ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪರಾಧಿ ಸಂಸದರ ಸಹಾಯ ಯಾಚನೆ: ಸಿಪಿಐ(ಎಂ) ಖಂಡನೆ  Search similar articles
ಲೋಕಸಭೆಯಲ್ಲಿ ಜುಲೈ 22ರಂದು ನಡೆಯಲಿರುವ ವಿಶ್ವಾಸಮತದ ಗೆಲುವಿಗಾಗಿ ಸೆರಮನೆ ವಾಸ ಅನುಭವಿಸುತ್ತಿರುವ ಅಪರಾಧಿ ಹಿನ್ನೆಲೆಯುಳ್ಳ ಲೋಕಸಭಾ ಸಂಸದರ ಸಹಾಯ ಯಾಚಿಸುತ್ತಿರುವ ಕಾಂಗ್ರೆಸ್ ಪಕ್ಷದ ನೀತಿಯನ್ನು ಸಿಪಿಐ(ಎಂ) ತೀವ್ರವಾಗಿ ಖಂಡಿಸಿದೆ.

ಕುಕೃತ್ಯದ ಹಿನ್ನೆಲೆಯಲ್ಲಿ ಕಂಬಿ ಎಣಿಸುತ್ತಿರುವ ಲೋಕಸಭಾ ಸಂಸದರನ್ನು ವಿಶ್ವಾಸಮತ ಯಾಚನೆ ವೇಳೆ ಸರಾಕಾರದ ಪರ ಮತ ಚಲಾಯಿಸಲು ಕರೆ ತರುವುದೆಂಬ ಮಾಹಿತಿ ಲಭ್ಯವಾಗಿದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಹೇಳಿದೆ.

ಆದಾಗ್ಯೂ ಕಾನೂನು ರೀತಿಯಲ್ಲಿ ಜೈಲು ಸಜೆ ಅನುಭವಿಸುವ ಸಂಸದರಿಗೆ ಲೋಕಸಭೆಯಲ್ಲಿ ಮತದಾನ ನಡೆಸುವ ಹಕ್ಕನ್ನು ಕಲ್ಪಿಸುವುದಾದರೆ ರಾಜಕೀಯ ಶಿಷ್ಟಾಚಾರದ ಬಗ್ಗೆ ಪ್ರಶ್ನಿಸಬೇಕಾಗಿದೆ ಎಂಬುದಾಗಿ ಪಾಲಿಟ್ ಬ್ಯೂರೋ ಹೇಳಿಕೆ ನೀಡಿದೆ.

ಸರಕಾರವನ್ನು ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಅಪರಾಧಿಗಳ ಸಹಾಯ ಪಡೆಯುತ್ತಿದೆ. ಅದೇ ವೇಳೆ ಪ್ರಸ್ತುತ ಹೇಳಿಕೆಯಲ್ಲಿ ಪಪ್ಪು ಯಾದವ್, ಮೊಹಮ್ಮದ್ ಶಹಾಬುದ್ದೀನ್(ಆರ್‌ಜೆಡಿ) ಮತ್ತು ಸುರಜ್ ಬ್ಹಾನ್ (ಎಲ್‌ಜೆಪಿ) ಮೊದಲಾದ ಕ್ರಿಮಿನಲ್ ಹಿನ್ನೆಲೆಯುಳ್ಳ ಸಂಸದರು ವಿಶ್ವಾಸಮತದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರುವ ಬಗ್ಗೆ ಟೀಕೆ ವ್ಯಕ್ತಪಡಿಸಲಾಗಿದೆ.

ಏತನ್ಮಧ್ಯೆ ಸಿಪಿಐ(ಎಂ) ಶಾಸಕ ಅಜಿತ್ ಸರ್ಕಾರ್‌ ಅವರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಪಪ್ಪು ಯಾದವ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದರೊಂದಿಗೆ ಶಹಾಬುದ್ದೀನ್, ಸಿಪಿಐ(ಎಂಎಲ್) ನಾಯಕ ಚಂದ್ರಶೇಖರ್ ಅವರ ಕೊಲೆ, ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಬ್ಹಾನ್ ಇನ್ನೊಂದು ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂಬುದಾಗಿ ಕೈದಿಗಳ ಹಿನ್ನೆಲೆಯನ್ನು ಪಾಲಿಟ್ ಬ್ಯೂರೋ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಮತ್ತಷ್ಟು
ಯುಪಿಎ ಉರುಳಿದರೆ ಎನ್‌ಡಿಎ ಸರಕಾರ ರಚಿಸದು: ಬಿಜೆಪಿ
ಪ್ರಧಾನಿ ಕಚೇರಿ ಹರಾಜು ಕೇಂದ್ರವಾಗುತ್ತಿದೆ: ಎನ್‌ಡಿಎ
ಎನ್‌ಡಿಎ ಜತೆ ಮಾತನಾಡುತ್ತಿದ್ದ ಸೋರೆನ್ ಪತ್ತೆ!
ಅಣು ಒಪ್ಪಂದ: ಐಎಇಎಗೆ ವಿವರಿಸಲು ಭಾರತ ಸಜ್ಜು
ರಾಜಿನಾಮೆ ನೀಡಲಾರೆ ಎಂದ ಚಟರ್ಜಿ
ನಮಗಾರ ಪ್ರಮಾಣ ಪತ್ರ ಬೇಕಿಲ್ಲ : ಸೋನಿಯಾ