ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧಕ್ಕೆ ವಿರೋಧವಿಲ್ಲ, ಮರುವಿಮರ್ಶೆಯಾಗಲಿ: ಆಡ್ವಾಣಿ  Search similar articles
ND
ತನ್ನ ಅಜೆಂಡಾದ ಸ್ಪಷ್ಟನೆಯೊಂದಿಗೆ, ಅಣು ಒಪ್ಪಂದ ಮತ್ತು ಹಣದುಬ್ಬರದ ಕುರಿತಾಗಿ ಯುಪಿಎ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಸಂಸತ್ತಿನ ವಿಶೇಷ ಅಧಿವೇಶನದ ಅವಕಾಶವನ್ನು ಸೂಕ್ತವಾಗಿಯೇ ಬಳಸಿಕೊಂಡಿರುವ ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ, ಯುಪಿಎ ಸರಕಾರಕ್ಕೆ ಲಕ್ವ ಹೊಡೆದಿದ್ದು, ಅದರ ಈ ದುರ್ದೆಸೆಗೆ ಅದೇ ಜವಾಬ್ದಾರಿ ಎಂದು ಟೀಕಿಸಿದ್ದಾರೆ.

ಯುಪಿಎ ಸರಕಾರವು ತುರ್ತು ನಿಗಾ ಘಟಕದಲ್ಲಿರುವ ರೋಗಿ ಎಂಬುದಾಗಿ ಟೀಕಿಸಿರುವ ಆಡ್ವಾಣಿ, ಅಣು ಒಪ್ಪಂದವು ಎರಡು ದೇಶಗಳ ಬದಲಿಗೆ ಎರಡು ವ್ಯಕ್ತಿಗಳ ನಡುವೆ ನಡೆಯುತ್ತಿದೆ ಎಂಬುದಾಗಿ ಆರೋಪಿಸಿದರು.

ಐಎಇಎ ಕರಡು ಸಂಬಂಧ ಯುಪಿಎ ಸರಕಾರದ ನಿಲುವನ್ನು ಪ್ರಶ್ನಿಸಿದ ಆಡ್ವಾಣಿ, ಇತರ ದೇಶಗಳಿಗೆ ಇದು ತಿಳಿದಿರುವಾಗ ಭಾರತದ ಪ್ರಜೆಗಳಿಗೇಕೆ ತಿಳಿದಿಲ್ಲ ಎಂಬುದಾಗಿ ಖಾರವಾಗಿ ಪ್ರಶ್ನಿಸಿದರು.

ಸಮ್ಮಿಶ್ರ ಧರ್ಮವನ್ನು ಯುಪಿಎ ಸರಕಾರವು ಅನುಸರಿಸಿಲ್ಲ ಈ ಕಾರಣಕ್ಕಾಗಿಯೇ ವಿಶ್ವಾಸಮತ ಯಾಚನೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದ ಅವರು, ಸದನದಲ್ಲಿ ಸರಕಾರವನ್ನು ಸೋಲಿಸಲು ಬಿಜೆಪಿಯು ಬಯಸಿದೆ ಎಂಬುದಾಗಿ ಸ್ಪಷ್ಟಪಡಿಸಿದರು.

ಅಣುಒಪ್ಪಂದದ ವಿರೋಧವಲ್ಲ
ನಮ್ಮದು ಅಣುಒಪ್ಪಂದಕ್ಕೆ ವಿರೋಧವಿಲ್ಲ, ಬದಲಿಗೆ ಅದರಲ್ಲಿ ಅಡಕವಾಗಿರುವ ವಿಚಾರಗಳಿಗೆ ವಿರೋಧ ಎಂದ ಅವರು, ಒಪ್ಪಂದ ರದ್ದುಗೊಳಿಸಲು ಹೇಳುತ್ತಿಲ್ಲ, ಒಪ್ಪಂದ ಜಾರಿಯಾಗುವ ಮುನ್ನ ಅದರ ಪುನರ್ವಿಮರ್ಶೆಯಾಗಬೇಕು ಎಂಬುದು ನಮ್ಮ ಅಭಿಮತ ಎಂದು ಸ್ಪಷ್ಟಪಡಿಸಿದರು.

ನಾವು ಬಹುಮತದೊಂದಿಗೆಯೇ ಐಎಇಎ ಬಳಿ ಒಪ್ಪಂದಕ್ಕೆ ತೆರಳಲಿದ್ದೇವೆ ಎಂಬ ಪ್ರಧಾನಿ ಸಿಂಗ್ ಅವರ ಹೇಳಿಕೆಯನ್ನು ಟೀಕಿಸಿದ ಅವರು ಸರಕಾರಕ್ಕೆ ಬಹುಮತ ಎಲ್ಲಿದೆ ಎಂದು ಪ್ರಶ್ನಸಿದರು.
ಮತ್ತಷ್ಟು
ಸಂಸತ್ತಿನಲ್ಲಿ ಪ್ರಸ್ತಾಪಗೊಳ್ಳದ ಸ್ಪೀಕರ್ ರಾಜೀನಾಮೆ ವಿವಾದ
ಸದನವನ್ನುದ್ದೇಶಿಸಿ ಮಾತನಾಡಲಿರುವ ರಾಹುಲ್ ಗಾಂಧಿ
ಯುಪಿಎ ಡಿನ್ನರ್‌ನಲ್ಲಿ ಬಿಜೆಪಿ ಸಂಸದ ಶರಣ್ ಸಿಂಗ್
ಯುಪಿಎ - ವಿರೋಧಿಗಳ ನಡುವೆ ಕತ್ತುಕತ್ತಿನ ಸ್ಫರ್ಧೆ
ವಿಶ್ವಾಸಮತದ ಎರಡು ಡಿನ್ನರ್ ಪಾರ್ಟಿಗಳು
3 ದಶಕಗಳಲ್ಲಿ ವಿಶ್ವಾಸ ಕೋರುತ್ತಿರುವ ಆರನೇ ಪ್ರಧಾನಿ