ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ ಉರುಳಿದರೆ ಎನ್‌ಡಿಎ ಸರಕಾರ ರಚಿಸದು: ಬಿಜೆಪಿ  Search similar articles
NRB
ಜುಲೈ 22ರಂದು ನಡೆಯಲಿರುವ ವಿಶ್ವಾಸಮತ ಕೋರಿಕೆಯಲ್ಲಿ ವಿಫಲವಾಗಿ ಯುಪಿಎ ಸರಕಾರವು ಉರುಳಿದರೆ ಎನ್‌ಡಿಎ ಸರಕಾರ ರಚಿಸುವುದಿಲ್ಲ ಎಂಬುದಾಗಿ ಬಿಜೆಪಿ ಹೇಳಿಕೆ ನೀಡಿದೆ.

ವಿಶ್ವಾಸಮತದಲ್ಲಿ ಯುಪಿಎ ಪರಾಭವಗೊಂಡರೆ ನೂತನ ಸರಕಾರ ರೂಪಿಸಲು ಎನ್‌ಡಿಎ ಪ್ರಯತ್ನಿಸುವುದಿಲ್ಲ ಎಂದು ಅದು ಹೇಳಿದೆ.

ಅದೇ ವೇಳೆ ಯುಪಿಎ ಸರಕಾರದ ವೈಫಲ್ಯತೆಯ ಬಗ್ಗೆ ಜನರಿಗೆ ತೀರ್ಮಾನ ಕೈಗೊಳ್ಳಲು ಹಾಗೂ ಜನಾದೇಶಕ್ಕೆ ಅವಕಾಶ ನೀಡಲಾಗುವುದು ಎಂಬುದಾಗಿ ಬಿಜೆಪಿ ನಾಯಕ ಎಂ ವೆಂಕಯ್ಯ ನಾಯ್ಡು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಏತನ್ಮಧ್ಯೆ ಈ ಸಮಸ್ಯೆಗಳಿಗೆಲ್ಲಾ ಚುನಾವಣೆಯೇ ಪರಿಹಾರ ಎಂಬುದಾಗಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಗಳ ನಡುವಣ ಹೋಲಿಕೆ ನಡೆಸಿದ ನಾಯ್ಡು ಅವರು ಎನ್‌ಡಿಎ ಸುಭದ್ರ ಸಮ್ಮಿಶ್ರ ಸರಕಾರವಾಗಿತ್ತು ಎಂದು ಹೇಳಿದರು. ಆದರೆ ಕಾಂಗ್ರೆಸ್ ಪಕ್ಷವು 'ಸಮ್ಮಿಶ್ರ ಧರ್ಮ'ವನ್ನು ತಮ್ಮ ಬೆಂಬಲಿಗರೊಂದಿಗೆ ಸೇರಿ ನಿಭಾಯಿಸಿಕೊಳ್ಳವುದರಲ್ಲಿ ಎಡವಿದೆ ಎಂದು ಹೇಳಿದ್ದಾರೆ.

ಯುಪಿಎ ಸರಕಾರದಲ್ಲಿ ಕಾಂಗ್ರೆಸ್ ಪಕ್ಷವು ಪರಮಾಣು ಒಪ್ಪಂದದ ಬಗ್ಗೆ ಪ್ರಸ್ತಾವನೆ ನಡೆಸಿದುದರಿಂದಲೇ ಎಡಪಕ್ಷಗಳ ವೈಷಮ್ಯಕ್ಕೆ ತುತ್ತಾಗಬೇಕಾಯಿತು ಎಂದು ಅವರು ನುಡಿದರು.

ಪ್ರಸ್ತುತ ಬಿಜೆಪಿ ಪಕ್ಷವು ಈಗಾಗಲೇ ಗುಜರಾತ್ , ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ವಿಧಾನ ಸಭೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯನ್ನು ಸೂಚಿಸಿದೆ ಹಾಗೂ ಲೋಕ ಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಮೊತ್ತ ಮೊದಲಿಗೆ ಪ್ರಕಟಿಸಿದ ಪಕ್ಷವಾಗಿದೆ ಎಂದು ಹೇಳಿದರು.

ಎನ್‌ಡಿಎ ಪರವಾಗಿ ಸಣ್ಣಪುಟ್ಟ ಪಕ್ಷಗಳೊಡನೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ ನಾಯ್ಡು ಅವರು ಚುನಾವಣಾ ನಂತರದ ಮೈತ್ರಿಗಳಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ, ಅದರಿಂದ ದೂರ ಸರಿದಿಲ್ಲ ಎಂಬುದಾಗಿ ನುಡಿದಿದ್ದಾರೆ.
ಮತ್ತಷ್ಟು
ಪ್ರಧಾನಿ ಕಚೇರಿ ಹರಾಜು ಕೇಂದ್ರವಾಗುತ್ತಿದೆ: ಎನ್‌ಡಿಎ
ಸೋರೆನ್ ಕಾಣೆ: ಎನ್‌ಡಿಎ-ಯುಪಿಎ ಹುಡುಕಾಟ
ಅಣು ಒಪ್ಪಂದ: ಐಎಇಎಗೆ ವಿವರಿಸಲು ಭಾರತ ಸಜ್ಜು
ರಾಜಿನಾಮೆ ನೀಡಲಾರೆ ಎಂದ ಚಟರ್ಜಿ
ನಮಗಾರ ಪ್ರಮಾಣ ಪತ್ರ ಬೇಕಿಲ್ಲ : ಸೋನಿಯಾ
ವಿಶ್ವಾಸಮತ: ಜೈಲು ಹಕ್ಕಿಗಳಿಗೂ ಬಿಡುಗಡೆಯ ಭಾಗ್ಯ