ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಟರ್ಚಿ ರಾಜೀನಾಮೆಗೆ ಬಸು ಸಲಹೆ  Search similar articles
ಕೊಲ್ಕತಾ: ತನ್ನ ಪಕ್ಷದಿಂದ ಒತ್ತಡ ಎದುರಿಸುತ್ತಿರುವ ಸ್ಪೀಕರ್ ಸೋಮನಾಥ ಚಟರ್ಜಿಯವರು ತಮ್ಮ ಸಾಂವಿಧಾನಿಕ ಪದವಿಗೆ ರಾಜೀನಾಮೆ ನೀಡುವ ಕುರಿತು ತಾವು ಇದುವರೆಗೆ ಯಾವುದೇ ನಿರ್ಧಾರ ತಳೆದಿಲ್ಲ ಎಂದು ಭಾನುವಾರ ಹೇಳಿದ್ದಾರೆ.

"ನಾನು ನಿರ್ಣಯ ತೆಗೆದುಕೊಂಡಿಲ್ಲ. ನಾನು ನಿರ್ಣಯ ಕೈಗೊಂಡಾಗ ಖಂಡಿತವಾಗಿ ನಿಮಗೆ ತಿಳಿಸುತ್ತೇನೆ. ಮಾಧ್ಯಮಗಳು ಸ್ಪೀಕರ್ ಪದವಿಯ ಕುರಿತು ಉಹಾಪೋಹಗಳಿಗೆ ಅನುವು ನೀಡಬಾರದೆಂದು ಮನವಿ ಮಾಡುತ್ತೇನೆ" ಎಂದು ಸಿಪಿಎಂ ನಾಯಕ ಜ್ಯೋತಿ ಬಸು ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಚಟರ್ಜಿ ನುಡಿದರು.

ಭೇಟಿಯ ಸಂದರ್ಭದಲ್ಲಿ ಬಸು ಅವರು 79ರ ಹರೆಯದ ಸಂಸದೀಯ ನಿಪುಣ ಚಟರ್ಜಿ ಅವರಿಗೆ ರಾಜೀನಾಮೆ ನೀಡಿ ಎಂಬರ್ಥದಲ್ಲಿ, ಪಕ್ಷದ ದಾರಿಯಲ್ಲಿ ಹೆಜ್ಜೆ ಹಾಕುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಅದಾಗ್ಯೂ, ಚಟರ್ಜಿ ಅವರು, ಬಸು ಅವರೊಂದಿಗಿನ ಭೇಟಿಯು ವೈಯಕ್ತಿಕವಾಗಿದ್ದು ಕೌಟುಂಬಿಕ ವಿಚಾರಗಳನ್ನು ಚರ್ಚಿಸಿದ್ದಾಗಿ ಹೇಳಿದ್ದಾರೆ.

ಜುಲೈ 22ರ ವಿಶ್ವಾಸ ಮತ ಯಾಚನೆಯಂದು ಅವರು ಸರಕಾರದ ಪರ ಮತ ಚಲಾಯಿಸಲಿದ್ದಾರೆ ಎಂಬ ವರದಿಗಳನ್ನು "ಕಲ್ಪಿತ ಊಹೆಗಳು" ಎಂದು ಚಟರ್ಜಿ ತಳ್ಳಿ ಹಾಕಿದ್ದಾರೆ.

ಎಡಪಕ್ಷಗಳು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಂದಿನಿಂದ ಪದವಿ ತ್ಯಜಿಸುವಂತೆ ತಮ್ಮ ಪಕ್ಷ ಸಿಪಿಎಂನಿಂದ ಚಟರ್ಜಿ ಒತ್ತಡಕ್ಕೆ ಸಿಲುಕಿದ್ದಾರೆ.

ತಮ್ಮ ಪದವಿಯಿಂದ ಕೆಳಗಿಳಿಯುವ ಬಗ್ಗೆ ಅಷ್ಟೊಂದು ಉತ್ಸುಕರಾಗಿಲ್ಲದ ಚಟರ್ಜಿ ಅವರನ್ನು ಒಲೈಸುವಂತೆ ಬಸು ಅವರಿಗೆ ಪಕ್ಷದಿಂದ ಮನವಿ ಮಾಡಲಾಗಿತ್ತು ಎನ್ನಲಾಗಿದೆ.
ಮತ್ತಷ್ಟು
ಆಕಾಶದಿಂದ ಹಾರಿ ಮಂಟಪಕ್ಕಿಳಿದ ಮಧುವಣಿಗ!
ರಾಮಮಂದಿರ ಚುನಾವಣಾ ವಿಷಯವಲ್ಲ: ಬಿಜೆಪಿ
ಕಾಬೂಲ್ ದಾಳಿಯಲ್ಲಿ ಐಎಸ್ಐ ಕೈವಾಡ- ಎಂ.ಕೆ
ಅಣು ಒಪ್ಪಂದ: ಕಾರಟ್-ಮಾಯಾ ಬಂಧ
ಸ್ಥಾನ ತೊರೆಯಲು ಚಟರ್ಜಿ ಮೇಲೆ ಒತ್ತಡ
ಕಾಂಗ್ರೆಸ್‌‌ಗೆ 11 ಹೊಸ ವಕ್ತಾರರು