ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸಮತದ ತನಕ ಮುಂದುವರಿಯುವೆ: ಚಟರ್ಜಿ  Search similar articles
PTI
ತನ್ನ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಕ್ಷದೊಳಗಿಂದ ಒತ್ತಡ ಎದುರಿಸುತ್ತಿರುವ ಸಿಪಿಐ(ಎಂ)ನ ಸೋಮನಾಥ ಚಟರ್ಜಿ, ಸಂಸತ್ತಿನಲ್ಲಿ ಯುಪಿಎ ಸರಕಾರವು ವಿಶ್ವಾಸಮತ ಎದುರಿಸುವ ಜುಲೈ 22ರ ತನಕ ತನ್ನ ಸ್ಥಾನದಲ್ಲಿ ಮುಂದುವರಿಯಲು ಇಚ್ಚಿಸುವುದಾಗಿ ಮಂಗಳವಾರ ಹೇಳಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರಿಗೆ ಬರೆದಿರುವ ಪತ್ರದಲ್ಲಿ, ತಾನು ಬಿಜೆಪಿಯೊಂದಿಗೆ ಸರಕಾರದ ವಿರುದ್ಧವಾಗಿ ಮತಚಲಾಯಿಸುವುದರ ಕುರಿತು ಒಲವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತನ್ನ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಡ ಹೇರಿದಲ್ಲಿ, ತಾನು ಲೋಕಸಭಾ ಸದಸ್ಯತ್ವವನ್ನೇ ತ್ಯಜಿಸುವುದಾಗಿ ಚಟರ್ಜಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿತ್ತು.

ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದು ಚಟರ್ಜಿಯವರಿಗೆ ಬಿಟ್ಟ ವಿಚಾರ ಎಂದು ಯುಪಿಎ ಸರಕಾರದಿಂದ ಬೆಂಬಲ ಹಿಂತೆಗೆಯುವ ವೇಳೆಗೆ ಪ್ರಕಾಶ್ ಕಾರಟ್ ಹೇಳಿದ್ದರು. ರಾಷ್ಟ್ರಪತಿಯವರಿಗೆ ನೀಡಲಾಗಿರುವ ಎಡಪಕ್ಷಗಳ 60 ಸಂಸದರ ಪಟ್ಟಿಯಲ್ಲಿ ಚಟರ್ಜಿಯವರ ಹೆಸರೂ ಸೇರಿತ್ತು. ಆದರೆ, ಆ ಸಂದರ್ಭದಲ್ಲಿ ಚಟರ್ಜಿಯವರೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿರಲಿಲ್ಲ ಎಂದು ಹೇಳಲಾಗಿದೆ.

ಸ್ಪೀಕರ್ ಸ್ಥಾನದಲ್ಲಿ ಮುಂದುವರಿಯುವ ವಿವಾದದ ಕುರಿತು ಚಟರ್ಜಿ ಪಕ್ಷದ ಹಿರಿಯ ನಾಯಕ ಜ್ಯೋತಿಬಸು ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದರು.
ಮತ್ತಷ್ಟು
ಸಚಿವ ಪಟ್ಟ ಮರಳಿಸಿ; ಸರಕಾರ ಉಳಿಸಿ: ಶಿಬು
ಯುಪಿಎ ವಿಶ್ವಾಸಮತ ಗೆಲ್ಲಲಿದೆ: ಪ್ರಧಾನಿ
ಉದ್ದಿಮೆಗಳ ಯದ್ಧದಲ್ಲಿ ಪಿಎಂ ಮಧ್ಯಪ್ರವೇಶ ಇಲ್ಲ
ಚಟರ್ಜಿಯವರದ್ದು ಪಕ್ಷರಹಿತ ಹುದ್ದೆ: ಕಾಂಗ್ರೆಸ್
ಯುಪಿಎಯಿಂದ ಸಂಸದರ ಖರೀದಿ: ಬರ್ದನ್
ಕಾಂಗ್ರೆಸ್ ಬೇಕು, ಮನ್‌ಮೋಹನ್ ಬೇಡ!