ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
280 ಸದಸ್ಯರ ಬೆಂಬಲವಿದೆ: ಕಾಂಗ್ರೆಸ್  Search similar articles
PTI
ಜುಲೈ 22ರಂದು ನಡೆಯಲಿರುವ ವಿಶ್ವಾಸಮತದ ಬಗ್ಗೆ ಕುತೂಹಲ ಹೆಚ್ಚುತ್ತಿರುವಂತೆ ಕಾಂಗ್ರೆಸ್ ಪಕ್ಷವು ತಮ್ಮಲ್ಲಿ 280 ಸಂಸದರ ಬೆಂಬಲವಿರುವುದಾಗಿ ಹೇಳಿಕೆ ನೀಡಿದೆ.

"ನಮ್ಮಲ್ಲಿ 280ಕ್ಕಿಂತ ಅಧಿಕ ಮಂದಿ ಸಂಸದರ ಸುದೃಢ ಬೆಂಬಲವಿದೆ "ಎಂಬುದಾಗಿ ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗ ಮುಖ್ಯಸ್ಥ ಎಂ.ವೀರಪ್ಪ ಮೊಯ್ಲಿಯವರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಈ ವಿಷಯವು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ವಾಮರಂಗಗಳ ನಿದ್ದೆಕೆಡಿಸಲಿದೆ ಎಂದು ಮೊಯ್ಲಿ ಹೇಳಿದ್ದಾರೆ.

ವಿಶ್ವಾಸಮತದ ಸಂಖ್ಯೆಯ ಬಗ್ಗೆ ನಿಖರ ಮಾಹಿತಿಯನ್ನು ಕೇಳಿದ ಸುದ್ದಿಗಾರರಿಗೆ ಇದು ಜುಲೈ 22 ರಂದು ಸ್ಪಷ್ಟವಾಗಲಿದೆ ಎಂದ ಮೊಯ್ಲಿಯವರು, ವಿಪಕ್ಷದಲ್ಲಿ ತಮ್ಮ ಶಿಕಾರಿಗಾಗಿ ಕಾದು ಕುಳಿತುಕೊಂಡಿರುವ ರಣಹದ್ದುಗಳಿವೆ ಎಂಬುದಾಗಿ ಪ್ರತಿಕ್ರಿಯಿಸಿದರು.

ವಿಶ್ವಾಸಮತದ ಸಂಖ್ಯಾಆಟಕ್ಕೆ ಸಜ್ಜಾಗುತ್ತಿರುವ ಯುಪಿಎ ಸರಕಾರವು ಎಡರಂಗಗಳ ಬೆಂಬಲವಿಲ್ಲದೇ ಇದ್ದರೂ ಬಹುಮತದಿಂದಿದೆ. ನಮಗೆ ಈ ಮೊದಲೇ ಎಡರಂಗ ತನ್ನ ಬೆಂಬಲ ವಾಪಸ್ ತೆಗೆದುಕೊಳ್ಳುತ್ತದೆ ಎಂದು ತಿಳಿದಿತ್ತು. ಪರಮಾಣು ಒಪ್ಪಂದವು ವಾಮರಂಗಗಳಿಗೆ ನೆಪ ಅಷ್ಟೇ. ಇದಕ್ಕಾಗಿ ನಾವು ಮುಂಚಿತವಾಗಿಯೇ ಸಿದ್ಧರಾಗಿದ್ದೆವು ಎಂದು ಅವರು ನುಡಿದಿದ್ದಾರೆ.

ಕರ್ನಾಟಕ ಮತ್ತು ಹರಿಯಾಣದಲ್ಲಿನ ಕಾಂಗ್ರೆಸ್ ಸಂಸದರು ಪಕ್ಷದ ವಿರೋಧವಾಗಿ ಮಾತನಾಡುತ್ತಿರುವುದರ ಬಗ್ಗೆ ಮಾಧ್ಯಮದವರು ಪ್ರಸ್ತಾಪವೆತ್ತಿದಾಗ ನಾವೆಲ್ಲರೂ ಒಂದಾಗಿಯೇ ಇದ್ದೇವೆ, ನಾವು ಸಂಖ್ಯೆ ಮತ್ತು ವಿಶ್ವಾಸಮತದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂಬುದಾಗಿ ಉತ್ತರಿಸಿದ್ದಾರೆ.

ಆದಾಗ್ಯೂ ಕೆಲವು ಬಿಜೆಪಿ ಸಂಸದರು ಪ್ರಸ್ತುತ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದ ಮೊಯ್ಲಿಯವರಲ್ಲಿ ಅಂತಹ ಬಿಜೆಪಿ ಸದಸ್ಯರೊಂದಿಗೆ ಕಾಂಗ್ರೆಸ್ ಸಂಪರ್ಕ ಹೊಂದಿದೆಯೇ ಎಂದು ಕೇಳಿದಾಗ "ಇಲ್ಲ " ಎಂಬುದಾಗಿ ಅವರು ಹೇಳಿದ್ದಾರೆ.
ಮತ್ತಷ್ಟು
ಜೆಡಿಎಸ್: ನಿರ್ಧಾರ ನಾಳೆ, ಇಂದು ಪ್ರಧಾನಿ ಭೇಟಿ
ಯುಪಿಎ ವಿಶ್ವಾಸ ಮತಕ್ಕೆ ಭರ್ಜರಿ ಬೆಟ್ಟಿಂಗ್!
ವಿಶ್ವಾಸಮತ: ಸೋನಿಯಾರಿಂದ ಕಾಂಗ್ರೆಸ್ ಸಂಸದರ ಭೇಟಿ
ಯುಪಿಎ ವಿರುದ್ಧ ಮತ: ಆರ್‌ಎಸ್ಪಿ ಮತ್ತು ಎಫ್‌ಬಿ ವಿಪ್ ಜಾರಿ
ಲೋಕಸಭೆಯಲ್ಲಿ ವಿಶ್ವಾಸಮತಕ್ಕೆ ವಾಜಪೇಯಿ
ಯುಪಿಎ: ವಿಶ್ವಾಸಮತಕ್ಕೆ ಕ್ಷಣಗಣನೆ