ಯುಪಿಎ - ವಿರೋಧಿಗಳ ನಡುವೆ ಕತ್ತುಕತ್ತಿನ ಸ್ಫರ್ಧೆ
|
|
|
|
|
ನವದೆಹಲಿ, ಸೋಮವಾರ, 21 ಜುಲೈ 2008( 11:32 IST )
|
|
|
|
|
|
|
|
ವಿಶ್ವಾಸಮತ ಗೊತ್ತುವಳಿಯಲ್ಲಿ ಯುಪಿಎ ಸರಕಾರವು ಸುರಕ್ಷಿತವಾಗಿರುವಂತೆ ಕಂಡುಬರುತ್ತಿದ್ದು, ಈ ಮೂಲಕ, ವಿಶ್ವಾಸಮತ ಯಾಚನೆಯಲ್ಲಿ ಮನಮೋಹನ್ ಸಿಂಗ್ ಗೆಲುವು ಸಾಧಿಸಲಿದ್ದಾರೆ ಎಂಬ ನಿರೀಕ್ಷೆ ಎಲ್ಲೆಡೆ ವ್ಯಕ್ತವಾಗಿದೆ.
ಕಾಂಗ್ರೆಸ್‌ನ ಉನ್ನತ ಅಧಿಕಾರಿಗಳು ನೀಡಿರುವ ಪ್ರಸಕ್ತ ಲೆಕ್ಕಾಚಾರದ ಪ್ರಕಾರ, ಯುಪಿಎ ಮೈತ್ರಿ ಪಕ್ಷವು 271 ಸಂಸದರನ್ನು ಹೊಂದಿದ್ದು, ಇದು ಸದನದ ಅರ್ಧದಷ್ಟಾಗುತ್ತದೆ. ಸಂಯುಕ್ತ ಪ್ರಗತಿಪರ ಮೈತ್ರಿ ಕೂಟ(ಯುಪಿಎ)ದ ಸಂಖ್ಯಾಬಲವು 222.
ತನ್ನ ಹೆಚ್ಚಿನ ಸಂಸದರನ್ನು ಈವೆರೆಗ ಉಳಿಸಿಕೊಳ್ಳಲು ಸಮಾಜವಾದಿ ಪಕ್ಷವು ಯಶಸ್ವಿಯಾಗಿರುವುದರೊಂದಿಗೆ ಇದರ ಸಂಸದರ ಒಟ್ಟು ಸಂಖ್ಯೆಯು 34. ಇದರೊಂದಿಗೆ ಆರು ಪಕ್ಷಗಳ ಒಂದೊಂದು ಸಂಸದರಾದ, ಓವಾಸಿ(ಎಐಎಂಐಎಂ), ಬಾಲೇಸ್ವರ್(ಎನ್ಎಲ್‌ಪಿ), ದೆಲ್ಕಾರ್(ಬಿಎನ್‌ಪಿ), ನಕುಲ್ ರೈ(ಎಸ್‌ಡಿಎಫ್), ಡಬ್ಲ್ಯೂ ವಾಂಗ್ಯೂ(ಎನ್‌ಪಿಎಫ್), ಅತುವಾಲೇ(ಆರ್‌ಪಿಐ-ಎ) ಹಾಗೂ, ನಾಲ್ಕು ಸ್ವತಂತ್ರ ಬೆಂಬಲಿಗರಾದ ನ್ಯಾಶನಲ್ ಕಾನ್ಫರೆನ್ಸ್‌ನ ಎರಡು ಸಂಸದರು, ಒಂದು ಟಿಆರ್ಎಸ್ ಬಂಡುಕೋರ(ಎ.ನರೇಂದ್ರ), ನಲಂದಾದ ಜೆಡಿ(ಯು)ನ ಒಂದು ಬಂಡುಕೋರ ರಾಮಸ್ವರೂಪ್ ಮತ್ತು ಬಿಜೆಪಿ ಬಂಡುಕೋರ ಬ್ರಿಜ್ ಭೂಷಣ್ ಶರಣ್. ಒಟ್ಟಾಗಿ 272.
ಹೀಗಾಗಿ, 541 ಸ್ಥಾನಗಳ ಪರಿಣಾಮಕಾರಿ ಸಾಮರ್ಥ್ಯದ ಮೂಲಕ ಸದನದ ಅರ್ಧ ಭಾಗವನ್ನು ಯುಪಿಎ ಪಡೆದುಕೊಳ್ಳಲಿದೆ ಯಾಕೆಂದರೆ, ಎರಡೂ ಸಮಸಮವಿದ್ದಲ್ಲಿ ಅಥವಾ ಯಾವುದೇ ಒಬ್ಬ ಸಂಸದ ಅನರ್ಹವಾಗಿದ್ದಲಿ ಮಾತ್ರವೇ ಸ್ಪೀಕರ್ ಮತ ಹಾಕುತ್ತಾರೆ.
ಸರಕಾರವು ಇನ್ನಷ್ಟು ಸಂಸದರನ್ನು ಹೊಂಚಿಕೊಳ್ಳುವ ಸಂಭಾವ್ಯತೆಯಿರುವುದರಿಂದ ಇನ್ನಷ್ಟು ನಿರೀಕ್ಷೆಯನ್ನು ಹೊಂದಿದ್ದು, ಕರ್ನಾಟಕ ಹಾಗೂ ಗುಜರಾತಿನ ಕೆಲವು ಬಿಜೆಪಿ ಸಂಸದರು ಹಾಗೂ ಕೆಲವು ಸೇನಾ ಮತ್ತು ಅಕಾಲಿ ಸಂಸದರು ಕೂಡಾ ಬೆಂಬಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಏನೇ ಆದರೂ, ವಿರೋಧ ಪಕ್ಷಕ್ಕೆ ಇದು ಅತ್ಯಂತ ಸೂಕ್ಷ್ಮ ರೇಖೆಯಾಗಿದ್ದು, ಎನ್‌ಡಿಎ ಮೈತ್ರಿಕೂಟ, ಎಡಪಕ್ಷ, ಯುಎನ್‌ಪಿಎ ಮತ್ತು ಮಾಯಾವತಿ ಹಾಗೂ ಹೆಚ್ಚುವರಿ ಎರಡು ಮೈತ್ರಿಗಳಾದ ಅಜಿತ್ ಸಿಂಗ್ ಮತ್ತು ದೇವೇಗೌಡರಿಗೆ ನಿಕಟವಾಗುತ್ತಿದ್ದು, ಈ ಮೂಲಕ ಒಟ್ಟು ಸಂಖ್ಯೆ 268 ಆಗಲಿದೆ.
ವಿರೋಧ ಪಕ್ಷದ ಬೆಂಬಲಗರ ಪಟ್ಟಿಯು ಈ ರೀತಿ ಇದೆ-
ಬಿಜೆಪಿ-128, ಶಿವಸೇನಾ-12, ಬಿಜೆಡಿ-11, ಅಕಾಲಿ ದಳ-8, ಜೆಡಿಯು-7,ಎಡಪಕ್ಷ-59, ಬಿಎಸ್‌ಪಿ-17, ಟಿಡಿಪಿ-5, ಎಸ್‌ಪಿ ಬಂಡುಕೋರ-5, ಆರ್‌ಎಲ್‌ಡಿ-3, ಜೆಡಿಎಸ್-3, ಎಂಡಿಎಂಕೆ-2, ಟಿಆರ್ಎಸ್-2, ಎಜಿಪಿ-2, ಎಚ್‌ಜೆಸಿ(ಬ್ರಿಶ್ಣೋಯ್)-1, ಸ್ವತಂತ್ರರು(ಮರಾಂಡಿ, ನಾಗ್ಪಾಲ್)-2, ಎಂಎನ್ಎಫ್-1. ಒಟ್ಟು ಸಂಖ್ಯೆ-268
ಏತನ್ಮಧ್ಯೆ, ಲೋಕಸಭೆಯಲ್ಲಿ ನಾಳೆ ನಡೆಯಲಿರುವ ವಿಶ್ವಾಸ ಗೊತ್ತುವಳಿಯ ಮತದಾನದ ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಬೆಂಬಲ ನೀಡದಿರಲು ಜನತಾ ದಳ (ಸಂಯುಕ್ತ) ನಿರ್ಧರಿಸಿದೆ.
ಇಂದು ಮುಕ್ತಾಯಗೊಂಡ ಎರಡು ದಿವಸಗಳ ಪಕ್ಷದ ರಾಷ್ಟ್ರೀಯ ಕಾರ್ಯನಿರ್ವಾಹಕ ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಜೆಡಿ(ಯು)ನ ಅಧ್ಯಕ್ಷ ಶರದ್ ಯಾದವ್ ತಿಳಿಸಿದ್ದಾರೆ.
ಇದು ಕೇವಲ ಅಣು ಒಪ್ಪಂದ ಮಾತ್ರವಲ್ಲ, ಬೆಲೆ ಏರಿಕೆ, ಹಣದುಬ್ಬರ , ವಿದೇಶ ಮತ್ತು ವ್ಯಾಪಾರ ನೀತಿ, ಮುಂತಾದ ಅನೇಕ ವಿಚಾರಗಳನ್ನು ಸೂಕ್ತವಾಗಿ ಮುನ್ನಡೆಸುವಲ್ಲಿ ಯುಪಿಎ ಎಡವಿದೆ ಎಂದ ಅವರು, ಅಣು ಒಪ್ಪಂದವು ದೇಶದ ಸ್ವಾತಂತ್ರ್ಯವನ್ನು ಅಮೆರಿಕಕ್ಕೆ ಅಡವಿಡಲು ಹೊರಟಿದ್ದು, ಈ ನಿಟ್ಟಿನಲ್ಲಿ ಪಕ್ಷವು ಇದನ್ನು ವಿರೋಧಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
|
|
|
|