ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಪೀಕರ್ ಚಟರ್ಜಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆಯೇ?  Search similar articles
PTI
ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು ಜುಲೈ 21-22ರ ಅಧಿವೇಶನದ ಬಳಿಕ ತನ್ನ ಸ್ಪೀಕರ್ ಸ್ಥಾನ, ಸಂಸತ್ ಸದಸ್ಯತ್ವ ಹಾಗೂ ಪಕ್ಷದ ಸದಸ್ಯತ್ವವನ್ನು ತೊರೆಯಲಿದ್ದಾರೆಯೇ?

ಚಟರ್ಜಿಯವರ ಹತ್ತಿರದ ಮೂಲಗಳು ಈ ಸಾಧ್ಯತೆಯ ಸುಳಿವು ನೀಡಿರುವುದಾಗಿ ಸಿಎನ್ಎನ್-ಐಬಿಎನ್ ವರದಿ ಮಾಡಿದೆ.

ಸಿಪಿಐ-ಎಂನ ಹಿರಿಯ ನಾಯಕ ಜ್ಯೋತಿ ಬಸು ಅವರು ಮಾತ್ರ ಚಟರ್ಜಿಯವರ ಮೇಲೆ ಪ್ರಭಾವ ಬೀರಲು ಸಾಧ್ಯವಿದ್ದು, ಅವರು ಹೇಳಿದ್ದಲ್ಲಿ ಮಾತ್ರ ಚಟರ್ಜಿ, ವಿಶ್ವಾಸಮತಯಾಚನೆಯಂದು ಅಧ್ಯಕ್ಷತೆ ವಹಿಸಲಾರರು ಎಂದು ಮೂಲಗಳು ಹೇಳಿವೆ.

ಇದಲ್ಲದೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರಿಗೆ ಬರೆದಿರುವ ಪತ್ರದಲ್ಲಿ ತಾನು ಹೋರಾಟ ಮಾಡದೆ ತನ್ನ ಸ್ಥಾನವನ್ನು ಬಿಟ್ಟುಕೊಡಲಾರೆ ಎಂದು ಹೇಳಿದ್ದಾರೆನ್ನಲಾಗಿದೆ. ಅಲ್ಲದೆ, ತಾನು ಬಿಜೆಪಿ ಜತೆ ಸೇರಿ ಸರಕಾರದ ವಿರುದ್ಧ ಮತಚಲಾಯಿಸಲಾರೆ ಎಂದೂ ಚಟರ್ಜಿ ಹೇಳಿದ್ದಾರೆ.
ಮತ್ತಷ್ಟು
ಉಗ್ರರಿಂದ ಖ್ಯಾತನಾಮರ ಮೊಬೈಲ್ ಬಳಕೆ
ಸಾಕ್ಷಿ ನೀಡಿ: ಬರ್ದನ್‌ಗೆ ಕಾಂಗ್ರೆಸ್ ತಿರುಗೇಟು
ಸಂಖ್ಯಾ ಅಟ: ಸಣ್ಣಸಣ್ಣ ಪಕ್ಷಗಳ ದೊಡ್ಡದೊಡ್ಡ ಬೇಡಿಕೆ
ಯುಪಿಎಗೆ ಬೆಂಬಲ ಅಸಾಧ್ಯ : ದೇವೇಗೌಡ
ಅಡ್ವಾಣಿಗೆ 'ದಲಾಲ್' ಧನ್ಯವಾದ
ವಿಶ್ವಾಸಮತದ ತನಕ ಮುಂದುವರಿಯುವೆ: ಚಟರ್ಜಿ