ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರಿಂದ ಖ್ಯಾತನಾಮರ ಮೊಬೈಲ್ ಬಳಕೆ  Search similar articles
ಜಮ್ಮು: ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿರುವ ಉಗ್ರರು ಪ್ರಸಿದ್ದ ವ್ಯಕ್ತಿಗಳ ಸೆಲ್ ಫೋನ್‌ಗಳನ್ನು ಉಪಯೋಗಿಸುತ್ತಿದ್ದಾರೆ, ಇದರಲ್ಲಿ ಮಾಜಿ ಶಾಸಕರು ಸೇರಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ. ಪಾಕಿಸ್ತಾನಿ ಮೂಲದ ಕೇಂದ್ರ ಕಾರ್ಯಾಲಯಗಳೊಂದಿಗೆ ಸಂವಹನ ನಡೆಸುವುದು ಮತ್ತು ಅವರಿಂದ ಆದೇಶಗಳನ್ನು ಸ್ವೀಕರಿಸಲು ಭೂಗತರಲ್ಲದ ಉಗ್ರರು ಇಂತಹ ಮೊಬೈಲುಗಳನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ.

"ಉಗ್ರವಾದಿ ಮುಖಂಡರು, ಒರ್ವ ಮಾಜಿ ಶಾಸಕ ಸೇರಿದಂತೆ, 51 ವ್ಯಕ್ತಿಗಳ ಸೆಲ್ ಪೋನ್‌ಗಳನ್ನು ಪಾಕ್ ಮೂಲದ ಕೇಂದ್ರ ಕಾರ್ಯಾಲಯಗಳು ಹಾಗು ಜಮ್ಮು-ಕಾಶ್ಮೀರದಲ್ಲಿರುವ ಇತರ ಮುಖಂಡರೊಡನೆ ಸಂಭಾಷಿಸಲು ಉಪಯೋಗಿಸಿದ್ದಾರೆ.
ಈ ಸೆಲ್ ಫೋನ್‌ಗಳು ಸೂಕ್ಷ್ಮ ಪರಿಶೀಲನೆಯಲ್ಲಿವೆ," ಎಂದು ಅನಾಮಧೇಯವಾಗಿ ಉಳಿಯಲು ಬಯಸಿರುವ ಗುಪ್ತಚರ ಸಂಸ್ಥೆಯ ಹಿರಿಯ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಉಗ್ರರು ತಮ್ಮ ಸಂದೇಶಗಳನ್ನು ಮತ್ತು ಕಾರ್ಯಗಳನ್ನು ಮುಂದಕ್ಕೆ ಸಾಗಿಸಲು ಮೊಬೈಲ್ ಜಾಲ ಕೇಂದ್ರಿತ ಸಂವಹನ ನಡೆಸುತ್ತಿರುವುದು ಅದರಲ್ಲೂ ನಿರ್ದಿಷ್ಟವಾಗಿ ಗ್ರಾಮದ ಮುಖ್ಯಸ್ಥರು ಮತ್ತು ಸರಪಂಚರಂತಹ ಪ್ರಮುಖ ವ್ಯಕ್ತಿಗಳ ಮೊಬೈಲ್‌ಗಳನ್ನು ಬಳಸುತ್ತಿರುವುದು ಗಂಭೀರ ವಿಷಯವಾಗಿದೆ," ಎಂದ ನುಡಿದ ಅವರು, ಉಗ್ರವಾದಿ ಮುಖಂಡರು ಉಪಯೋಗಿಸುತ್ತಿರುವ ಮೊಬೈಲ್ ನಂಬರು ಸೇರಿದಂತೆ ಈ ಬಗ್ಗೆ ವಿಸ್ತೃತ ವರದಿಯನ್ನು ತಯಾರಿಸಲಾಗಿದೆ ಎಂದೂ ತಿಳಿಸಿದರು.

ವರದಿಯ ಪ್ರಕಾರ ಗುಪ್ತಚರ ಸಂಸ್ಥೆ ಒದಗಿಸಿದ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿ, ಸಂಗ್ರಹಿಸಲಾದ ಕರೆ ವಿವರಗಳಿಂದ ಉಗ್ರರು ತಮ್ಮ ಭೂಗತರಲ್ಲದ ಕಾರ್ಯಕರ್ತರ 'ಉಗ್ರವಾದಿ-ಮೊಬೈಲ್-ಸಂವಹನ-ಜಾಲ'ದ ಮೂಲವನ್ನು ವಿಸ್ತರಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂಬುದು ತಿಳಿದು ಬಂದಿದೆ.

"ಈ ಜಾಲವನ್ನು ವಿಸ್ತರಿಸಲಾಗುತ್ತಿದೆ ಮತ್ತು ಪ್ರಮುಖವಾಗಿ ಜಮ್ಮು-ಕಾಶ್ಮೀರದ ರಜೌರಿ, ರಿಯಾಸಿ, ಡೋಡಾ ಮತ್ತು ಉಧಮ್‌ಪುರ್ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸುಲಾಗುತ್ತಿದೆ," ಎಂದು ಆಧಿಕಾರಿ ತಿಳಿಸಿದ್ದಾರೆ.

ಹಿಜ್ಬುಲ್ ಮುಜಾಹಿದ್ದಿನ್‌(ಎಚ್‌.ಎಂ)ನ ಜಿಲ್ಲಾ ಮುಖಂಡನಾಗಿರುವ ಫಾರೂಖ್ ಅಹಮದ್ ನಾಯ್ಕ್ ಅಲಿಯಾಸ್ ಇಮ್ರಾನ್ ಲಾಡೊ ಮಾಜಿ ಶಾಸಕರೊಬ್ಬರ ಮೊಬೈಲ್‌ನಲ್ಲಿ ಮೂರು ಬಾರಿ ಕರೆಗಳನ್ನು ಸ್ವೀಕರಿಸಿದ್ದಾನೆ ಎಂದು ತಿಳಿಸಿದ ಅವರು ಮಾಜಿ ಶಾಸಕನ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಗುಪ್ತಚರ ಘಟಕವು ಸಂವಾದದ ವಿವರಗಳನ್ನು ಸಂಗ್ರಹಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದೆ ಮತ್ತು ಆ ಮೊಬೈಲುಗಳ ಮೇಲೆ ಲಕ್ಷ್ಯವಿರಿಸಲಾಗಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಸಾಕ್ಷಿ ನೀಡಿ: ಬರ್ದನ್‌ಗೆ ಕಾಂಗ್ರೆಸ್ ತಿರುಗೇಟು
ಸಂಖ್ಯಾ ಅಟ: ಸಣ್ಣಸಣ್ಣ ಪಕ್ಷಗಳ ದೊಡ್ಡದೊಡ್ಡ ಬೇಡಿಕೆ
ಯುಪಿಎಗೆ ಬೆಂಬಲ ಅಸಾಧ್ಯ : ದೇವೇಗೌಡ
ಅಡ್ವಾಣಿಗೆ 'ದಲಾಲ್' ಧನ್ಯವಾದ
ವಿಶ್ವಾಸಮತದ ತನಕ ಮುಂದುವರಿಯುವೆ: ಚಟರ್ಜಿ
ಸಚಿವ ಪಟ್ಟ ಮರಳಿಸಿ; ಸರಕಾರ ಉಳಿಸಿ: ಶಿಬು