ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ ವಿರುದ್ಧ ಮತ: ಆರ್‌ಎಸ್ಪಿ ಮತ್ತು ಎಫ್‌ಬಿ ವಿಪ್ ಜಾರಿ  Search similar articles
ಯುಪಿಎ ಸರಕಾರದ ವಿಶ್ವಾಸಮತಕ್ಕೆ ಕ್ಷಣಗಣನೆ ನಡೆಯುತ್ತಿರುವಂತೆಯೇ, ಎಡಪಕ್ಷಗಳಾದ ಆರ್‌ಎಸ್ಪಿ ಮತ್ತು ಫಾರ್ವರ್ಡ್ ಬ್ಲಾಕ್ ಶನಿವಾರ ತಮ್ಮ ಸಂಸದರಿಗೆ ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಮತ ಚಲಾಯಿಸುವಂತೆ ವಿಪ್ ಹೊರಡಿಸಿದೆ.

ಪ್ರಸ್ತುತ ಎರಡು ಪಕ್ಷಗಳು ಪ್ರತ್ಯೇಕ ವಿಪ್ ಹೊರಡಿಸಿದ್ದು, ತಮ್ಮ ಸಂಸದರಲ್ಲಿ ಸೋಮವಾರ ಆರಂಭವಾಗುವ ಲೋಕಸಭೆಯ ಎರಡು ದಿನದ ವಿಶೇಷ ಅಧಿವೇಶನದಲ್ಲಿ ಭಾಗವಹಿಸುವಂತೆ ಆದೇಶಿಸಿದೆ.

ಆರ್‌ಎಸ್ಪಿ ಮತ್ತು ಫಾರ್ವರ್ಡ್ ಬ್ಲಾಕ್‌ನಲ್ಲಿ ತಲಾ ಮೂರು ಮಂದಿ ಸಂಸದರಿದ್ದಾರೆ. ಇವರು ಭಾನುವಾರ ನವದೆಹಲಿಗೆ ತಲುಪಲಿದ್ದಾರೆ. ಜುಲೈ 21 ಮತ್ತು 22 ನೇ ತಾರೀಕು ಲೋಕಸಭೆಯಲ್ಲಿ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು, ಸರಕಾರದ ವಿರುದ್ಧ ಮತ ಚಲಾಯಿಸುವಂತೆ ತಮ್ಮ ಸಂಸದರಿಗೆ ಸೂಚಿಸಿರುವುದಾಗಿ ಆರ್‌ಎಸ್ಪಿ ಪ್ರಧಾನ ಕಾರ್ಯದರ್ಶಿ ಟಿ. ಜೆ. ಚಂದ್ರಚೂಡನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಆರ್‌ಎಸ್ಪಿ ಸಂಸದರಾದ ರೇನನ್ ಬರ್ಮನ್, ಜೋಕಿಂ ಬಕ್ಸಾಲ್ ಮತ್ತು ಸನತ್ ಕುಮಾರ್ ಮಂಡಲ್ ಅವರು ಸರಕಾರ ವಿರುದ್ಧ ಮತ ಚಲಾಯಿಸಲಿದ್ದು, ಸಿಪಿಐ(ಎಂ) ಮತ್ತು ಸಿಪಿಐ ಈಗಾಗಲೇ ಲೋಕಸಭಾ ಸದಸ್ಯರಲ್ಲಿ ಯುಪಿಎ ವಿರುದ್ಧ ಮತ ಚಲಾಯಿಸಲು ಆದೇಶ ನೀಡಿದೆ.
ಮತ್ತಷ್ಟು
ಲೋಕಸಭೆಯಲ್ಲಿ ವಿಶ್ವಾಸಮತಕ್ಕೆ ವಾಜಪೇಯಿ
ಯುಪಿಎ: ವಿಶ್ವಾಸಮತಕ್ಕೆ ಕ್ಷಣಗಣನೆ
25 ಕೋ.ರೂ ಆಮಿಷ: ಮುನ್ನಾವರ್ ಹಸನ್
ಬಿಹಾರ: ಶಾಲಾಮಕ್ಕಳಿಗಾಗಿ ಪಾಕ್ಷಿಕ ಪ್ರಕಟಣೆ
ವಿಶ್ವಾಸಮತ: ಹಾಸಿಗೆ ಸಮೇತ ಸದನಕ್ಕೆ?
ಎಂಡಿಎಂಕೆಯಿಂದಲೂ ವಿಪ್