ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎಗೆ ಬೆಂಬಲ ಅಸಾಧ್ಯ : ದೇವೇಗೌಡ  Search similar articles
ಕಾಂಗ್ರೆಸ್ ಪಕ್ಷವು ಜೆಡಿ(ಎಸ್‌)ಗೆ ಹಿಂಸೆ ಮತ್ತು ಅವಮಾನ ಮಾಡಿದೆ ಎಂದು ಆಪಾದಿಸಿರುವ ಮಾಜಿ ಪ್ರಧಾನಿ ಎಚ್‌ಡಿ.ದೇವೇಗೌಡ, ಲೋಕಸಭಾದಲ್ಲಿರುವ ತನ್ನ ಮೂರು ಸದಸ್ಯರ ಪಕ್ಷವು ವಿಶ್ವಾಸಮತದ ವೇಳೆ ಯುಪಿಎ ಸರಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂಬ ಸುಳಿವು ನೀಡಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಜೆಡಿ(ಎಸ್)ನ್ನು ನಾಶಮಾಡಲು ಪ್ರಯತ್ನಿಸಿವೆ. ಈ ಎರಡೂ ಪಕ್ಷಗಳಿಂದ ಅವಮಾನ, ಹಿಂಸೆ ಮತ್ತು ಅನೇಕ ಸುಳ್ಳು ಆರೋಪಗಳನ್ನು ಕೂಡಾ ಜೆಡಿಎಸ್ ಎದುರಿಸಿದೆ ಎಂದು ದೇವೇಗೌಡ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಧೋರಣೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಅವರು, ಜೆಡಿ(ಎಸ್)ನ್ನು ನಿರ್ನಾಮ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿ ನೀಚ ರಾಜಕಾರಣಕ್ಕಿಳಿದಿದೆ ಎಂದು ಆರೋಪಿಸಿದರು.

ಏನೇ ಆದರೂ, ವಿಶ್ವಾಸಮತದ ವೇಳೆ ಬೆಂಬಲ ನೀಡುವ ಕುರಿತಾದಿ ಜುಲೈ 18ಕ್ಕೆ ಬೆಂಗಳೂರಿನಲ್ಲಿ ನಡೆಯಲಿರುವ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಅಡ್ವಾಣಿಗೆ 'ದಲಾಲ್' ಧನ್ಯವಾದ
ವಿಶ್ವಾಸಮತದ ತನಕ ಮುಂದುವರಿಯುವೆ: ಚಟರ್ಜಿ
ಸಚಿವ ಪಟ್ಟ ಮರಳಿಸಿ; ಸರಕಾರ ಉಳಿಸಿ: ಶಿಬು
ಯುಪಿಎ ವಿಶ್ವಾಸಮತ ಗೆಲ್ಲಲಿದೆ: ಪ್ರಧಾನಿ
ಉದ್ದಿಮೆಗಳ ಯದ್ಧದಲ್ಲಿ ಪಿಎಂ ಮಧ್ಯಪ್ರವೇಶ ಇಲ್ಲ
ಚಟರ್ಜಿಯವರದ್ದು ಪಕ್ಷರಹಿತ ಹುದ್ದೆ: ಕಾಂಗ್ರೆಸ್