ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮಮಂದಿರ ಚುನಾವಣಾ ವಿಷಯವಲ್ಲ: ಬಿಜೆಪಿ  Search similar articles
ರಾಮ ಮಂದಿರವು ಪಕ್ಷದ ಪ್ರಮುಖ ಕಾರ್ಯಸೂಚಿಯಾದರೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ರಾಮಮಂದಿರವನ್ನು ಚುನಾವಣಾ ವಿಷಯವಾಗಿ ಪರಿಗಣಿಸುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ರಾಮಮಂದಿರವು ಈ ಮೊದಲು ಕೂಡಾ ಬಿಜೆಪಿಗೆ ಚುನಾವಣಾ ವಿಷಯವಾಗಿರಲಿಲ್ಲ. ಇದು ಪಕ್ಷಕ್ಕೆ ಮುಖ್ಯವಾಗಿದ್ದರೂ, ಅಯೋಧ್ಯಾದಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಂಡ ನಂತರವಷ್ಟೇ ಪಕ್ಷಕ್ಕೆ ತೃಪ್ತಿ ಉಂಟಾಗಲಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಪಕ್ಷದ ಮುಖ್ಯಸ್ಥ ರಾಮಪತಿ ತ್ರಿಪಾಟಿ ತಿಳಿಸಿದ್ದಾರೆ.

ವಾಸ್ತವವಾಗಿ, ಈ ಮೊದಲು ಇತರ ಪಕ್ಷಗಳು ರಾಮಮಂದಿರ ವಿಚಾರವನ್ನು ಚುನಾವಣಾ ವಿಚಾರವಾಗಿ ತೆಗೆದುಕೊಂಡಿದ್ದವು ಎಂದು ಅವರು ಹೇಳಿದ್ದಾರೆ.

ಈ ನಡುವೆ, ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಕೈಜೋಡಿಸುವ ಕುರಿತಾದ ಸಂಭಾವ್ಯತೆಯನ್ನು ತಳ್ಳಿಹಾಕಿದ ಅವರು, ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದು, ಜಾತಿ ರಾಜಕಾರಣ ಮಾಡುವ ಪಕ್ಷದೊಂದಿಗೆ ಕೈಜೋಡಿಸಲು ಬಿಜೆಪಿ ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಮತ್ತಷ್ಟು
ಕಾಬೂಲ್ ದಾಳಿಯಲ್ಲಿ ಐಎಸ್ಐ ಕೈವಾಡ- ಎಂ.ಕೆ
ಅಣು ಒಪ್ಪಂದ: ಕಾರಟ್-ಮಾಯಾ ಬಂಧ
ಸ್ಥಾನ ತೊರೆಯಲು ಚಟರ್ಜಿ ಮೇಲೆ ಒತ್ತಡ
ಕಾಂಗ್ರೆಸ್‌‌ಗೆ 11 ಹೊಸ ವಕ್ತಾರರು
ಅ.2ರಿಂದ ಧೂಮಪಾನಕ್ಕೆ ಕತ್ತರಿ
ಅಣುಒಪ್ಪಂದವನ್ನು ಕಸದಬುಟ್ಟಿಗೆ ಹಾಕಿ: ಜಯ