ನವದೆಹಲಿ: ತನ್ನ ಸಾಂಸ್ಥಿಕ ರಚನೆಯನ್ನು ಪುನಾರಚಿಸಿರುವ ಕಾಂಗ್ರೆಸ್, ಶನಿವಾರ 11 ಹೊಸ ವಕ್ತಾರರನ್ನು ನೇಮಿಸಿದೆ.
ಕೇಂದ್ರ ಸಚಿವರಾದ ಪ್ರಥ್ವಿರಾಜ್ ಚೌಹಾನ್, ಪಿ.ಆರ್ ದಾಸ್ ಮುನ್ಸಿ, ಆನಂದ್ ಶರ್ಮ, ರೇಣುಕಾ ಚೌಧರಿ, ಸೆಲ್ಜಾ ಕುಮಾರಿ, ಜತಿನ್ ಪ್ರಸಾದ್ ಮತ್ತು ಪಕ್ಷದ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್, ಕೇಶವ್ ರಾವ್, ಸಲ್ಮಾನ್ ಕುರ್ಷೀದ್, ಪವನ್ ಕುಮಾರ್ ಬನ್‌ಸಾಲ್ ಮತ್ತು ಬಿ.ಎಸ್. ಜ್ಞಾನದೇಶಿಕನ್ ಅವರು ಹೊಸದಾಗಿ ಆಯ್ಕೆಗೊಂಡ ವಕ್ತಾರರು.
ಸಂಸತ್ತಿನ ಚುನಾವಣೆಯ ಹಿನ್ನಲೆಯಲ್ಲಿ, ಹೊಸ ವಕ್ತಾರರು ಅಣು ಒಪ್ಪಂದ ಹಾಗು ಇತರ ವಿಷಯಗಳ ಕುರಿತು ಪಕ್ಷದ ಸಂದೇಶವನ್ನು ದೇಶದ ಜನತೆಯತ್ತ ಹೊತ್ತೊಯ್ಯಲಿದ್ದಾರೆ.
|