ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸತ್ತಿನಲ್ಲಿ ಪ್ರಸ್ತಾಪಗೊಳ್ಳದ ಸ್ಪೀಕರ್ ರಾಜೀನಾಮೆ ವಿವಾದ  Search similar articles
ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭಗೊಳ್ಳುವ ಮುನ್ನ ಸೋಮವಾರ ಮುಂಜಾನೆ ನಡೆದ ಸದನ ನಾಯಕರ ಸಭೆಯಲ್ಲಿ, ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರ ರಾಜೀನಾಮೆ ಕುರಿತಾದ ವಿಷಯವು ಪ್ರಧಾನವಾಗಿ ಕಾಣಿಸಿಕೊಳ್ಳಲಿಲ್ಲ.

ಯುಪಿಎ ಸರಕಾರದ ಬಾಹ್ಯ ಬೆಂಬಲವನ್ನು ಎಡಪಕ್ಷಗಳು ಹಿಂತೆಗೆದುಕೊಂಡಿರುವ ಫಲವಾಗಿ ಚಟರ್ಜಿ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದ ಸಿಪಿಐ(ಎಂ) ನಾಯಕ ಬಸುದೇವ್ ಆಚಾರಿಯಾ ಸೋಮವಾರ ಈ ಕುರಿತಾಗಿ ಯಾವುದೇ ಪ್ರಸ್ತಾಪ ಮಾಡಲಿಲ್ಲ.

ಕಳೆದ ರಾತ್ರಿ, ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯ ನಂತರ, ಸದನದದಲ್ಲಿ ವಿಶ್ವಾಸಮತ ಗೊತ್ತುವಳಿ ಪ್ರಾರಂಭಗೊಳ್ಳುವ ಮುನ್ನ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷವು ಚಟರ್ಜಿ ಅವರಿಗೆ ಸೂಚನೆ ಕಳುಹಿಸಿತ್ತು.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ವಿಶ್ವಾಸಮತ ಯಾಚನೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತುಕತೆ ನಡೆಸಲು ಪಕ್ಷದ ಸದನ ನಾಯಕರ ಸಭೆಯನ್ನು ಸ್ಪೀಕರ್ ಇಂದು ಮುಂಜಾನೆ ಕರೆದಿದ್ದು, ಶರದ್ ಪವಾರ್(ಎನ್‌ಸಿಪಿ), ರಾಮ್ ವಿಲಾಸ್ ಪಾಸ್ವಾನ್(ಎಲ್‌ಜಿಪಿ), ವಿ.ಕೆ.ಮಲ್ಹೋತ್ರಾ(ಬಿಜೆಪಿ), ಬಸುದೇವ್ ಆಚಾರ್ಯ(ಸಿಪಿಐ-ಎಂ) ಮತ್ತು ಅಜಿತ್ ಸಿಂಗ್(ಆರ್ಎಲ್‌ಡಿ) ಮುಂತಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಂಸತ್ತಿಗೆ ಆಗಮಿಸುವ ವೇಳೆ ಚಟರ್ಜಿ ಅವರನ್ನು ಮುತ್ತಿಕೊಂಡ ಪತ್ರಕರ್ತರು, ರಾಜೀನಾಮೆ ನಿರ್ಧಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ಮತ್ತಷ್ಟು
ಸದನವನ್ನುದ್ದೇಶಿಸಿ ಮಾತನಾಡಲಿರುವ ರಾಹುಲ್ ಗಾಂಧಿ
ಯುಪಿಎ ಡಿನ್ನರ್‌ನಲ್ಲಿ ಬಿಜೆಪಿ ಸಂಸದ ಶರಣ್ ಸಿಂಗ್
ಯುಪಿಎ - ವಿರೋಧಿಗಳ ನಡುವೆ ಕತ್ತುಕತ್ತಿನ ಸ್ಫರ್ಧೆ
ವಿಶ್ವಾಸಮತದ ಎರಡು ಡಿನ್ನರ್ ಪಾರ್ಟಿಗಳು
3 ದಶಕಗಳಲ್ಲಿ ವಿಶ್ವಾಸ ಕೋರುತ್ತಿರುವ ಆರನೇ ಪ್ರಧಾನಿ
ಯುಪಿಎ ಸರಕಾರವನ್ನು ಉರುಳಿಸುತ್ತೇವೆ: ಮಾಯಾವತಿ