ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಖ್ಯಾ ಅಟ: ಸಣ್ಣಸಣ್ಣ ಪಕ್ಷಗಳ ದೊಡ್ಡದೊಡ್ಡ ಬೇಡಿಕೆ  Search similar articles
PTI
ಕೇಂದ್ರದ ಯುಪಿಎ ಸರಕಾರಕ್ಕೆ ಎಡಪಕ್ಷಗಳು ನೀಡಿರುವ ಬೆಂಬಲವನ್ನು ಹಿಂತೆಗೆದುಕೊಂಡಿರುವ ಹಿನ್ನೆಲೆಯಲ್ಲಿ, ಜು.22ರಂದು ಸಂಸತ್ತಿನಲ್ಲಿ ಸರಕಾರ ವಿಶ್ವಾಸಮತ ಕೋರುವ ವೇಳೆಗೆ ಬಹುಮತ ಸಾಬೀತು ಪಡಿಸುವ ಕುರಿತು ಕಾಂಗ್ರೆಸ್ ವಿಶ್ವಾಸದಿಂದ ಇದ್ದರೂ, ಸಂಖ್ಯಾ ಆಟದ ಹಿನ್ನೆಲೆಯಲ್ಲಿ ಚಿಕ್ಕಪುಟ್ಟ ಪಕ್ಷಗಳು ತಮ್ಮ 'ಬೆಲೆ'ಯನ್ನು ಅರಿತುಕೊಂಡಿದ್ದು, ಬೇಳೆ ಬೇಯಿಸಿಕೊಳ್ಳುವ ಹುನ್ನಾರದಲ್ಲಿವೆ.ಏಕಾಏಕಿ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಇದು ತಮ್ಮ ಕಾಲ ಎಂದು ಅರಿತಿರುವ ಸ್ವತಂತ್ರ ಮತ್ತು ಸಣ್ಣಪಕ್ಷಗಳು ಗಾಳಿಬಂದಾಗ ತೂರಿಕೊಳ್ಳಲು ಹವಣಿಸುತ್ತಿವೆ.

ಸರಕಾರ ವಿಶ್ವಾಸಮತ ಗೆಲ್ಲಲು 272 ಮತಗಳ ಅಗತ್ಯವಿದ್ದು, ಇದೀಗ 260 ಮತಗಳನ್ನು ಹೊಂದಿದೆ. ಇದಕ್ಕೆ ಇನ್ನು 12 ಮತಗಳ ಅಗತ್ಯವಿದೆ. ಲೋಕಸಭಾ ಸದಸ್ಯರಲ್ಲಿ ಕೆಲವರು ಇದೀಗಾಲೇ ಬೆಂಬಲ ಘೋಷಿಸಿದ್ದರೆ, ಇನ್ನೂ ಕೆಲವು ಪಕ್ಷಗಳು ಬೆಂಬಲ ನೀಡಲಾರೆವು ಎಂಬ ಕುರಿತು ಸ್ಪಷ್ಟಪಡಿಸಿವೆ. 22 ಮತಗಳು ಇನ್ನೂ ಅನಿಶ್ಚಿತತೆಯಲ್ಲಿವೆ. ಈ 22ರಲ್ಲಿ ತನಗೆ ಬೇಕಿರುವ 12 ಮತಗಳನ್ನು ಒಲಿಸಿಕೊಳ್ಳುವುದು ಸರಕಾರಕ್ಕೆ ಭಾರೀ ದುಬಾರಿಯಾಗಿವೆ.

ಮೂರು ಲೋಕಸಭಾ ಸದಸ್ಯರನ್ನು ಹೊಂದಿರುವ ಜಾರ್ಖಂಡ್ ಮುಕ್ತಿ ಮೋರ್ಛಾದ ನಾಯಕ, ಮಾಜಿ ಕಲ್ಲಿದ್ದಲು ಸಚಿವ ಶಿಬುಸೊರೇನ್ ಸಂಪುಟ ಸಚಿವ ಸ್ಥಾನದ ಮೇಲೆ ಕಣ್ಣಿರಿಸಿದ್ದಾರೆ. ಕ್ರಿಮಿನಲ್ ಆರೋಪದ ಹಿನ್ನೆಲೆಯಲ್ಲಿ ಸಿಂಗ್ ಸಂಪುಟದಿಂದ ತನ್ನ ಸಚಿವ ಸ್ಥಾನ ಕಳೆದುಕೊಂಡ ಶಿಬು, ಇದೀಗ ಪರಿಸ್ಥಿತಿಯನ್ನು ಬಳಸಿಕೊಂಡು ಮತ್ತೆ ಸಚಿವರಾಗಲು ಬಯಸಿದ್ದಾರೆ.

ಅಂತೆಯೇ ಮೂರು ಸಂಸದರನ್ನು ಹೊಂದಿರುವ ರಾಷ್ಟ್ರೀಯ ಲೋಕದಳ ನಾಯಕ ಅಜಿತ್ ಸಿಂಗ್ ಸಹ ಕೇಂದ್ರ ಸಂಪುಟದ ಮೇಲೆ ಕಣ್ಣಿರಿಸಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ನಾಯಕ ಚಂದ್ರಶೇಖರ್ ರಾವ್, ಅವರು ಪ್ರತ್ಯೇಕ ತೆಲಂಗಾಣ ರಾಜ್ಯದ ಕುರಿತು ಕೇಂದ್ರ ಸ್ಪಷ್ಟ ಭರವಸೆ ನೀಡಬೇಕು ಎಂಬ ಪಟ್ಟು ಹಿಡಿದಿದ್ದಾರೆ.

ಮೂರು ಸೀಟುಗಳನ್ನು ಹೊಂದಿರುವ ಜನತಾದಳದ ಮುಖ್ಯಸ್ಥ ದೇವೇಗೌಡ, ಕರ್ನಾಟಕದಲ್ಲಿ ಖಚಿತ ಸ್ಥಾನ ಹಂಚಿಕೆ ಸೂತ್ರವನ್ನು ಬಯಸುತ್ತಿದ್ದಾರೆ. ಮುಂಬರುವ ಉಪಚುನಾವಣೆಯ ತಂತ್ರ ಅವರ ಬೇಡಿಕೆ.

ತಾವೇನು ಕಮ್ಮಿಯಿಲ್ಲ ಎಂಬಂತೆ, ಸ್ವತಂತ್ರರು ಒಂದೋ ತಮ್ಮನ್ನು ಸಚಿವರಾಗಿಸಿ, ಇಲ್ಲ ಮುಂದಿನ ಚುನಾವಣೆಗೆ ಟಿಕೆಟ್ ಗ್ಯಾರಂಟಿ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ.

ಹೇಗಾದರೂ ಮಾಡಿ ಅಣುಒಪ್ಪಂದದಲ್ಲಿ ಮುಂದುವರಿಯಲು ಥಕಧಿಮಿ ಅನ್ನುತ್ತಿರುವ ಕಾಂಗ್ರೆಸ್, ಇಂತಹ ಅಸಾಧ್ಯ ಬೇಡಿಕೆಗಳನ್ನೂ ಪರಿಗಣಿಸುತ್ತಿದೆ ಎಂಬ ಅಂಶವನ್ನು ಒಪ್ಪಿಕೊಂಡಿದೆ. "ಕೆಲವು ಪ್ರಾದೇಶಿಕ ಕಾಳಜಿಗಳಿವೆ. ಇದನ್ನು ಡೀಲ್ ಎಂಬುದಾಗಿ ಪರಿಗಣಿಸುವಂತಿಲ್ಲ. ಇದು ಕೊಡುಕೊಳ್ಳುವಿಕೆಯ ವ್ಯವಹಾರ ಎಂಬುದಾಗಿ" ಕಾಂಗ್ರೆಸ್ ವಕ್ತಾರ ಮನಿಶ್ ತಿವಾರಿ ಹೇಳಿದ್ದಾರೆ.

ಶಿರೋಮಣಿ ಅಕಾಲಿದಳವು ಸಿಖ್ ಪ್ರಧಾನಿಯನ್ನು ಬೆಂಬಲಿಸಬಹುದು ಎಂಬು ಆಸೆ ಹೊಂದಿದ್ದ ಯುಪಿಎಗೆ ನಿರಾಸೆಯಾಗಿದೆ. ಅಕಾಲಿದಳವು ಎನ್‌ಡಿಎಯೊಂದಿಗೆ ಸರಕಾರದ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿದೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಜಮ್ಮು ಕಾಶ್ಮೀರದ ಉಸ್ತುವಾರಿ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್ ಅವರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷವನ್ನು ಓಲೈಸುತ್ತಿದ್ದರೂ ಅದು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಸಂಸತ್ತಿನ ಅತಿದೊಡ್ಡ ಪಕ್ಷವು ಭಾರತ-ಅಮೆರಿಕ ಅಣುಒಪ್ಪಂದದ ಒಳಿತುಗಳನ್ನು ಜಪಿಸುತ್ತಿದ್ದರೂ, ಇದಕ್ಕಾಗಿ ಸಣ್ಣಪುಟ್ಟ ಪಕ್ಷಗಳ ಬಳಿ ಮಂಡಿಯೂರಿ ಬೇಡಿಕೊಳ್ಳಬೇಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಮತ್ತಷ್ಟು
ಯುಪಿಎಗೆ ಬೆಂಬಲ ಅಸಾಧ್ಯ : ದೇವೇಗೌಡ
ಅಡ್ವಾಣಿಗೆ 'ದಲಾಲ್' ಧನ್ಯವಾದ
ವಿಶ್ವಾಸಮತದ ತನಕ ಮುಂದುವರಿಯುವೆ: ಚಟರ್ಜಿ
ಸಚಿವ ಪಟ್ಟ ಮರಳಿಸಿ; ಸರಕಾರ ಉಳಿಸಿ: ಶಿಬು
ಯುಪಿಎ ವಿಶ್ವಾಸಮತ ಗೆಲ್ಲಲಿದೆ: ಪ್ರಧಾನಿ
ಉದ್ದಿಮೆಗಳ ಯದ್ಧದಲ್ಲಿ ಪಿಎಂ ಮಧ್ಯಪ್ರವೇಶ ಇಲ್ಲ