ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದದ ಬಗ್ಗೆ ಭಾರತವು ಶುಕ್ರವಾರ ವಿಯೆನ್ನಾದಲ್ಲಿ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಮಂಡಳಿಯ 35 ಮಂದಿ ಸದಸ್ಯರಿಗೆ ಸುರಕ್ಷತಾ ಒಪ್ಪಂದದ ಬಗ್ಗೆ ವಿವರಣೆಯನ್ನು ನೀಡಲಿದೆ.
ಪರಮಾಣು ಒಪ್ಪಂದದ ಬಗ್ಗೆ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಶಿವಶಂಕರ್ ಮೆನನ್ ವಿವರಣೆ ನೀಡಲಿದ್ದು, ಪರಮಾಣು ಪೂರೈಕೆದಾರರ ಗುಂಪಿನ ರಾಷ್ಟ್ರಗಳು ಭಾರತಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ, ಪ್ರಸ್ತುತ ಭಾರತವು ಮಂಡಳಿಯ ಸದಸ್ಯತನ ಹೊಂದಿಲ್ಲದಿದ್ದರೂ ಈ ಸಮಾರಂಭದಲ್ಲಿ ಭಾಗವಹಿಸಲಿವೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದದ ಬಗ್ಗೆ ಪ್ರಧಾನ ದೇಶಗಳು ಭಾರತಕ್ಕೆ ಬೆಂಬಲ ನೀಡುವ ಸಲುವಾಗಿ ಈ ಒಪ್ಪಂದದ ಬಗ್ಗೆ ವಿಶೇಷ ವಿವರಣೆಯನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಮಂಡಳಿಯ ಸದಸ್ಯರಿಗೆ ನೀಡಲಾಗುತ್ತಿದೆ ಎಂಬುದಾಗಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
35 ಸದಸ್ಯರನ್ನೊಳಗೊಂಡ ಐಎಇಎ ಮಂಡಳಿಯಲ್ಲಿ 26 ಎನ್‌ಎಸ್‌ಜಿ ರಾಷ್ಟ್ರಗಳಿವೆ. ಏತನ್ಮಧ್ಯೆ, ಐಎಇಎ ಮಂಡಳಿಯಿಂದ ಸುರಕ್ಷತಾ ಒಪ್ಪಂದವು ಅಂಗೀಕರಿಸಲ್ಪಟ್ಟ ನಂತರ ಭಾರತಕ್ಕೆ 45 ದೇಶಗಳ ಬೆಂಬಲದ ಲಭ್ಯತೆಗಾಗಿ ಇತರ ಎನ್‌ಎಸ್‌ಜಿ ರಾಷ್ಟ್ರಗಳನ್ನು ಈ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ವಿಯೆನ್ನಾದಲ್ಲಿ ಮೆನನ್ ಅವರು ಒಪ್ಪಂದದ ಬಗ್ಗೆ ವಿವರಣೆಯನ್ನು ನೀಡಲಿದ್ದು, ಅವರಿಗೆ ಪರಮಾಣು ಶಕ್ತಿ ಇಲಾಖೆಯ ಕಾರ್ಯದರ್ಶಿ ಆರ್ ಬಿ ಗ್ರೋವರ್ ಜೊತೆ ನೀಡುವರು.
ಈ ಹಿಂದೆ ಭಾರತವು ಐಎಇಎಯಲ್ಲಿರುವ 140 ಸದಸ್ಯರಿಗೂ ಒಪ್ಪಂದದ ಬಗ್ಗೆ ವಿವರಣೆ ನೀಡುವ ಯೋಜನೆಯನ್ನಿರಿಸಿತ್ತು. ಆದರೆ ಸುರಕ್ಷತಾ ಒಪ್ಪಂದವನ್ನು ಕೇವಲ 35 ರಾಷ್ಟ್ರಗಳು ಅನುಮೋದಿಸಿದರೆ ಸಾಕು ಎಂಬ ನಿಟ್ಟಿನಲ್ಲಿ ಬಾಕಿಉಳಿದ ದೇಶಗಳಿಗೆ ವಿವರಣೆ ನೀಡುವುದು ಅಗತ್ಯವಿಲ್ಲ ಎಂಬ ತೀರ್ಮಾನವನ್ನು ಕೈಗೊಂಡಿತ್ತು.
ಜುಲೈ 7ರಂದು ಕೈ ಸೇರಿದ ಸುರಕ್ಷತಾ ಒಪ್ಪಂದದ ಬಗ್ಗೆ ಉಚಿತ ತೀರ್ಮಾನವನ್ನು ಕೈಗೊಳ್ಳಲು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಸದಸ್ಯರು ಮುಂಬರುವ ಆಗಸ್ಟ್ 1ರಂದು ಸಭೆ ಸೇರಲಿದ್ದಾರೆ.
|