ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಂದ್ರ ನೌಕರರಿಗೆ ಶೇ.5 ತುಟ್ಟಿಭತ್ಯೆ ಹೆಚ್ಚಳ  Search similar articles
ನವದೆಹಲಿ: ಸರಕಾರವು ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.5ರಷ್ಟು ಹೆಚ್ಚಳ ಮಾಡಿದೆ. ತಮ್ಮ ಜೀವನ ವೆಚ್ಚವನ್ನು ಭರಿಸುವಲ್ಲಿ ಸಹಾಯವಾಗುವ ನಿಟ್ಟಿನಲ್ಲಿ ಈ ಏರಿಕೆ ಮಾಡಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಇದರಿಂದಾಗಿ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆ(ಸಿಪಿಎಸ್ಇ)ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ಇನ್ನು ಮುಂದೆ ಶೇ84.4 ತುಟ್ಟಿ ಭತ್ಯೆ ಪಡೆಯಲಿದ್ದಾರೆ. ಈ ಏರಿಕೆಯು ಜುಲೈ ಒಂದಿರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ.

ಸಿಪಿಎಸ್ಇಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಳು ಈ ಹಿಂದೆ ತಮ್ಮ ಮೂಲ ವೇತನದ ಶೇ.79.4ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದರು.

ಸಾರ್ವಜನಿಕ ಉದ್ದಿಮೆಗಳ ಸ್ಥಾಯಿ ಸಮಿತಿಯ ಪ್ರಕಾರ, ಇದರಿಂದಾಗಿ ಕೇಂದ್ರದ ಸಾರ್ವಜನಿಕ ಸೇವೆಯಲ್ಲಿರುವ ಎಲ್ಲಾ ಮಂಡಳಿ ಮಟ್ಟದ ಪ್ರತಿನಿಧಿಗಳು, ಕೆಳಗಿನ ಸ್ಥರದ ಅಧಿಕಾರಿಗಳು, ಮತ್ತು ಕಾರ್ಮಿಕರು ಈ ಹೆಚ್ಚಳದ ಅನುಕೂಲ ಪಡೆಯಲಿದ್ದಾರೆ.

ಇದರಿಂದಾಗಿ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಸಿಪಿಎಸ್ಇ ಉದ್ಯೋಗಿಗಳಿಗೆ ನಿರಾಳವಾಗಲಿದೆ. ತುಟ್ಟಿಭತ್ಯೆಯು ಮುಂದಿನ ಕಂತಿನ ಏರಿಕೆ ಅಕ್ಟೋಬರ್ ಒಂದರಂದು ನಡೆಯಲಿದೆ.
ಮತ್ತಷ್ಟು
ಸರಕಾರ ಇದ್ದರೂ, ಬಿದ್ದರೂ ಪಿಎಂಗೆ ಬೆಂಬಲ: ರಾಹುಲ್
ಸ್ಪೀಕರ್ ಚಟರ್ಜಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆಯೇ?
ಉಗ್ರರಿಂದ ಖ್ಯಾತನಾಮರ ಮೊಬೈಲ್ ಬಳಕೆ
ಸಾಕ್ಷಿ ನೀಡಿ: ಬರ್ದನ್‌ಗೆ ಕಾಂಗ್ರೆಸ್ ತಿರುಗೇಟು
ಸಂಖ್ಯಾ ಅಟ: ಸಣ್ಣಸಣ್ಣ ಪಕ್ಷಗಳ ದೊಡ್ಡದೊಡ್ಡ ಬೇಡಿಕೆ
ಯುಪಿಎಗೆ ಬೆಂಬಲ ಅಸಾಧ್ಯ : ದೇವೇಗೌಡ