ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
25 ಕೋ.ರೂ ಆಮಿಷ: ಮುನ್ನಾವರ್ ಹಸನ್  Search similar articles
PTI
ಜುಲೈ 22ರಂದು ಯುಪಿಎಯ ವಿಶ್ವಾಸ ಮತಯಾಚನೆಯ ವೇಳೆ ಸರಕಾರದ ಪರವಾಗಿ ಮತಚಲಾಯಿಸವಲು ತನಗೆ 25 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂಬುದಾಗಿ ಸಮಾಜವಾದಿ ಪಕ್ಷದ ಬಂಡುಕೋರ ಸಂಸದ ಮುನ್ನಾವರ್ ಹಸನ್ ಹೇಳಿದ್ದಾರೆ.

"ಜುಲೈ 10ರಂದು ತನ್ನನ್ನು ಕಂಪೆನಿಯೊಂದರ ಚಾರ್ಟರ್ಡ್ ಅಕೌಂಟೆಂಟ್ ಎಂದು ಹೇಳಿಕೊಂಡ ರೂಪೇಶ್ ಕುಮಾರ್ ಎಂಬವರು ಸಂಪರ್ಕಿಸಿದ್ದು, ಸರಕಾರದ ಪರವಾಗಿ ಮತಚಲಾಯಿಸಲು 25 ಕೋಟಿ ರೂಪಾಯಿ ಆಮಿಷ ಒಡ್ಡಿದ್ದರು" ಎಂದು ಹೇಳಿರುವ ಅವರು ಇದಲ್ಲದೆ ಹಲವಾರು ಮಂದಿ ಈ ಕುರಿತಂತೆ ತನ್ನ ಮೇಲೆ ಒತ್ತಡ ಹೇರಿದ್ದಾರೆ ಎಂದು ಆಪಾದಿಸಿದ್ದಾರೆ.

ತಾವು ಈ ಕುರಿತು ಯಾಕೆ ದೂರು ದಾಖಲಿಸಿಲ್ಲ, ಅಥವಾ ಬಿಎಸ್ಪಿ ವರಿಷ್ಠೆ ಮಾಯಾವತಿಯವರಿಗೆ ತಿಳಿಸಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮಾಹಿತಿಯನ್ನು ಹೊರಗೆಡಹಲು ಮಾಧ್ಯಮಗಳೆ ಸೂಕ್ತ ವೇದಿಕೆ ಎಂದು ತಾನು ಭಾವಿಸಿದ್ದಾಗಿ ನುಡಿದರು.

ಏತನ್ಮಧ್ಯೆ, ಪಕ್ಷವು ಹೊರಡಿಸಿರುವ ಸಚೇತಕಾಜ್ಞೆಯನ್ನು ಧಿಕ್ಕರಿಸಿ ತಾನು ಸರಕಾರದ ವಿರುದ್ಧ ಮತಚಲಾಯಿಸುವುದಾಗಿ ಅವರು ಶುಕ್ರವಾರ ಘೋಷಿಸಿದ್ದಾರೆ. ತನಗೆ ಇತರ ಏಳು ಸಂಸದರ ಬೆಂಬಲ ಇದೆ ಎಂದೂ ಅವರು ಹೇಳಿದ್ದಾರೆ. ಇದಲ್ಲದೆ, ಇದು ಮುಸ್ಲಿಂ ವಿರೋಧಿ ಒಪ್ಪಂದವಾಗಿದೆ, ಏಕೆಂದರೆ ಈ ಒಪ್ಪಂದವು ಅಮೆರಿಕ ಪ್ರಾಯೋಜಿತವಾಗಿದ್ದು, ಅಮೆರಿಕ ಮುಸ್ಲಿಂ ವಿರೋಧಿ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ.

ಶಿರೋಮಣಿ ಅಕಾಲಿದಳ ವಿಪ್
ವಿಶ್ವಾಸಮತ ಯಾಚನೆಯ ವೇಳೆಗೆ ಯುಪಿಎ ವಿರುದ್ಧ ಮತಚಲಾಯಿಸುವಂತೆ ಪಂಜಾಬಿನ ಆಡಳಿತಾರೂಢ ಶಿರೋಮಣಿ ಅಕಾಲಿದಳ ಪಕ್ಷವು, ತನ್ನ ಪಕ್ಷದ ಎಂಟು ಸಂಸದರಿಗೆ ವಿಪ್ ಹೊರಡಿಸಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರ ಸಿಖ್ ಮೂಲದ ಹಿನ್ನೆಲೆಯಲ್ಲಿ ಯಾವುದೇ ಸಂಸದರು ಅಡ್ಡಮತದಾನ ಮಾಡುವ ಸಂಭವ ತಪ್ಪಿಸುವ ಹಿನ್ನೆಲೆಯಲ್ಲಿ ಪಕ್ಷವು ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಂಡಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ತಮ್ಮ ಪಕ್ಷದ ಎಂಟು ಮಂದಿ ಸಂಸದರು ಮತ ಚಲಾಯಿಸಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರ ಪರವಾಗಿ ಮತಚಲಾಯಿಸುವಂತೆ ಹಲವು ಸಿಖ್ ಸಂಘಟನೆಗಳು ವಿನಂತಿ ಮಾಡಿರುವ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಊಹೆಗಳೆದ್ದಿರುವ ಕಾರಣ ಪಕ್ಷವು ಸಚೇತಕಾಜ್ಞೆ ಹೊರಡಿಸಿದೆ ಎಂದು ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಸುಖ್‌ದೇವ್ ಸಿಂಗ್ ದಿಂಡ್ಸಾ ಹೇಳಿದ್ದಾರೆ.

ಶಿರೋಮಣಿ ಅಕಾಲಿದಳವು ಎನ್‌ಡಿಎಯ ಅಂಗಪಕ್ಷವಾಗಿದೆ.
ಮತ್ತಷ್ಟು
ಬಿಹಾರ: ಶಾಲಾಮಕ್ಕಳಿಗಾಗಿ ಪಾಕ್ಷಿಕ ಪ್ರಕಟಣೆ
ವಿಶ್ವಾಸಮತ: ಹಾಸಿಗೆ ಸಮೇತ ಸದನಕ್ಕೆ?
ಎಂಡಿಎಂಕೆಯಿಂದಲೂ ವಿಪ್
ಎಸ್ಪಿ ಬಿರುಕು?: ಸಭೆಯಲ್ಲಿ 16 ಸಂಸದರು ಮಾತ್ರ ಹಾಜರು!
ಸರಕಾರದ ವಿರುದ್ಧ ಮತಚಲಾವಣೆಗೆ ವಾಮರಿಗೆ ವಿಪ್
ಅಪರಾಧಿ ಸಂಸದರ ಸಹಾಯ ಯಾಚನೆ: ಸಿಪಿಐ(ಎಂ) ಖಂಡನೆ