ಅದು ಮದುವೆ ಛತ್ರ. ಇನ್ನೇನು ಮದುವಣಿಗನ ದಿಬ್ಬಣ ಬರುವ ಸಮಯ. ಆದರೆ ಬೀಗರು ಬರುವ ದಾರಿಯತ್ತ ಎಲ್ಲರ ದೃಷ್ಟಿ ಹರಿದಿರಲಿಲ್ಲ; ಬದಲಿಗೆ ಆತಂಕ, ಕುತೂಹಲದಿಂದ ಎಲ್ಲರೂ ಆಕಾಶದತ್ತ ಕಣ್ಣು ನೆಟ್ಟಿದ್ದರು!
ಒರಿಸ್ಸಾದ ಮದುಮಗನೊಬ್ಬ ತನ್ನ ವಧುವನ್ನು ವರಿಸಲು ಬೆಳ್ಳಿಕುದುರೆ ಮೇಲೆ ಸಾಗಿ ಬರಲಿಲ್ಲ. ಬದಲಿಗೆ, ಹಾರಾಡುತ್ತಿದ್ದ ಹೆಲಿಕಾಫ್ಟರ್‌ನಿಂದ ಹಾರುವಮೂಲಕ ತಾನು ನಿಜವಾದ ಸಾಹಸಿ ಎಂದು ಸಾಬೀತು ಮಾಡುತ್ತಲೇ ಮದುವೆಮಂಟಪಕ್ಕೆ ಹಾರಿಬಂದ.
ಶಾಹಿದ್‌ನಗದರದಲ್ಲಿ ನಡೆದ ಈ ವಿವಾಹಕ್ಕೆ 32ರ ಹರೆಯದ ಮದುಮಗ ಶಿಶಿರ್‌ಕುಮಾರ್ ಇತರ ನಾಲ್ವರೊಂದಿಗೆ ಸ್ಕೈಡೈವ್ ಮಾಡಿ ಮಂಟಪಕ್ಕಿಳಿದ. ಇವರು ಪ್ಯಾರಾಚೂಟ್ ತೆರೆದುಕೊಳ್ಳುವ ಮುನ್ನ ಸುಮಾರು 3,500 ಅಡಿ ದೂರ ಹಾಗೆಯೇ ಮುಕ್ತವಾಗಿ ಹಾರಿದ್ದರು.
ಶಿಶಿರ್ ಜತೆ ಒರ್ವ ಜಂಪರ್ ಕಮ್ ಕ್ಯಾಮಾರ ಮ್ಯಾನ್ ಸೇರಿದಂತೆ ಒಟ್ಟು ನಾಲ್ವರು ಜಂಪರ್‌ಗಳು ಬಿಜು ಪಟ್ನಾಯಕ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಫ್ಟರ್ ಏರಿದ್ದರು. ಹೆಲಿಕಾಫ್ಟರ್ ಶಾಹಿದ್‌ನಗರ ತಲುಪುತ್ತಿರುವಂತೆ ಮದುವಣಿಗನ ದಿಬ್ಬಣ 'ಪಾರ್ಟಿ' ಹೆಕಾಫ್ಟರ್‌ನಿಂದ ಹಾರಿತು.
ಕಳೆದ 12 ವರ್ಷಗಳಿಂದ ಸ್ಕೈ ಡೈವಿಂಗ್ ಅಭ್ಯಾಸ ನಡೆಸುತ್ತಿರುವ ಶರ್ಮಾ ಅಮೆರಿಕಾದಲ್ಲಿ 15,000 ಅಡಿಗಳ ಡೈವಿಂಗ್ ಮಾಡಿದ್ದು ಲಿಮ್ಕಾ ದಾಖಲೆ ಹೊಂದಿದ್ದಾರೆ. ತನ್ನದೇ, ಮದುವೆಗೆ ಈ ರೀತಿಯ 'ದಿಬ್ಬಣ' ಬರಲು, ಈ ಕ್ರೀಡೆಯನ್ನು ರಾಜ್ಯದಲ್ಲಿ ಜನಪ್ರಿಯಗೊಳಿಸುವುದು ತನ್ನ ಉದ್ದೇಶ ಎಂದು ನೆರೆದಿದ್ದ ನೆಂಟರಿಷ್ಟರು, ಬಂಧುಮಿತ್ರರನ್ನುದ್ದೇಶಿಸಿ ಮಾತನಾಡಿದ ಶರ್ಮಾ ನುಡಿದರು.
ಸ್ಕೈ ಡೈವಿಂಗ್ ಕುರಿತು ಒರಿಸ್ಸಾದ ಹೆಚ್ಚಿನ ಮಂದಿಗೆ ತಿಳಿದಿಲ್ಲ. ತನ್ನ ಮದುವೆಯ ಮಾತುಕತೆಗಳು ಅಂತಿಮಗೊಂಡಾಗ ತಾನು ಈ ನಿರ್ಧಾರಕ್ಕೆ ಬಂದಿದ್ದೆ ಎಂದು ನುಡಿದ ಐಎಎಫ್ ಅಧಿರಕಾರಿಯಾಗಿರುವ ವರ ಶರ್ಮಾ, ಮದುವೆ ಸ್ಥಳಕ್ಕೆ ಈ ರೀತಿಯಲ್ಲಿ ಆಗಮಿಸುವುದು ಈ ಕ್ರೀಡೆಯ ಉತ್ತೇಜನಕ್ಕೆ ಅತ್ಯಂತ ಸೂಕ್ತವಾದ ರೀತಿ ಎಂದು ತಾನು ಭಾವಿಸಿರುವುದಾಗಿ ನುಡಿದರು.
ತನ್ನ ಪತಿಯ ಸಾಹಸದಿಂದ ಆನಂದ ತುಂದಿಲರಾಗಿರುವ ವಧು ಶ್ವೇತಾ ಪ್ರುಸ್ಟಿ, "ಅವರ ಅನುಭವ ತಿಳಿದಿದ್ದ ತನಗೆ ಅವರ ಚಾತುರ್ಯದ ಮೇಲೆ ಸಂಪೂರ್ಣ ವಿಶ್ವಾಸವಿತ್ತು" ಎಂದು ಹೇಳಿದ್ದಾರೆ.
ಮಧುವಣಿಗ ಸುರಕ್ಷಿತವಾಗಿ ನೆಲ ತಲುಪಿದ ಬಳಿಕ ಅವರಿಗೆ ಅದ್ದೂರಿಯ ಸ್ವಾಗತ ನೀಡಿ ಮದುವೆ ಮಂಟಪದತ್ತ ಕರೆದೊಯ್ಯಲಾಯಿತು. ಇವರನ್ನು ಆತಂಕ ಮಿಶ್ರಿತ ಕುತೂಹಲದಿಂದ ಕಾಯುತ್ತಿದ್ದವರಲ್ಲಿ ರಾಜ್ಯ ಕಂದಾಯ ಸಚಿವ ಮನ್‌ಮೋಹನ್ ಸಮಾಲ್ ಅವರೂ ಸೇರಿದ್ದರು.
ಹೀಗೆ ಆಕಾಶದಿಂದಾ ಹಾರಿ ಮಂಟಪಕ್ಕೆ ಬಂದಾ ವರ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದಾರೆ.
|