ಮುಂಬರುವ ಐದು ವರ್ಷಗಳೊಳಗೆ ಹುಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸರಕಾರ 600ಕೋಟಿ ರೂ. ಮೊತ್ತವನ್ನು ಮೀಸಲಿರಿಸಿದೆ. ದೇಶಾದ್ಯಂತ 36 ಹುಲಿ ಅಭಯಾರಣ್ಯಗಳಿವೆ.
ಈ ಮೊತ್ತ ಕೇವಲ ವ್ಯಾಘ್ರ ಸಂರಕ್ಷಣೆಗೆ ಮಾತ್ರವಲ್ಲದೆ, ಈ ಯೋಜನೆಯಿಂದ ಸ್ಥಳಾಂತರ ಆಗುವವರಿಗೆ ಸಹಾಯ ನೀಡಲು ಬಳಕೆಯಾಗಲಿದೆ ಎಂದು ಆಧಿಕಾರಿ ಮೂಲಗಳು ತಿಳಿಸಿವೆ. ಈ ಯೋಜನೆ ಮೀಸಲು ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮವನ್ನು ಬೆಳೆಸಲು ಸಹಾಯಕವಾಗಲಿದೆ.
ತಮಿಳುನಾಡಿನ ನೀಲಗಿರಿಯ ಮುದುಮಲೈಯಲ್ಲಿ ಹುಲಿ ರಕ್ಷಣಾಧಾಮ ಕುರಿತು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯೋಜನೆಯ ಡಿಯಲ್ಲಿನ ಎಲ್ಲ ಅಭಯಾರಣ್ಯಗಳು ವಿಷಮ ಸ್ಥಿತಿಯಲ್ಲಿವೆ ಮತ್ತು ಬಂಡೀಪುರ, ಕೊಳ್ಳೆಗಾಲ, ಸತ್ಯಮಂಗಲಂ ಮತ್ತು ಸುತ್ತಲಿನ ಪ್ರದೇಶಗಳೊಂದಿಗೆ ಮುದುಮಲೈ, ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಹುಲಿಧಾಮದಲ್ಲಿ ಹೆಚ್ಚಿನ ಸಂಖ್ಯೆಯ ಹುಲಿಗಳಿದ್ದವು.
ಆಧಿಕಾರಿಗಳು ಈ ಯೋಜನೆಯಿಂದಾಗಿ ಮೀಸಲು ಪ್ರದೇಶದ ಗಡಿ ಭಾಗಗಳಲ್ಲಿ ವಾಸಿಸುತ್ತಿರುವವರ ಜೀವನ ಕ್ರಮಕ್ಕೆ ಯಾವುದೇ ಧಕ್ಕೆಯಾಗದಂತೆ ಗಮನ ವಹಿಸುತ್ತಾರೆ ಮತ್ತು ಮರುವಸತಿ ಯೋಜನೆಯನ್ನು ಜನರ ಸಮ್ಮತಿಯಿಲ್ಲದೆ ಕಾರ್ಯರೂಪಕ್ಕೆ ತರಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
|