ಲೋಕಸಭೆಯಲ್ಲಿ ವಿಶ್ವಾಸಮತ ಗೆಲ್ಲಲು ಕಾಂಗ್ರೆಸ್ ಪಕ್ಷವು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿರುವಾಗ, ಯುಪಿಎ ಸರಕಾರ ವಿಶ್ವಾಸಮತ ಗೆಲ್ಲುವುದೇ ಎಂಬ ವಿಷಯದ ಬಗ್ಗೆ ಬೆಟ್ಟಿಂಗ್ ದಂಧೆಯೂ ಆರಂಭವಾಗಿದೆ.
ವಿಶ್ವಾಸಮತ ಗೆಲ್ಲಲು "ಮ್ಯಾಜಿಕ್ ಸಂಖ್ಯೆ"ಗಾಗಿ ಸೆಣಸಾಟ ನಡೆಸುತ್ತಿರುವ ಯುಪಿಎ ಸರಕಾರದಂತೆ, ಇತ್ತ ವಿಶ್ವಾಸಮತಗಳ ಸಂಖ್ಯೆಯ ಆಧಾರದ ಮೇಲೆ ಬೆಟ್ಟಿಂಗ್ ಭರ್ಜರಿಯಾಗಿ ನಡೆದು ಬರುತ್ತಿದೆ.
ವಿಶ್ವಾಸಮತದಲ್ಲಿ ತಾವು ಗೆಲ್ಲುವೆವೆಂಬ ಅಚಲ ವಿಶ್ವಾಸ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕಿದ್ದರೂ, ಪರಾಭವಗೊಳ್ಳುವ ಸಾಧ್ಯತೆ ಬಹಳಷ್ಟಿದೆ ಎಂದು ಬುಕ್ಕಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಏತನ್ಮಧ್ಯೆ, ವಿಶ್ವಾಸಮತದಲ್ಲಿ ಸರಕಾರ ಗೆಲುವು ಸಾಧಿಸಿದರೆ 38 ಪೈಸೆ ಹಾಗೂ ಪರಾಭವಗೊಂಡರೆ 2.90 ರೂಪಾಯಿ ಎಂದು ಬೆಟ್ಟಿಂಗ್ ನಿರ್ಧರಿಸಿರುವುದಾಗಿ ಬುಕ್ಕಿಯೊಬ್ಬರು ಹೇಳಿದ್ದಾರೆ. ಅಂದರೆ ಪ್ರತಿ ರೂಪಾಯಿಗೆ 38 ಪೈಸೆ ಬಾಜಿಗಾರನಿಗೆ ದಕ್ಕಲಿದೆ. ಅದೇ ವೇಳೆ ಯುಪಿಎ ವಿಜಯಗಳಿಸುವ ಮತದ ಸಂಖ್ಯೆಯನ್ನಾಧರಿಸಿ ಬೆಲೆಯೂ ವ್ಯತ್ಯಾಸವಾಗುತ್ತದೆ.
ಅವುಗಳ ವಿವರ ಇಂತಿವೆ: ಮತಗಳು | ಬೆಲೆ | 272 | 38 ಪೈಸೆ | 273 | 50 ಪೈಸೆ | 274 | 68 ಪೈಸೆ | 275 | 80 ಪೈಸೆ | ಆದಾಗ್ಯೂ, ಸರಕಾರವು ಪರಾಭವಗೊಂಡರೆ, ಬುಕ್ಕಿಗಳು ಪ್ರತಿ ರೂಪಾಯಿಯ ಪಣಕ್ಕೆ ಎರಡು ರೂಪಾಯಿಗಳಂತೆ ನೀಡಬೇಕಾಗುವುದು.
ದಿನಗಳುರುಳುತ್ತಿದ್ದಂತೆಯೇ ಬೆಟ್ಟಿಂಗ್ ದಂಧೆ ಮತ್ತುಷ್ಟು ಚುರುಕಾಗುತ್ತಾ ಬರುತ್ತಿದೆ. ಪ್ರಸ್ತುತ ಇದರ ಅಂದಾಜು ವಹಿವಾಟು ಮೊತ್ತವು 850 ಕೋಟಿಯಾಗಿದ್ದು, ಜುಲೈ 22ಕ್ಕೆ ಇದು 3000 ಕೋಟಿಯನ್ನು ಮೀರಬಹುದು ಎಂಬುದಾಗಿ ಬುಕ್ಕಿಯೊಬ್ಬರು ಹೇಳಿದ್ದಾರೆ.
ಐಪಿಎಲ್ ನಂತರ ಬುಕ್ಕಿಗಳು ವಿಶ್ವಾಸಮತದ ದುಂಬಾಲು ಬಿದ್ದು ಹಣ ಸಂಪಾದನೆ ಮಾಡುವಲ್ಲಿ ತೊಡಗಿದ್ದಾರೆ. ಏನಿದ್ದರೂ ಐಪಿಎಲ್‌ನಲ್ಲಿ ಕೈ ಸುಟ್ಟು ಕೊಂಡಿದ್ದ ಬುಕ್ಕಿಗಳು ವಿಶ್ವಾಸಮತದ ಮೂಲಕ ಭಾರೀ ಮೊತ್ತವನ್ನು ಗಳಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ.
|