ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಕಚೇರಿ ಹರಾಜು ಕೇಂದ್ರವಾಗುತ್ತಿದೆ: ಎನ್‌ಡಿಎ  Search similar articles
ಲೋಕಸಭೆಯಲ್ಲಿ ಜುಲೈ 22ರಂದು ನಡೆಯಲಿರುವ ವಿಶ್ವಾಸಮತ ಯಾಚನೆಯ ವೇಳೆ ಶತಾಯ ಗತಾಯ ಗೆಲ್ಲಲು ಪ್ರಯತ್ನಿಸುತ್ತಿರುವ ಯುಪಿಎ ಸರಕಾರದ ಕುದುರೆ ವ್ಯಾಪಾರಕ್ಕೆ ತೀಕ್ಷ್ಣ ಪತ್ರಿಕ್ರಿಯೆ ನೀಡಿರುವ ಎನ್‌ಡಿಎ, ಪ್ರಧಾನಿಯವರ ಕಚೇರಿಯು ಹರಾಜು ಕೇಂದ್ರವಾಗಿ ಮಾರ್ಪಾಡಾಗುತ್ತಿರುವುದು ದುರದೃಷ್ಟಕರ ಎಂದಿದೆ.

ಪ್ರಧಾನ ಮಂತ್ರಿಯವರ ಕಚೇರಿ ಹಾಗೂ ಯುಪಿಎ ಸರಕಾರವು ಹರಾಜು ಕೇಂದ್ರವಾಗಿ ಬದಲಾಗುತ್ತಿರುವುದನ್ನು ಕಂಡು ನಾವು ವಿಷಾದಿಸುತ್ತೇವೆ ಎಂಬುದಾಗಿ ಎನ್‌ಡಿಎ ಆಡಳಿತ ರಾಜ್ಯಗಳ ಸಚಿವರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಅವರು ಮಾಧ್ಯಮದವರೊಡನೆ ಮಾತನಾಡುತ್ತಾ ಹೇಳಿದರು.

ಪ್ರಧಾನಿ ಕಚೇರಿಯಲ್ಲಿ "ಕುದುರೆ ವ್ಯಾಪಾರ"ದಂತಹ ಪ್ರಕ್ರಿಯೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಹೇಳಿದ ಅವರು, ಎನ್‌ಡಿಎ ಬೆಲೆ ಏರಿಕೆ ಹಾಗೂ ಪರಮಾಣು ಒಪ್ಪಂದದ ಸಮಸ್ಯೆಯ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆ ಎಂಬುದಾಗಿ ಹೇಳಿದರು.

ಅದೇ ವೇಳೆ ಇಂತಹ ಕಾರ್ಯಗಳು ಪ್ರಧಾನ ಮಂತ್ರಿಯವರ ಕಚೇರಿಯ ಘನತೆಗೆ ಧಕ್ಕೆಯುಂಟುಮಾಡುತ್ತದೆ ಎಂಬುದಾಗಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಿಯವರ ಕಚೇರಿಯನ್ನು ಇಂತಹ ವಿಷಯಗಳು ಬಾಧಿಸುವುದು ಸಹಜವಾಗಿದೆ. ಆದರೆ ಈ ಬಗ್ಗೆ ನಾನು ಇದೀಗ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಏತನ್ಮಧ್ಯೆ ಮುಂಬರುವ ಚುನಾವಣೆಯೇ ಇದಕ್ಕೆ ಸೂಕ್ತವಾದ ಉತ್ತರವನ್ನು ನೀಡಲಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಮತ್ತಷ್ಟು
ಸೋರೆನ್ ಕಾಣೆ: ಎನ್‌ಡಿಎ-ಯುಪಿಎ ಹುಡುಕಾಟ
ಅಣು ಒಪ್ಪಂದ: ಐಎಇಎಗೆ ವಿವರಿಸಲು ಭಾರತ ಸಜ್ಜು
ರಾಜಿನಾಮೆ ನೀಡಲಾರೆ ಎಂದ ಚಟರ್ಜಿ
ನಮಗಾರ ಪ್ರಮಾಣ ಪತ್ರ ಬೇಕಿಲ್ಲ : ಸೋನಿಯಾ
ವಿಶ್ವಾಸಮತ: ಜೈಲು ಹಕ್ಕಿಗಳಿಗೂ ಬಿಡುಗಡೆಯ ಭಾಗ್ಯ
ಪಕ್ಷದಲ್ಲಿ ನಾಲ್ಕು ಅಪಸ್ವರ: ಕಾಂಗ್ರೆಸ್‌ಗೆ ಹೆಚ್ಚಿದ ಚಿಂತೆ