ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಮಗಾರ ಪ್ರಮಾಣ ಪತ್ರ ಬೇಕಿಲ್ಲ : ಸೋನಿಯಾ  Search similar articles
PTI
ಯುಪಿಎ ಸರಕಾರದಿಂದ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪರಮಾಣು ಒಪ್ಪಂದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, "ತಮ್ಮ ಪಕ್ಷಕ್ಕೆ ದೇಶಭಕ್ತಿಯ ಬಗ್ಗೆ ಯಾರದೇ ಪ್ರಮಾಣಪತ್ರ ಅಗತ್ಯವಿಲ್ಲ" ಎಂಬುದಾಗಿ ಹೇಳಿಕೆ ನೀಡಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದವು ರಾಷ್ಚ್ರದ ಹಿತಾಸಕ್ತಿಯನ್ನು ಹೊಂದಿದೆ. ಭಾರತವು ಸ್ವತಂತ್ರ ವಿದೇಶಿ ನೀತಿಯನ್ನು ಅನುಸರಿಸುತ್ತಿದೆ ಹಾಗೂ ಕಾಂಗ್ರೆಸ್ ಪಕ್ಷವು ಇದೇ ದಾರಿಯಲ್ಲಿ ಮುಂದುವರಿಯುವುದು ಎಂಬುದಾಗಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಭಾರತ ಅಮೆರಿಕ ನಡುವಿನ ಪರಮಾಣು ಒಪ್ಪಂದವು ದೇಶದ ಹಿತಾಸಕ್ತಿಯಿಂದ ಕೂಡಿದೆ. ದೇಶದ ಬೆಳವಣಿಗೆಗಾಗಿ ಹೆಚ್ಚಿನ ಚೈತನ್ಯದ ಅಗತ್ಯವಿದೆ ಇದು ಮಾತ್ರವಲ್ಲದೆ, ದೇಶದ ಆವಶ್ಯಕತೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಬರುತ್ತಿವೆ. ದೇಶದ ಒಳಿತಿಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೈಗೊಂಡನಿರ್ಧಾರವನ್ನು ಮುಂದಿನ ಜನಾಂಗವು ಗೌರವಿಸಲಿದೆ ಎಂಬುದಾಗಿ ಸೋನಿಯಾ ಹೇಳಿದರು.

ಈ ವೇಳೆ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು "ತಮಗೆ ಏಕತೆಯನ್ನುಂಟು ಮಾಡುವ ರಾಜಕೀಯ ಬೇಕಾಗಿದೆ. ಭಿನ್ನತೆಯಿರುವುದಲ್ಲ, ರಾಜಕೀಯವೆಂಬುದು ಸಂಕುಚಿತ ಆಸಕ್ತಿಯಿಂದ ಕೂಡಿರಬಾರದು" ಎಂಬುದಾಗಿ ನುಡಿದರು. ಇದೀಗ ಭಾರತವು ಅಂತಾರಾಷ್ಟ್ರೀಯ ಶಕ್ತಿಯಾಗಿ ಹೊರಹೊಮ್ಮಿದೆ ಎಂಬುದಾಗಿ ಸೋನಿಯಾ ಒತ್ತಿ ಹೇಳಿದ್ದು, ಏತನ್ಮಧ್ಯೆ ರೈತರಿಗಾಗಿ ಕೇಂದ್ರ ಸರಕಾರ ನೀಡಿದ ಸವಲತ್ತುಗಳ ಬಗ್ಗೆ ಪ್ರಸ್ತಾಪಿಸಿದರು.

ರೈತರ ಅಭಿವೃದ್ದಿಗೆ ಕಾಂಗ್ರೆಸ್ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂಬುದಾಗಿ ಅವರು ಹೇಳಿದ್ದು, ಎನ್‌ಆರ್‌ಇಜಿಎ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವುದಾಗಿ ಸೋನಿಯಾ ಹೇಳಿಕೆ ನೀಡಿದ್ದಾರೆ. ಈ ನಡುವೆ ಹಣದುಬ್ಬರ ಸಮಸ್ಯೆಯನ್ನು ಯುಪಿಎ ಸರಕಾರ ಮತ್ತು ಎನ್‌ಡಿಎ ಸರಕಾರಗಳು ಯಾವ ರೀತಿ ನಿಭಾಯಿಸಿವೆ ಎಂಬುದರ ಹೋಲಿಕೆಯನ್ನು ನಡೆಸಲು ಪ್ರಯತ್ನಿಸಿದರು.

ಪ್ರಸ್ತುತ ಸರಕಾರವು ತೈಲ ಬೆಲೆ ವರ್ಧನೆಯಿಂದಾಗಿ ಹೆಚ್ಚಿನ ಸವಾಲನ್ನು ಎದುರಿಸಬೇಕಾಗಿ ಬಂದಿದೆ. ಈ ಮೊದಲು ಎನ್‌ಡಿಎ ಅಧಿಕಾರದಲ್ಲಿರುವಾಗ ಕಚ್ಛಾ ತೈಲದ ಬೆಲೆಯು 35 ಡಾಲರ್ ಆಗಿತ್ತು. ಆದರೆ ಇದೀಗ 145 ಡಾಲರ್‌ಗೆ ತಲುಪಿದೆ. ಆದರೆ ಎನ್‌ಡಿಎ ಸರಕಾರದಂತೆ ನಾವು ಆ ಹೊರೆಯನ್ನು ಸಾಮಾನ್ಯ ವ್ಯಕ್ತಿಗಳ ಮೇಲೆ ಹೊರಿಸಿಲ್ಲ ಎಂಬುದಾಗಿ ಸೋನಿಯಾ ಹೇಳಿದ್ದಾರೆ.
ಮತ್ತಷ್ಟು
ವಿಶ್ವಾಸಮತ: ಜೈಲು ಹಕ್ಕಿಗಳಿಗೂ ಬಿಡುಗಡೆಯ ಭಾಗ್ಯ
ಪಕ್ಷದಲ್ಲಿ ನಾಲ್ಕು ಅಪಸ್ವರ: ಕಾಂಗ್ರೆಸ್‌ಗೆ ಹೆಚ್ಚಿದ ಚಿಂತೆ
ಕಾಂಗ್ರೆಸ್‌ಗೆ ತಕ್ಕ ಶಾಸ್ತಿ: ಪ್ರಕಾಶ್ ಕಾರಟ್
ಹುಲಿ ಯೋಜನೆಗೆ ಕೇಂದ್ರದಿಂದ 600ಕೋಟಿ
ಪರಮಾಣು ಒಪ್ಪಂದ: ಭಾರತದಿಂದ ವಿವರಣೆ
ಯಾವುದೇ ಸಂಸದ ಪಕ್ಷ ತ್ಯಜಿಸಿಲ್ಲ: ಮುಲಾಯಂ