ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸಮತದ ಎರಡು ಡಿನ್ನರ್ ಪಾರ್ಟಿಗಳು  Search similar articles
PTI
ವಿಶ್ವಾಸ ಮತಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೆ ಸರಕಾರ ಮತ್ತು ವಿರೋಧ ಪಕ್ಷಗಳು ತಮ್ಮ ತಮ್ಮ ಬೆಂಬಲಿಗ ಸಂಸದರನ್ನು ಸಂತೃಪ್ತಗೊಳಿಸುವ ಪ್ರಕ್ರಿಯೆಯನ್ನು ಜೋರಾಗಿ ಶುರುವಿಟ್ಟುಕೊಂಡಿವೆ ಎಂಬುದಕ್ಕೆ ಸಾಕ್ಷಿ ನಿನ್ನೆ ರಾತ್ರಿ ನಡೆದ ಎರಡು ಪಾರ್ಟಿ.

ಆಡಳಿತಾರೂಢಾ ಯುಪಿಎ ಮತ್ತು ಪ್ರಮುಖ ವಿರೋಧಪಕ್ಷವಾಗಿರುವ ಎನ್‌ಡಿಎಗಳ ಪ್ರತಿಷ್ಠೆಯ ವಿಷಯವಾಗಿರುವ ವಿಶ್ವಾಸಮತ ಗೊತ್ತುವಳಿ ಮಂಡನೆ ವೇಳೆಗೆ ಪರಸ್ಪರರ ಉದ್ದೇಶ ಸಾಧನೆಗೆ ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದು, ಅದರ ಸಾಲಿಗೆ ಡಿನ್ನರ್ ರಾಜಕೀಯವೂ ಸೇರಿದೆ.

ವಿರೋಧ ಪಕ್ಷದ ನಾಯಕ ಎಲ್. ಕೆ. ಆಡ್ವಾಣಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ತಮ್ಮತಮ್ಮ ಬೆಂಬಲಿಗರಿಗಾಗಿ ಈ ಎರಡು ಪಾರ್ಟಿಗಳನ್ನು ಆಯೋಜಿಸಿದ್ದರು.
ND


ಮನಮೋಹನ್ ಸಿಂಗ್‌ ಹೋಟೇಲ್ ಅಶೋಕಾದಲ್ಲಿ ನೀಡಿರುವ ಭೋಜನ ಕೂಟದಲ್ಲಿ ಕಾಂಗ್ರೆಸ್ ಪಕ್ಷ , ಯುಪಿಎ ಅಂಗಪಕ್ಷಗಳು ಮತ್ತು ಸರಕಾರದ ಹೊಸ ಮಿತ್ರಪಕ್ಷವಾಗಿರುವ ಸಮಾಜವಾದಿ ಪಾರ್ಟಿಯ ಸಂಸದರು ಪಾಲ್ಗೊಂಡಿದ್ದರು. ಆತ್ಮವಿಶ್ವಸದಿಂದ ಕಂಗೊಳಿಸುತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಚುರುಕಿನಿಂದ ಓಡಾಡುತ್ತಿದ್ದು, ಪ್ರತಿ ಟೇಬಲ್‌ಗೂ ತೆರಳಿ ತನ್ನ ಬೆಂಬಲಿಗರನ್ನು ವಿಚಾರಿಸುತ್ತಿದ್ದುದು ಕಂಡುಬರುತ್ತಿತ್ತು.

ಭೋಜನ ಕೂಟದಲ್ಲಿ ಭಾರೀ ಆಸಕ್ತಿಯಿಂದ ಓಡಾಡುತ್ತಿದ್ದ ಸಮಾಜವಾದಿ ಪಕ್ಷದ ಅಮರ್ ಸಿಂಗ್, ಯುಪಿಎ ಅರಳಿದೆ. ಸಿಪಿಐ-ಎಂ ಪ್ರಕಾಶ್ ಕಾರಟ್ ನಿರೀಕ್ಷಿಸಿದಂತೆ ಮುದುಡಲಿಲ್ಲ ಎಂದು ನುಡಿಯುವ ಧೈರ್ಯ ತೋರಿದರು. ಆದರೆ ಪ್ರಧಾನಿಯವರ ಮೇಜವಾನಿಯಲ್ಲಿ ನ್ಯಾಷನಲ್ ಕಾನ್ಫರೆನ್ಸಿನ ಇಬ್ಬರು ಸಂಸದರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಎನ್‌ಡಿಎ ಡಿನ್ನರ್‌ನಲ್ಲಿ ಕಾಂಗ್ರೆಸ್ ಬಂಡುಕೋರ ಸಂಸದ ಕುಲ್‌ದೀಪ್ ಬಿಶ್ಣೋಯಿ ಹಾಜರಿದ್ದು, ಎಲ್ಲರ ಹುಬ್ಬುಗಳು ಮೇಲೇರುವಂತೆ ಮಾಡಿತ್ತು. ಹರ್ಯಾಣ ಮುಖ್ಯಮಂತ್ರಿ ಭಜನ್ ಲಾಲ್ ಅವರ ಪುತ್ರರಾಗಿರುವ ಬಿಶ್ಣೋಯಿ, ತನ್ನ ನಿಕಟ ವ್ಯಕ್ತಿಯೊಬ್ಬ ತನ್ನನ್ನು ಸಂಪರ್ಕಿಸಿದ್ದು, 100 ಕೋಟಿ ರೂಪಾಯಿ ಆಮಿಷ ಒಡ್ಡಿರುವುದಾಗಿ ಬಾಂಬು ಸಿಡಿಸಿದರು. ಇದಲ್ಲದೆ, ಅಣುಒಪ್ಪಂದವನ್ನು ಬೆಂಬಲಿಸಿದ್ದೇ ಆದಲ್ಲಿ ತನಗೆ ಮಂತ್ರಿ ಪದವಿಯನ್ನು ನೀಡುವುದಾಗಿಯೂ ಹೇಳಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಪ್ರಸ್ತಾಪವಿಟ್ಟವರ ಹೆಸರು ಹೇಳಲು ನಿರಾಕರಿಸಿದ ಅವರು ತನಗೆ ಅತ್ಯಂತ ನಿಕಟವಾಗಿರುವ ವ್ಯಕ್ತಿ ಈ ಆಮಿಷ ಒಡ್ಡಿರುವುದಾಗಿ ನುಡಿದರು.
ಮತ್ತಷ್ಟು
ಯುಪಿಎ ಸರಕಾರವನ್ನು ಉರುಳಿಸುತ್ತೇವೆ: ಮಾಯಾವತಿ
ಜಮ್ಮು: ಉಗ್ರರ ಎನ್‌‌ಕೌಂಟರ್‌‌ಗೆ ಮೇಜರ್ ಬಲಿ
ಸಸ್ಪೆಂಡೆಡ್ ಸಂಸದ ಮಾರನ್ ಸರಕಾರದ ಪರ
ವಿಶ್ವಾಸ ಮತ: ಆಮಿಷದ ಮೊತ್ತ ನೂರು ಕೋಟಿ
ಸಂಸದರ ಚೆಲ್ಲಾಟ: ಯುಪಿಎಗೆ ಪ್ರಾಣಸಂಕಟ
ನಮ್ಮ ಬೆಂಬಲ ಯುಪಿಎಗೆ: ಜೆಎಂಎಂ ಮುಖ್ಯಸಚೇತಕ