ಕರುಣಾನಿಧಿ ನೇತೃತ್ವದ ದ್ರಾವಿಡ್ ಮುನ್ನೇತ್ರ ಕಜಗಂ, ಪಕ್ಷದಿಂದ ಅಮಾನತ್ತುಗೊಂಡಿರುವ ಸಂಸದರಿಗೂ ವಿಪ್ ಜಾರಿ ಮಾಡಿ 22ರಂದು ನಡೆಯಲಿರುವ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗುವ ವಿಶ್ವಾಸ ಮತಯಾಚನೆ ಗೊತ್ತುವಳಿಯ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಿದ್ದು, ದಯಾನಿಧಿ ಮಾರನ್ ಅವರು ಸರಕಾರದ ಪರ ಚಲಾಯಿಸುವುದಾಗಿ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಡಿಎಂಕೆ ಪಕ್ಷದ ಸಂಸದೀಯ ಪಕ್ಷದ ನಾಯಕ ಮತ್ತು ಕೇಂದ್ರ ಬಂದರು ಸಚಿವ ಟಿ.ಆರ್ ಬಾಲು ಅವರು ಪಕ್ಷದ ಎಲ್ಲ ಸಂಸದರಿಗೂ ವಿಶ್ವಾಸ ಮತಯಾಚನೆಯ ಪರ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಯುಪಿಎ ಸರಕಾರ ವಿಶ್ವಾಸ ಮತಯಾಚನೆಯ ಪರೀಕ್ಷೆಯಿಂದ ಪಾರಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಶ್ವಾಸ ಮತಯಾಚನೆ ಗೊತ್ತುವಳಿಯ ನಮ್ಮ ಪರವಾಗಿರುತ್ತದೆ. ಇದಕ್ಕೆ ಬೇಕಾದ ಅಗತ್ಯ ಬಹುಮತವು ನಮ್ಮ ಬಳಿ ಇದೆ. ಶ್ರೀಲಂಕಾ ಸೇನಾ ಪಡೆಗಳು ತಮಿಳು ಮೀನುಗಾರರ ಮೇಲೆ ನಡೆಸಿದ ಹಲ್ಲೆಯತ್ತ ತಿರುಗಿದ ಸಂವಾದಕ್ಕೆ ಉತ್ತರಿಸಿದ ಅವರು, ಚೆನ್ನೈನಲ್ಲಿ ಹಲ್ಲೆಯ ವಿರುದ್ಧ ಪ್ರತಿಭಟನಾರ್ಥವಾಗಿ ಉಪವಾಸ ಸತ್ಯಾಗ್ರಹ ಮಾಡಲಿದ್ದು, ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮನ ಮೋಹನ್ ಸಿಂಗ್ ಅವರ ಬಳಿ ಪಕ್ಷದ ನಿಯೋಗ ತೆರಳಲಿದೆ ಎಂದು ಹೇಳಿದರು.
|