ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು: ಉಗ್ರರ ಎನ್‌‌ಕೌಂಟರ್‌‌ಗೆ ಮೇಜರ್ ಬಲಿ  Search similar articles
ಇಲ್ಲಿನ ರಾಜೌರಿ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಉಗ್ರಗಾಮಿಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಆರ್ಮಿ ಮೇಜರ್ ಬಲಿಯಾಗಿದ್ದು, ಇಬ್ಬರು ಜವಾನರು ಗಂಭೀರವಾಗಿ ಗಾಯಗೊಂಡಿರುವುದಾಗಿ ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನ ರಾಜೌರಿ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಅವಿತು ಕುಳಿತಿದ್ದ ಐದು ಮಂದಿ ಉಗ್ರಗಾಮಿಗಳು ಏಕಾಏಕಿ ನಡೆಸಿದ ಎನ್‌ಕೌಂಟರ್‌ನಲ್ಲಿ 43ರಾಷ್ಟ್ರೀಯ ರೈಫಲ್ಸ್‌ನ ಮೇಜರ್ ಭಾನುಪ್ರತಾಪ್ ಅವರು ಸ್ಥಳದಲ್ಲೇ ಬಲಿಯಾಗಿರುವುದಾಗಿ ಆರ್ಮಿ ಮೂಲಗಳು ಹೇಳಿವೆ.

ಅಲ್ಲದೇ ಈ ಘರ್ಷಣೆಯಲ್ಲಿ ಜಮ್ಮು-ಕಾಶ್ಮೀರದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಕೂಡ ಸಾವನ್ನಪ್ಪಿರುವುದಾಗಿ ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾತ್ರಿಯಿಂದ ಈ ಪ್ರದೇಶದಲ್ಲಿ ಗುಂಡಿನ ದಾಳಿ ಆರಂಭಗೊಂಡಿದ್ದು, ಇಲ್ಲಿ ಅಡಗಿಕೊಂಡಿದ್ದ ಉಗ್ರಗಾಮಿಗಳು ನಡೆಸಿದ ಎನ್‌‌ಕೌಂಟರ್‌ನಲ್ಲಿ ಒಂಬತ್ತು ಮಂದಿ ಸೈನಿಕರು ಸಾವನ್ನಪ್ಪಿದ್ದರು. ಇದೀಗ ಭಾನುವಾರವೂ ಮುಂದುವರಿದ ದಾಳಿಯಲ್ಲಿ ಆರ್ಮಿ ಮೇಜರ್ ಭಾನು ಪ್ರತಾಪ್ ಕೂಡ ಬಲಿಯಾಗಿದ್ದಾರೆ.

ಆರ್ಮಿ ಮೇಜರ್ ಅವರ ಸಾವಿನ ಬಳಿಕ, ರಾಜೌರಿ ಪ್ರದೇಶಕ್ಕೆ ಅಧಿಕ ಸಂಖ್ಯೆಯಲ್ಲಿ ಆರ್ಮಿ ಹಾಗೂ ಪೊಲೀಸ್ ಪಡೆ ಆಗಮಿಸಿದ್ದು, ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಆರ್ಮಿ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಸಸ್ಪೆಂಡೆಡ್ ಸಂಸದ ಮಾರನ್ ಸರಕಾರದ ಪರ
ವಿಶ್ವಾಸ ಮತ: ಆಮಿಷದ ಮೊತ್ತ ನೂರು ಕೋಟಿ
ಸಂಸದರ ಚೆಲ್ಲಾಟ: ಯುಪಿಎಗೆ ಪ್ರಾಣಸಂಕಟ
ನಮ್ಮ ಬೆಂಬಲ ಯುಪಿಎಗೆ: ಜೆಎಂಎಂ ಮುಖ್ಯಸಚೇತಕ
280 ಸದಸ್ಯರ ಬೆಂಬಲವಿದೆ: ಕಾಂಗ್ರೆಸ್
ಗೌಡರಿಂದ ಕಾಯೋ ಆಟ: ಜೆಡಿಎಸ್ ನಿರ್ಧಾರ ನಾಳೆ