ನವದೆಹಲಿ: ಎಡಪಕ್ಷಗಳು ಕೇಂದ್ರದ ಯುಪಿಎ ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿರುವ ನಿಟ್ಟಿನಲ್ಲಿ, ಸ್ಪೀಕರ್ ಸೋಮನಾಥ ಚಟರ್ಜಿ ತನ್ನ ಸ್ಥಾನ ತೊರೆಯಬೇಕು ಎಂದು ಸಿಪಿಐ(ಎಂ) ಪಕ್ಷದೊಳಗಿಂದ ಅವರು ಒತ್ತಡ ಎದುರಿಸುತ್ತಿದ್ದಾರೆ.
ಆದರೆ, ಚಟರ್ಜಿಯವರು, ತನ್ನ ಸ್ಥಾನ ರಾಜಕೀಯಕ್ಕಿಂತ ಮೇಲಿನದ್ದು ಎಂದು ಹೇಳಿದ್ದಾರೆ. ಅವರು ಭಾನುವಾರ ಕೋಲ್ಕತಾದಲ್ಲಿ, ಪಕ್ಷದ ಹಿರಿಯ ನಾಯಕ ಜ್ಯೋತಿಬಸು ಅವರನ್ನು ಭೇಟಿಯಾಗಲಿದ್ದು, ಈ ಕುರಿತು ಚರ್ಚೆ ನಡೆಸಲಿದ್ದಾರೆ.
ಸೋಮವಾರ ಅವರು ತನ್ನ ಸ್ಥಾನದಿಂದ ಕೆಳಕ್ಕಿಳಿಯಬಹುದು ಎಂಬುದಾಗಿ ಪಕ್ಷದ ಮೂಲಗಳು ಸುಳಿವು ನೀಡಿವೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಚಟರ್ಜಿಯವರ ರಾಜೀನಾಮೆ ಕುರಿತು ಪಕ್ಷವು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದರೂ, ಹೊಸ ಪರಿಸ್ಥಿತಿಗನುಗುಣವಾಗಿ ಚಟರ್ಜಿಯವರು ರಾಜೀನಾಮೆ ನೀಡಬೇಕೆಂಬುದಾಗಿ ಪಕ್ಷವು ಸಾಕಷ್ಟು ಸೂಚನೆಗಳನ್ನು ನೀಡಿದೆ ಎನ್ನಲಾಗಿದೆ.
ಚಟರ್ಜಿಯವರು ತನ್ನ ಸ್ಥಾನದಲ್ಲಿ ಮುಂದುವರಿಯಬೇಕೇ ಬೇಡವೇ ಎಂಬುದನ್ನು ತಾನೇ ನಿರ್ಧರಿಸಬೇಕು ಎಂದು ಬುಧವಾರ ಹೇಳಿದ್ದರು.
|