ಕಾಂಗ್ರೆಸ್ ಕುದುರೆ ವ್ಯಾಪಾರಕ್ಕಿಳಿದಿದೆ ಎಂಬುದಾಗಿ ಸಿಪಿಐ ನಾಯಕ ಎ.ಬಿ.ಬರ್ದನ್ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಇದಕ್ಕೆ ಪುರಾವೆ ಒದಗಿಸುವಂತೆ ಸವಾಲು ಹಾಕಿದೆ.
ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಬರ್ದನ್ ತನ್ನ ಹೇಳಿಕೆಗೆ ಸಾಕ್ಷಿ ನೀಡಲಿ ಎಂದಿದ್ದಾರೆ.
ಏತನ್ಮಧ್ಯೆ, ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಹೇಳಿದ್ದರೂ, ವಿಶ್ವಾಸ ಮತದ ಹಿನ್ನೆಲೆಯಲ್ಲಿ ರಾಜಕೀಯ ಚೌಕಾಶಿಗಳು ನಡೆಯುತ್ತಿವೆ ಎಂದು ಒಪ್ಪಿಕೊಂಡಿದೆ.
"ನಾವು 50 ಕೋಟಿ ಬೆಲೆಬಾಳುತ್ತೇವೆಂದು ತಮಗೆ ಗೊತ್ತಿರಲಿಲ್ಲ" ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಲ ಕುದುರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
|