ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಒಪ್ಪಂದವನ್ನು ಕಸದಬುಟ್ಟಿಗೆ ಹಾಕಿ: ಜಯ  Search similar articles
PTI
ಭಾರತ-ಅಮೆರಿಕ ಅಣು ಒಪ್ಪಂದವನ್ನು ವಿರೋಧಿಸಿರುವ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ, ಈ ವಿವಾದಾಸ್ಪದ ಒಪ್ಪಂದವು ಈಗಿನ ಅವಶ್ಯಕತೆಯಲ್ಲ ಮತ್ತು ಈ ಕುರಿತು ಒಮ್ಮತ ಮೂಡದಿದ್ದಲ್ಲಿ ಅದನ್ನು 'ಕಸದಬುಟ್ಟಿಗೆ' ಹಾಕಿ ಎಂದು ಹೇಳಿದ್ದಾರೆ.

ಸರಕಾರಿ ವೆಬ್‌ಸೈಟ್‌ಗಳಲ್ಲಿ ಕರಡು ಒಪ್ಪಂದ ಪ್ರತಿಯನ್ನು ಕನಿಷ್ಠ ಆರು ತಿಂಗಳ ಮೊದಲೇ ಪ್ರಕಟಿಸಿ ಒಪ್ಪಂದದಲ್ಲಿರುವ ಅಂಶಗಳ ಕುರಿತು ಸಾಕಷ್ಟು ಚರ್ಚೆಗೆ ಅವಕಾಶ ನೀಡಬೇಕಿತ್ತು, ಮತ್ತು ಇಡಿಯ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕಿತ್ತು ಎಂದವರು ಹೇಳಿದ್ದಾರೆ.

ಜನತೆಯು ಎರಡಂಕಿಯ ಹಣದುಬ್ಬರ ಭರಿಸಲಾಗದೆ ತಲ್ಲಣಗೊಂಡಿದ್ದಾರೆ. ಆಗತ್ಯವಸ್ತುಗಳ ಬೆಲೆಏರಿಕೆ, ಹಿಂದೆಂದೂ ಇರದ ರೀತಿಯಲ್ಲಿ ಪೆಟ್ರೋಲಿಯಂ ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿದ್ದರೂ, 'ಅಲ್ಪ ಸಂಖ್ಯಾತ ಯುಪಿಎ ಸರಕಾರ'ವು ಜನತೆಗೆ ಅಗತ್ಯವಿರದ ಅಂತಾರಾಷ್ಟ್ರೀಯ ಒಪ್ಪಂದದ ಕುರಿತು ಧೃಡಸಂಕಲ್ಪ ಮಾಡಿದೆ ಎಂದು ಅವರು ಆಪಾದಿಸಿದರು.

ಸರಕಾರವು ಒಪ್ಪಂದದ ಮೇಲೆ ಗಮನಕೇಂದ್ರೀಕರಿಸುವುದಕ್ಕಿಂತ ಬೆಲೆಏರಿಕೆಯನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ನುಡಿದರು.
ಮತ್ತಷ್ಟು
ಯುಎನ್‌ಪಿಎ 8 ಎಂಪಿಗಳಿಗೆ 'ವಿಶ್ವಾಸವಿಲ್ಲ'
ವಿಶ್ವಾಸ ಮತಕ್ಕೆ ಕಾಂಗ್ರೆಸ್ ಸಜ್ಜು
ಅರುಷಿ ಕೊಲೆ: ತಲ್ವಾರ್‌ಗೆ ಜಾಮೀನು
ವಿಶ್ವಾಸ ಮತಯಾಚನೆ ನಂತರ ಐಎಇಎ ಬಳಿಗೆ
ವೈದ್ಯ ತಲ್ವಾರ್‌ಗೆ ಬಿಡುಗಡೆಯ ಭಾಗ್ಯ?
ಜೀಪ್ ಅಫಘಾತ, ಏಳು ಮಂದಿ ಸಾವು