ವಿಶ್ವಾಸಮತ ಗಳಿಸುವ ನಿಟ್ಟಿನಲ್ಲಿ ಯುಪಿಎ ಸರಕಾರವು ಜೈಲುಹಕ್ಕಿಗಳ ಬೆಂಬಲ ಯಾಚನೆ ನಡೆಸುತ್ತಿದ್ದರೆ, ಇತ್ತ ಸರಕಾರದ ವಿರುದ್ಧ ಮತ ಚಲಾವಣೆಗಾಗಿ ಬಿಜೆಪಿಯು ರೋಗಶಯ್ಯೆಯಲ್ಲಿರುವ ಸಂಸದರನ್ನು ಕರೆತರುವ ಯೋಜನೆಯನ್ನು ರೂಪಿಸಿದೆ.
ಬಿಜೆಪಿ ಸಂಸದರಾದ ಹರಿಶಂದ್ರ ಚವಾಣ್ ಅವರು ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ನಾಸಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
57ರ ಹರೆಯದ ಈ ಸಂಸದರಿಗೆ ವಿಶ್ವಾಸಮತದಲ್ಲಿ ಪಾಲ್ಗೊಳ್ಳಲು ನವದೆಹಲಿಯ ವರೆಗೆ ಪ್ರಯಾಣ ಕೈಗೊಳ್ಳಬಾರದು ಎಂಬುದಾಗಿ ವೈದ್ಯರು ಆದೇಶ ನೀಡಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿಯು ಸರಕಾರದ ವಿರುದ್ಧ ಮತವೊಂದು ನಷ್ಟವಾಗದಂತೆ ನೋಡಿಕೊಳ್ಳಬೇಕಾಗಿದೆ. ಅದಕ್ಕಾಗಿಯೇ ಹಾಸಿಗೆ ಹಿಡಿದಿರುವ ಸಂಸದರನ್ನು ಹಾಸಿಗೆ ಸಮೇತ ಮತಚಲಾವಣೆಗಾಗಿ ಕರೆತರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.
ಆದರೆ, ತಾನು ತನ್ನ ವೈದ್ಯರ ಆದೇಶವನ್ನು ಪಾಲಿಸುವುದಾಗಿ ಸಂಸದ ಚವಾಣ್ ಹೇಳಿದ್ದಾರೆ.
|