ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ ವಿರುದ್ಧ ಎಡಪಕ್ಷಗಳ ಸಮರ  Search similar articles
PTI
ಯುಪಿಎ ಸರಕಾರದ "ವಚನ ಭಂಗ" ಮತ್ತು ಅಣು ಒಪ್ಪಂದದ 'ಭ್ರಾಂತಿ'ನ ಕುರಿತು ದೇಶಾದ್ಯಂತ ಪ್ರಚಾರಾಂದೋಲನ ಹಮ್ಮಿಕೊಂಡಿದೆ.

ಪ್ರಚಾರಾಂದೋನದ ವೇಳೆ ಅಣುಒಪ್ಪಂದ ಕುರಿತು ಪ್ರಸ್ತಾಪಿಸಿದ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ "ನಮ್ಮ ಸ್ವತಂತ್ರ ವಿದೇಶಿ ನೀತಿಯನ್ನು ದುರ್ಬಲಗೊಳಿಸುತ್ತಿರುವ ಸರಕಾರಕ್ಕೆ ಬೆಂಬಲ ನೀಡಲಾಗದು" ಎಂದು ತಿಳಿಸಿದ್ದಾರೆ.

ಭಾರತೀಯ ಮಾರುಕಟ್ಟೆಗೆ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳನ್ನು ಆಹ್ವಾನಿಸುತ್ತಿರುವುದರ ಬಗ್ಗೆಯೂ ಅವರು ಸರಕಾರದ ಮೇಲೆ ಟೀಕಾ ಪ್ರಹಾರ ನಡೆಸಿದರು. "ಯುಪಿಎ ಸರಕಾರ ವಾಲ್ ಮಾರ್ಟ್‌ನಂತಹ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳು ಭಾರತಕ್ಕೆ ಬರಬೇಕೆಂದು ಬಯಸುತ್ತಿದೆ" ಎಂದು ಕಾರಟ್ ಹೇಳಿದರು.

ನಾಲ್ಕು ಎಡಪಕ್ಷಗಳಾದ, ಸಿಪಿಎಂ, ಸಿಪಿಐ, ಆರ್‌ಎಸ್ಪಿ, ಮತ್ತು ಫಾರ್‌ವರ್ಡ್ ಬ್ಲಾಕ್‌ಗಳು ತಾವು ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದುದಕ್ಕೆ ಪ್ರೇರಕ ಅಂಶಗಳು ಮತ್ತು ತಾವು ಅಣು ಒಪ್ಪಂದವನ್ನು ವಿರೋಧಿಸುತ್ತಿರುವುದಕ್ಕೆ ಕಾರಣಗಳನ್ನು ಜನರಿಗೆ ಮನದಟ್ಟು ಮಾಡಲಿವೆ.

ಬೆಲೆ ಏರಿಕೆ, ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಿರುವುದು ಮತ್ತು ಕುರಿತು ವಚನ ಬಾಹಿರರಾಗಿರುವುದು ಮುಂತಾದವುಗಳನ್ನು ಒಳಗೊಂಡಂತೆ ಯುಪಿಎ ಸರಕಾರದ ಕುಂದು ಕೊರತೆಗಳು ಮತ್ತು ವಿಫಲತೆಗಳನ್ನು ಎಡಪಕ್ಷಗಳ ಹಿರಿಯ ನಾಯಕರು ಸಭೆಗಳಲ್ಲಿ ವಿವರಿಸಲಿದ್ದಾರೆ.
ಮತ್ತಷ್ಟು
ಚಟರ್ಚಿ ರಾಜೀನಾಮೆಗೆ ಬಸು ಸಲಹೆ
ಆಕಾಶದಿಂದ ಹಾರಿ ಮಂಟಪಕ್ಕಿಳಿದ ಮದುವಣಿಗ!
ರಾಮಮಂದಿರ ಚುನಾವಣಾ ವಿಷಯವಲ್ಲ: ಬಿಜೆಪಿ
ಕಾಬೂಲ್ ದಾಳಿಯಲ್ಲಿ ಐಎಸ್ಐ ಕೈವಾಡ- ಎಂ.ಕೆ
ಅಣು ಒಪ್ಪಂದ: ಕಾರಟ್-ಮಾಯಾ ಬಂಧ
ಸ್ಥಾನ ತೊರೆಯಲು ಚಟರ್ಜಿ ಮೇಲೆ ಒತ್ತಡ