನೋಯ್ಡಾ ಪೊಲೀಸರು ಹೇರಿದ್ದರು ಎಂದು ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಹೇಳಿದ್ದರು.

ರಾಜೇಶ್ ಹಾಗೂ ಅವರ ಪತ್ನಿ ನೂಪುರ್ ಅವರುಗಳನ್ನು ಸುಳ್ಳು ಪತ್ತೆಯ ಪರೀಕ್ಷೆ ಒಡ್ಡಿದ್ದಾಗಲೂ ಯಾವುದೇ ಕಪಟಗಳು ಕಂಡು ಬಂದಿಲ್ಲ ಎಂಬ ಗಮನಾರ್ಹ ಹೇಳಿಕೆಯನ್ನು ಸಿಬಿಐ ನೀಡಿದೆ. ಆದರೆ ಕೃಷ್ಣ ಹಾಗೂ ರಾಜ್‌ಕುಮಾರ್ ಅವರುಗಳ ಪರೀಕ್ಷೆಯ ವೇಳೆಗೆ ಜೋಡಿ ಕೊಲೆಯ ಕುರಿತು ಮಾಹಿತಿ ಲಭಿಸಿದ್ದು ಇದರ ಆಧಾರದಲ್ಲಿ, ಇವರಿಬ್ಬರೊಂದಿಗೆ ನೆರೆಮನೆಯ ವ್ಯಕ್ತಿ ವಿಜಯ್ ಮಂಡಲ್ ಎಂಬಾದ ಅಪರಾಧದದಲ್ಲಿ ಪಾಲ್ಗೊಂಡಿರುವ ಅಂಶ ಬೆಳಕಿಗೆ ಬಂದಿದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.
ಮತ್ತಷ್ಟು
ಅರುಷಿ ಕೊಲೆ: ತಲ್ವಾರ್‌ಗೆ ಜಾಮೀನು
ವೈದ್ಯ ತಲ್ವಾರ್‌ಗೆ ಬಿಡುಗಡೆಯ ಭಾಗ್ಯ?
ಜೀಪ್ ಅಫಘಾತ, ಏಳು ಮಂದಿ ಸಾವು
ಜು.21,22ಕ್ಕೆ ಅಧಿವೇಶನ, ವಿಶ್ವಾಸಮತ ಯಾಚನೆ
ಸಿಬಿಐ ಅಫಿದಾವತ್‌ಗೆ ಕೇಂದ್ರದ ಒತ್ತಡ: ಬಿಎಸ್ಪಿ
ಬಿಹಾರ: ನಕ್ಸಲರಿಂದ ರೈಲ್ವೆ ಹಳಿ, ಬಿಡಿಓ ಕಚೇರಿ ಸ್ಫೋಟ