ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರದ ವಿರುದ್ಧ ಮತಚಲಾವಣೆಗೆ ವಾಮರಿಗೆ ವಿಪ್  Search similar articles
PTI
ಎಡಪಕ್ಷಗಳ ನಾಯಕರು ಮತ್ತು ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿಯವರ ನಡುವಿನ ಅಸಮಧಾನದ ಹೊಗೆ ಮಾಯವಾಗುತ್ತಿರುವ ಕುರಹು ನೀಡುವಂತೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಮಾರ್ಕ್ಸಿಸ್ಟ್(ಸಿಪಿಎಂ) ಶುಕ್ರವಾರ ಸ್ಪೀಕರ್ ಅವರನ್ನು ಹೊರತು ಪಡಿಸಿ ಉಳಿದ ಸಂಸದರಿಗೆ ವಿಪ್ ಹೊರಡಿಸಿದೆ.

ಯುಪಿಎ ಸರಕಾರದ ವಿರುದ್ಧ ಮತ ಚಲಾಯಿಸುವಂತೆ ಸಿಪಿಎಂ ಸಂಸದರಿಗೆ ವಿಪ್ ನೀಡಿದ್ದು, ಈ ಪಟ್ಟಿಯಲ್ಲಿ ಸ್ಪೀಕರ್ ಹೆಸರನ್ನು ಹೊರತು ಪಡಿಸಲಾಗಿದೆ. ಅದೇ ವೇಳೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಮತ್ತು ಚಟರ್ಜಿ ಅವರು ಈಗಾಗಲೇ ಪಕ್ಷದ ನಡುವಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ.

ಆದಾಗ್ಯೂ, ಈ ಪ್ರಕ್ರಿಯೆಯು ಚಟರ್ಜಿ ಅವರು ಪದತ್ಯಾಗ ಮಾಡುವಂತೆ ಎಡಪಕ್ಷಗಳು ಅವರ ಮನವೊಲಿಸುವುದಲ್ಲ ಎಂಬುದಾಗಿ ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಪ್ರಸ್ತುತ ಮೂರು ಸಾಲುಗಳಿರುವ ವಿಪ್ ಪಠ್ಯ ಸಂದೇಶದ ಮೂಲಕ ಕಳುಹಿಸಲಾಗಿದ್ದು, ಇದರಲ್ಲಿ ಪಕ್ಷದ ಲೋಕಸಭಾ ಸಂಸದರಿಗೆ ಜುಲೈ 20ಕ್ಕೆ ದೆಹಲಿಗೆ ಬಂದು ಸೇರುವಂತೆ ಆದೇಶಿಸಲಾಗಿದೆ. ಹಾಗೂ ನಂತರದ ಎರಡು ದಿನ ಲೋಕ ಸಭೆಯಲ್ಲಿ ಉಪಸ್ಥಿತರಿದ್ದು, ಸರಕಾರದ ವಿಶ್ವಾಸಮತದಲ್ಲಿ ಸರಕಾರ ವಿರುದ್ಧ ಮತ ಚಲಾಯಿಸಬೇಕೆಂದು ಆದೇಶಿಸಲಾಗಿದೆ.

ಅಂತೂ ಇದೀಗ ಚಟರ್ಜಿವರ ಹೆಸರನ್ನು ಸದ್ಯಕ್ಕೆ ವಿಪ್ ಪ್ರಕಟಣಾ ಪಟ್ಟಿಯಲ್ಲಿ ಹೊರತು ಪಡಿಸಲಾಗಿದೆ. ಇದರೊಂದಿಗೆ ಚಟರ್ಜಿಯವರು ಸ್ಪೀಕರ್ ಸ್ಥಾನದಲ್ಲಿ ಮುಂದುವರಿಯುತ್ತಿರುವ ಕಾರಣ ಅವರನ್ನು ಎಡಪಕ್ಷದ ಸಂಸದರ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಎಂಬುದಾಗಿ ಕಮ್ಯೂನಿಸ್ಟ್ ಪಕ್ಷ ಸ್ಪಷ್ಟನೆ ನೀಡಿದೆ.
ಮತ್ತಷ್ಟು
ಅಪರಾಧಿ ಸಂಸದರ ಸಹಾಯ ಯಾಚನೆ: ಸಿಪಿಐ(ಎಂ) ಖಂಡನೆ
ಯುಪಿಎ ಉರುಳಿದರೆ ಎನ್‌ಡಿಎ ಸರಕಾರ ರಚಿಸದು: ಬಿಜೆಪಿ
ಪ್ರಧಾನಿ ಕಚೇರಿ ಹರಾಜು ಕೇಂದ್ರವಾಗುತ್ತಿದೆ: ಎನ್‌ಡಿಎ
ಎನ್‌ಡಿಎ ಜತೆ ಮಾತನಾಡುತ್ತಿದ್ದ ಸೋರೆನ್ ಪತ್ತೆ!
ಅಣು ಒಪ್ಪಂದ: ಐಎಇಎಗೆ ವಿವರಿಸಲು ಭಾರತ ಸಜ್ಜು
ರಾಜಿನಾಮೆ ನೀಡಲಾರೆ ಎಂದ ಚಟರ್ಜಿ