ಎಡಪಕ್ಷಗಳು ಯುಪಿಎ ಸರಕಾರಕ್ಕೆ ನೀಡಿರುವ ಬಾಹ್ಯ ಬೆಂಬಲ ಹಿಂತೆಗೆದುಕೊಂಡ ಬಳಿಕ ಅಲ್ಪಸಂಖ್ಯಾತವಾಗಿರುವ ಸರಕಾರ ಮಂಡಿಸಲಿರುವ ವಿಶ್ವಾಸಮತ ಯಾಚನೆ ಗೊತ್ತುವಳಿ ಮಂಡನೆಯ ವೇಳೆಗಿನ ಚರ್ಚೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರೂ ಸರಕಾರದ ಪರವಾಗಿ ಮಾತನಾಡಲಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸಮತ ಯಾಚನೆ ಗೊತ್ತುವಳಿ ಮಂಡಿಸಲಿದ್ದಾರೆ. ಬಳಿಕ ನಡೆಯಲಿರುವ ಚರ್ಚೆಯಲ್ಲಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಸರಕಾರದ ಪರವಾಗಿ ಕಾಂಗ್ರೆಸ್ ಸಚಿವರಾದ ಪಿ.ಚಿದಂಬರಂ, ಕಪಿಲ್ ಸಿಬಾಲ್, ಸೈಫುದ್ದೀನ್ ಸೋಜ್, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರುಗಳು ಮಾತನಾಡಲಿದ್ದಾರೆ.
ಚರ್ಚೆಯಲ್ಲಿ ಕೇಂದ್ರ ಸಚಿವರಾದ ಕಪಿಲ್ ಸಿಬಾಲ್, ವಯಲಾರ್ ರವಿ, ರಾಮ್ ವಿಲಾಸ್ ಪಾಸ್ವಾನ್, ಪವನ್ ಕುಮಾರ್ ಬನ್ಸಾಲ್, ಆನಂದ್ ಶರ್ಮಾ, ಪ್ರಫುಲ್ ಪಟೇಲ್, ರಾಮದಾಸ್, ಸಚಿನ್ ಪೈಲಟ್, ಕೃಷ್ಣ ತೀರ್ಥ್ ಮತ್ತು ಕನಿಮೋಳಿ ಅವರುಗಳು ಯುಪಿಎಯನ್ನು ಸಮರ್ಥಿಸಿಕೊಳ್ಳಲಿದ್ದಾರೆ.
ಇದಲ್ಲದೆ, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಅವಶ್ಯಕವಿದ್ದಾಗಲೆಲ್ಲ ಚರ್ಚೆಯಲ್ಲಿ ಹಸ್ತಕ್ಷೇಪ ನಡೆಸಲಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣ್, ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರುಗಳು, ರಾಜೀವ್ ಗಾಂಧಿ ಸೇರಿದಂತೆ ಹೆಚ್ಚಿನ ಯುಪಿಎ ಸಂಸದರಿಗೆ ಆಣುಒಪ್ಪಂದದ ಕುರಿತು ಮಾಹಿತಿ ನೀಡಿದ್ದು ವಿಸ್ವಾಸಮತ ಯಾಚನೆಯ ಸಂದರ್ಭದಲ್ಲಿ ಸಂಸದರು ಸಂಸತ್ತನ್ನುದ್ದೇಶಿಸಿ ಮಾತನಾಡಲು ಸನ್ನದ್ಧರಾಗಿದ್ದಾರೆ ಎಂದು ಹೇಳಲಾಗಿದೆ.
|