ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅ.2ರಿಂದ ಧೂಮಪಾನಕ್ಕೆ ಕತ್ತರಿ  Search similar articles
ಪಾಟ್ನಾ: ಧೂಮಪಾನಿಗಳು ಅಕ್ಟೋಬರ್ 2ರಿಂದ ಖಾಸಗಿ ಅಥವಾ ಸಾರ್ವಜನಿಕ ಕಟ್ಟಡಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಒಂದೊಮ್ಮೆ ಒಂದು ದಮ್ಮು ಎಳೆಯಲೇಬೇಕೆಂಬ ಬಯಕೆ ಒತ್ತರಿಸಿಕೊಂಡು ಬಂದರೆ, ಯಾರೂ ಇಲ್ಲದ ಜಾಗಗಳಿಗೆ ತೆರಳಿ ದಮ್ಮು ಹೊಡೆಯಬೇಕು. ಧೂಮಪಾನಕ್ಕೆ ಪೂರ್ಣ ಪ್ರಮಾಣದಲ್ಲಿ ನಿಷೇಧ ಹೇರುತ್ತಿರುವ ರಾಷ್ಟ್ರಗಳ ಬೆಳೆಯುತ್ತಿರುವ ಪಟ್ಟಿಗೆ ಸೇರಿಕೊಳ್ಳುತ್ತಾ, ಸರಕಾರ ಶುಕ್ರವಾರ, ವಿಶ್ವ ಜನಸಂಖ್ಯಾ ದಿನಾಚರಣೆಯ ದಿನದಂದು ಈ ಪ್ರಕಟನೆಯನ್ನು ಮಾಡಿದೆ.

"ಭಾರತದಲ್ಲಿ ಅಕ್ಟೋಬರ್ 2ರ ನಂತರ ಯಾರೊಬ್ಬರು ಖಾಸಗಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಯಾರಿಗಾದರೂ ಧೂಮಪಾನ ಮಾಡಬೇಕೆಂದರೆ ಅವರು ರಸ್ತೆಯ ಮೇಲೆ ಮಾಡಬಹುದು" ಎಂದು ಪಾಟ್ನಾದ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮ್‌ದಾಸ್ ಹೇಳಿದರು. ಕಳೆದ ಸಲ ಚಾಲ್ತಿಗೆ ಬಂದ ನೌಕರಿ ವಲಯಗಳು, ರೆಸ್ಟೊರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿನ ನಿಷೇಧದ ವಿಸ್ತೃತ ರೂಪದಲ್ಲಿ ಥಿಯೇಟರ್‌ಗಳು, ಪಬ್, ಬಾರ್ ಮತ್ತು ಇತರ ಹಲವು ಪ್ರದೇಶಗಳಲ್ಲಿ ರಾಷ್ಟ್ರಾದ್ಯಂತ ಧೂಮಪಾನ ನಿಷೇಧವು ಜಾರಿಗೆ ಬರಲಿದೆ.


"ಧೂಮಪಾನಿಗಳು ತಮ್ಮ ಅರೋಗ್ಯವನ್ನು ಅಪಾಯಕ್ಕೊಡ್ಡಿ ಖಾಸಗಿ ಸ್ಥಳಗಳಲ್ಲಿ, ಬೆಡ್‌ರೂಮ್‌ಗಳಲ್ಲಿ, (ಪತ್ನಿ ಒಪ್ಪಿಗೆ) ಇತ್ತರೆ, ಧೂಮಪಾನ ಮಾಡಬಹುದು," ಎಂದು ರಾಮ್‌ದಾಸ್ ಹೇಳಿದರು. ಅರೋಗ್ಯ ಮತ್ತು ಪರಿಸರದ ಮೇಲೆ ತಂಬಾಕಿನ ಹೊಗೆ ಉಂಟುಮಾಡುವ ಅಪಾಯಕಾರಿ ಪರಿಣಾಮಗಳಿಂದಾಗಿ, ವಿಶ್ವಾದ್ಯಂತ ಧೂಮಪಾನಕ್ಕೆ ಭಾಗಶಃ ಅಥವಾ ಪೂರ್ಣ ಪ್ರಮಾಣದ ನಿಷೇಧ ಹೇರಿದ ದೇಶಗಳಲ್ಲಿ ಭಾರತವು ಒಂದು ಅದರೆ ಖಾಸಗಿ ಕಟ್ಟಡಗಳನ್ನು ಇದರ ಪರಿಧಿಗೆ ಒಳಪಡಿಸಿರುವುದು ಇದರ ವಿಶಿಷ್ಟತೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಅಣುಒಪ್ಪಂದವನ್ನು ಕಸದಬುಟ್ಟಿಗೆ ಹಾಕಿ: ಜಯ
ಯುಎನ್‌ಪಿಎ 8 ಎಂಪಿಗಳಿಗೆ 'ವಿಶ್ವಾಸವಿಲ್ಲ'
ವಿಶ್ವಾಸ ಮತಕ್ಕೆ ಕಾಂಗ್ರೆಸ್ ಸಜ್ಜು
ಅರುಷಿ ಕೊಲೆ: ತಲ್ವಾರ್‌ಗೆ ಜಾಮೀನು
ವಿಶ್ವಾಸ ಮತಯಾಚನೆ ನಂತರ ಐಎಇಎ ಬಳಿಗೆ
ವೈದ್ಯ ತಲ್ವಾರ್‌ಗೆ ಬಿಡುಗಡೆಯ ಭಾಗ್ಯ?