ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ ವಿಶ್ವಾಸಮತ ಗೆಲ್ಲಲಿದೆ: ಪ್ರಧಾನಿ  Search similar articles
PTI
ಜುಲೈ 22ರಂದು ಸರಕಾರದ ವಿಶ್ವಾಸಮತ ಯಾಚನೆಯ ವೇಳೆ ತಮ್ಮತ್ತ ಬೆಂಬಲವನ್ನು ಒಟ್ಟುಗೂಡಿಸಲು ಸರಕಾರ ಮತ್ತು ವಿರೋಧ ಪಕ್ಷದ ಪಡೆಗಳಲ್ಲಿ ನಡೆಯುತ್ತಿರುವ ಬಿಡುವಿಲ್ಲದ ರಾಜಕೀಯ ಕಸರತ್ತುಗಳ ನಡುವೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ತಮ್ಮ ಸರಕಾರ ವಿಶ್ವಾಸಮತ ಗೆಲ್ಲಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಸಂಪಾದಕರ ಸಮೂಹವನ್ನು ಭೇಟಿಯಾಗಿ ಮಾತನಾಡುತ್ತಿದ್ದ ಆತ್ಮವಿಶ್ವಾಸ ಭರಿತ ಪ್ರಧಾನಿ, ಅಣು ಒಪ್ಪಂದದ ಭವಿಷ್ಯವನ್ನು ನಿರ್ಧರಿಸಲಿರುವ ವಿಶ್ವಾಸ ಮತವನ್ನು ಗಳಿಸಿಕೊಳ್ಳುವಷ್ಟು ಸಂಖ್ಯಾಬಲವನ್ನು ಯುಪಿಎ ಸರಕಾರ ಹೊಂದಿದೆ ಎಂದು ನುಡಿದರು.

ಬಹಳಷ್ಟು ಜನರು ಭಯ ವ್ಯಕ್ತಪಡಿಸುತ್ತಿರುವಂತೆ ಅಣುಒಪ್ಪಂದವು ಭಾರತದ ಸ್ವತಂತ್ರ ವಿದೇಶಿ ನೀತಿ ಅಥವಾ ರಕ್ಷಣಾ ತಂತ್ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಡಾ.ಸಿಂಗ್ ಹೇಳಿದರು.

"ಭಾರತ ತನ್ನ ಸ್ವತಂತ್ರ ವಿದೇಶಿ ನೀತಿಯ ನಿರ್ವಹಣೆಯಲ್ಲಿ ಬಾಹ್ಯ ಹಸ್ತಕ್ಷೇಪವನ್ನು ಸಹಿಸುವುದಿಲ್ಲ, ಐಎಇಎ ಜೊತೆಗಿನ ಸುರಕ್ಷತಾ ಒಪ್ಪಂದ ಭಾರತದ ರಕ್ಷಣಾ ಯೋಜನೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ" ಎಂದೂ ಅವರು ಸೇರಿಸಿದರು.

ಅಣುಒಪ್ಪಂದ ಎಲ್ಲಾ ಅಡಚಣೆಗಳನ್ನು ನಿವಾರಿಸಿಕೊಂಡು ಮುಂದುವರಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಪ್ರಧಾನಿ, ಅಮೆರಿಕದ ಪರಮಾಣು ವರ್ಣಭೇದನೀತಿಯು ಇದರಿಂದ ಕೊನೆಗೊಳ್ಳಲಿದೆ ಎಂದು ಪುನರಾವರ್ತಿಸಿದರು.
ಮತ್ತಷ್ಟು
ಉದ್ದಿಮೆಗಳ ಯದ್ಧದಲ್ಲಿ ಪಿಎಂ ಮಧ್ಯಪ್ರವೇಶ ಇಲ್ಲ
ಚಟರ್ಜಿಯವರದ್ದು ಪಕ್ಷರಹಿತ ಹುದ್ದೆ: ಕಾಂಗ್ರೆಸ್
ಯುಪಿಎಯಿಂದ ಸಂಸದರ ಖರೀದಿ: ಬರ್ದನ್
ಕಾಂಗ್ರೆಸ್ ಬೇಕು, ಮನ್‌ಮೋಹನ್ ಬೇಡ!
ಯುಪಿಎ ವಿರುದ್ಧ ಎಡಪಕ್ಷಗಳ ಸಮರ
ಚಟರ್ಚಿ ರಾಜೀನಾಮೆಗೆ ಬಸು ಸಲಹೆ