ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸ ಮತಕ್ಕೆ ಕಾಂಗ್ರೆಸ್ ಸಜ್ಜು  Search similar articles
ಭಾರತ ಮತ್ತು ಅಮೆರಿಕ ನಡುವಿನ ನಾಗಕರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಯುಪಿಎ ಸರಕಾರವು ವಿಶ್ವಾಸ ಮತ ಎದುರಿಸಲು ಸಿದ್ಧವಾಗಿದೆ. ಜುಲೈ 22 ರಂದು ವಿಶ್ವಾಸ ಮತ ಗಳಿಸಲು ಕಾಂಗ್ರೆಸ್ ಸಜ್ಜಾಗಿದ್ದು, ಈ ನಿಟ್ಟಿನಲ್ಲಿ ಶನಿವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಲಿದೆ.

ಪ್ರಸ್ತುತ ಜುಲೈ 21 ಹಾಗೂ 22ರಂದು ಎರಡು ದಿನಗಳ ಕಾಲ ಸಂಸತ್ತು ಅಧಿವೇಶನ ನಡೆಯಲಿದೆ. ಏತನ್ಮಧ್ಯೆ, ಸಂಸತ್ತಿನಲ್ಲಿ ವಿಶ್ವಾಸ ಮತ ಎದುರಿಸಲು ತಾವು ಸಿದ್ಧವಾಗಿದ್ದೇವೆ ಹಾಗೂ ಇದನ್ನು ಆದಷ್ಟು ಬೇಗನೆ ನೆರವೇರಿಸಲು ಸಜ್ಜಾಗಿದ್ದೇವೆ ಎಂಬುದಾಗಿ ಪ್ರಧಾನಿಯವರು ಕಾಂಗ್ರೆಸ್ ಅಧ್ಯಕ್ಷರಲ್ಲಿ ಹೇಳಿದ್ದಾರೆ.

ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮಗೆ ಬೆಂಬಲ ನೀಡುತ್ತಿರುವ ಸಮಾಜವಾದಿ ಪಕ್ಷಕ್ಕೆ ಧನ್ಯವಾದಗಳನ್ನರ್ಪಿಸಿದ್ದು, ಕೇಂದ್ರದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಪರೋಕ್ಷವಾಗಿ ನೆರವಾದ ಎಡರಂಗಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅದೇ ವೇಳೆ "ಇದು ಮುನ್ನಡೆಯಲಿರುವ ಸಮಯ" ಎಂದು ಸೋನಿಯಾ ಅಭಿಪ್ರಾಯ ಪಟ್ಟಿದ್ದಾರೆ.
ಮತ್ತಷ್ಟು
ಅರುಷಿ ಕೊಲೆ: ತಲ್ವಾರ್‌ಗೆ ಜಾಮೀನು
ವಿಶ್ವಾಸ ಮತಯಾಚನೆ ನಂತರ ಐಎಇಎ ಬಳಿಗೆ
ವೈದ್ಯ ತಲ್ವಾರ್‌ಗೆ ಬಿಡುಗಡೆಯ ಭಾಗ್ಯ?
ಜೀಪ್ ಅಫಘಾತ, ಏಳು ಮಂದಿ ಸಾವು
ಜು.21,22ಕ್ಕೆ ಅಧಿವೇಶನ, ವಿಶ್ವಾಸಮತ ಯಾಚನೆ
ಸಿಬಿಐ ಅಫಿದಾವತ್‌ಗೆ ಕೇಂದ್ರದ ಒತ್ತಡ: ಬಿಎಸ್ಪಿ