ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸಮತ: ಜೈಲು ಹಕ್ಕಿಗಳಿಗೂ ಬಿಡುಗಡೆಯ ಭಾಗ್ಯ  Search similar articles
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಲೋಕಸಭೆಯಲ್ಲಿ ವಿಶ್ವಾಸಮತ ಗಳಿಸಲು ಸಜ್ಜಾಗುತ್ತಿರುವ ಈ ವೇಳೆ ದೆಹಲಿ ಉಚ್ಚ ನ್ಯಾಯಾಲಯವು ವಿವಾದಾತ್ಮಕ ಆರ್‌ಜೆಡಿ ಸಂಸದ ಪಪ್ಪು ಯಾದವ್ ಅವರಿಗೆ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದೆ.

ಈ ತೀರ್ಮಾನವು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಅನುಕೂಲಕರವಾಗಿದ್ದು, ಜುಲೈ 22ರಂದು ನಡೆಯಲಿರುವ ವಿಶ್ವಾಸ ಮತದಲ್ಲಿ ಜಯ ಗಳಿಸುವ ಪ್ರಯತ್ನಕ್ಕೆ ಪೂರಕವಾಗಿದೆ. ಇದೀಗಾಗಲೇ ಯುಪಿಎ ಸರಕಾರಕ್ಕೆ ಅದೃಷ್ಟ ಸಂಖ್ಯೆಯಾದ 271 ಸಂಸದರ ಬೆಂಬಲವು ಅತ್ಯಾವಶ್ಯಕವಾಗಿದೆ.

ವಿವಾದಾತ್ಮಕ ಸಂಸದರಾದ ಶಹಾಬುದ್ದೀನ್, ಪಪ್ಪು ಯಾದವ್, ಸಮಾಜವಾದಿ ಪಕ್ಷದ ಅಫ್ಜಲ್ ಅನ್ಸಾರಿ ಮತ್ತು ಅತೀಖ್ ಅಹ್ಮದ್, ಸೂರಜ್ ಭಾನ್ ಮೊದಲಾದವರು ಕಾರಾಗೃಹ ವಾಸ ಅನುಭವಿಸುತ್ತಿದ್ದು, ವಿಶ್ವಾಸಮತದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ರಾಜೇಶ್ ರಂಜನ್ ಯಾನೆ ಪಪ್ಪು ಯಾದವ್ ಅವರಿಗೆ ಸಿಪಿಎಂ ನಾಯಕ ಅಜಿತ್ ಸರ್ಕಾರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬಿಹಾರದ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಕಾರಾಗೃಹ ವಾಸ ಅನುಭವಿಸುತ್ತಿರುವಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಹಾಗೂ ಪಕ್ಷದ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿ ವಿವಾದಕ್ಕೊಳಗಾದ ಈತನನ್ನು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ 2005ರಲ್ಲಿ ಬೆವೂರ್ ಜೈಲಿನಿಂದ ತಿಹಾರ್ ಜೈಲಿಗೆ ಕರೆದೊಯ್ಯಲಾಗಿತ್ತು.

ಆದಾಗ್ಯೂ, ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಂಸದರಿಗೆ ಲೋಕ ಸಭೆಯಲ್ಲಿ ನಡೆಯುವ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿರುವ ತೀರ್ಮಾನವನ್ನು ಪ್ರತಿಪಕ್ಷವಾದ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಮತ್ತಷ್ಟು
ಪಕ್ಷದಲ್ಲಿ ನಾಲ್ಕು ಅಪಸ್ವರ: ಕಾಂಗ್ರೆಸ್‌ಗೆ ಹೆಚ್ಚಿದ ಚಿಂತೆ
ಕಾಂಗ್ರೆಸ್‌ಗೆ ತಕ್ಕ ಶಾಸ್ತಿ: ಪ್ರಕಾಶ್ ಕಾರಟ್
ಹುಲಿ ಯೋಜನೆಗೆ ಕೇಂದ್ರದಿಂದ 600ಕೋಟಿ
ಪರಮಾಣು ಒಪ್ಪಂದ: ಭಾರತದಿಂದ ವಿವರಣೆ
ಯಾವುದೇ ಸಂಸದ ಪಕ್ಷ ತ್ಯಜಿಸಿಲ್ಲ: ಮುಲಾಯಂ
ನಕ್ಸಲರ ಅಟ್ಟಹಾಸ: 24 ಪೊಲೀಸರ ಮಾರಣ ಹೋಮ