ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ ಡಿನ್ನರ್‌ನಲ್ಲಿ ಬಿಜೆಪಿ ಸಂಸದ ಶರಣ್ ಸಿಂಗ್  Search similar articles
ಸಮಾಜವಾದಿ ಪಕ್ಷಕ್ಕೆ ನಿಷ್ಠೆ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಭಾನುವಾರ ರಾತ್ರಿ ಏರ್ಪಡಿಸಿದ್ದ ಡಿನ್ನರ್ ಕೂಟದಲ್ಲಿ ಪ್ರಧಾನ ಆಕರ್ಷಣೆಯಾಗಿಬಿಟ್ಟರು.

ಎಲ್ಲ ರಾಜಕೀಯ ಪಕ್ಷಗಳಿಂದಲೂ ಪಕ್ಷ ನಿಷ್ಠೆ, ತತ್ವ, ಸಿದ್ಧಾಂತಗಳೆಲ್ಲಾ ಗಾಳಿಗೆ ತೂರಲಾಗುತ್ತಿರುವ ವಿಶ್ವಾಸ ಮತ ಪ್ರಹಸನದಲ್ಲಿ, ಭಾನುವಾರದ ಡಿನ್ನರ್ ಪಾರ್ಟಿ ಎಲ್ಲರ ಕುತೂಹಲ ಕೆರಳಿಸಿದ್ದು, ಇನ್ನೊಂದೆಡೆಯಿಂದ ಕಾಂಗ್ರೆಸ್ ಸಂಸದ, ಕುಲದೀಪ್ ಬಿಷ್ಣೊಯ್ ಅವರು ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಏರ್ಪಡಿಸಿದ್ದ ರಾತ್ರಿ ಔತಣದಲ್ಲಿ ಭಾಗವಹಿಸಿ ಗಮನ ಸೆಳೆದರು.

ಅಶೋಕ ಹೋಟೆಲ್‌ನಲ್ಲಿ ಪ್ರಧಾನಿ ಏರ್ಪಡಿಸಿದ್ದ ಔತಣ ಕೂಟದಲ್ಲಿ ಎಸ್ಪಿ ಮುಖಂಡ ಅಮರ್ ಸಿಂಗ್ ಜತೆಗೆ ಶರಣ್ ಸಿಂಗ್ ಆಗಮಿಸಿದಾಗ, ಎಲ್ಲರ ಗಮನ ಅತ್ತ ಹರಿಯಿತು. ಈ ಕೂಟದಲ್ಲಿ ಭಾನುವಾರ ಸಂಜೆವರೆಗೂ ಯುಪಿಎಯನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಜೆಎಂಎಂ ಮುಖ್ಯಸ್ಥ ಶಿಬು ಸೋರೆನ್ ಕೂಡ ತಮ್ಮ ಇತರ ನಾಲ್ಕು ಮಂದಿ ಸಂಸದರೊಂದಿಗೆ ಆಗಮಿಸಿ, ಪ್ರಧಾನಿ ನಿಟ್ಟುಸಿರು ಬಿಡುವಂತೆ ಮಾಡಿದರು.

ಅಮಾನತುಗೊಂಡಿರುವ ಡಿಎಂಕೆ ಸದಸ್ಯ ದಯಾನಿಧಿ ಮಾರನ್, ಬಂಡುಕೋರ ಎಸ್ಪಿ ಸಂಸದ ರಾಜ್ ಬಬ್ಬರ್, ಡಿಎಂಕೆಯ ಕನಿಮೋಳಿ ಮತ್ತು ಎಸ್ಪಿಯ ಎಸ್.ಬಂಗಾರಪ್ಪ ಕೂಡ ಡಿನ್ನರ್‌ನಲ್ಲಿ ಪಾಲ್ಗೊಂಡರು.

ಪಿಡಿಪಿ ಮುಖಂಡರಾದ ಮುಫ್ತಿ ಮಹಮದ್ ಸಯೀದ್, ಅವರ ಪುತ್ರಿ, ಸಂಸದೆ ಮಹಬೂಬಾ ಮುಫ್ತಿ, ಮುಖ್ಯಮಂತ್ರಿಗಳಾದ ಅಸ್ಸಾಂನ ತರುಣ್ ಗೊಗೊಯ್, ಆಂಧ್ರಪ್ರದೇಶದ ವೈ.ಎಸ್.ರಾಜಶೇಖರ ರೆಡ್ಡಿ, ಮಹಾರಾಷ್ಟ್ರದ ವಿಲಾಸರಾವ್ ದೇಶಮುಖ್ ಮತ್ತು ಹರಿಯಾಣದ ಭೂಪಿಂದರ್ ಸಿಂಗ್ ಹೂಡ ಅವರೂ ಕೇಂದ್ರ ಸಚಿವರ ಜತೆಗೆ ಔತಣಕೂಟದಲ್ಲಿ ಪಾಲ್ಗೊಂಡರು.
ಮತ್ತಷ್ಟು
ವಿಶ್ವಾಸಮತದ ಎರಡು ಡಿನ್ನರ್ ಪಾರ್ಟಿಗಳು
3 ದಶಕಗಳಲ್ಲಿ ವಿಶ್ವಾಸ ಕೋರುತ್ತಿರುವ ಆರನೇ ಪ್ರಧಾನಿ
ಯುಪಿಎ ಸರಕಾರವನ್ನು ಉರುಳಿಸುತ್ತೇವೆ: ಮಾಯಾವತಿ
ಜಮ್ಮು: ಉಗ್ರರ ಎನ್‌‌ಕೌಂಟರ್‌‌ಗೆ ಮೇಜರ್ ಬಲಿ
ಸಸ್ಪೆಂಡೆಡ್ ಸಂಸದ ಮಾರನ್ ಸರಕಾರದ ಪರ
ವಿಶ್ವಾಸ ಮತ: ಆಮಿಷದ ಮೊತ್ತ ನೂರು ಕೋಟಿ