ಅಮೆರಿಕದಲ್ಲಿ ಮೊಣಕಾಲು ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಸಂಸದ, ನಟ ಧರ್ಮೇಂದ್ರ ಅವರು ಬಿಜೆಪಿ ಸೂಚನೆಯನುಸಾರ ಲೋಕಸಭೆಯ ಬಲಾಬಲ ಪರೀಕ್ಷೆಯಲ್ಲಿ ಪಾಲ್ಗೊಳ್ಳಲೆಂದು ಸೋಮವಾರ ಅಮೆರಿಕದಿಂದ ಮರಳಿದ್ದಾರೆ.
72ರ ಹರೆಯದ ಬಿಕಾನೇರ್ ಸಂಸದ ಧರ್ಮೇಂದ್ರ ಅವರು ಬೆಳಿಗ್ಗೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದರು. ಅವರು ಚರ್ಚೆಯಲ್ಲಿ ಭಾಗವಹಿಸದಿದ್ದರೂ, ಸರಕಾರದ ವಿರುದ್ಧ ಮತ ಚಲಾಯಿಸುವುದು ಖಚಿತ ಎಂದು ರೂಡಿ ನುಡಿದರು.
ಧರ್ಮೇಂದ್ರ ಅವರು ಲಾಸ್ ಏಂಜಲೀಸ್‌ನಿಂದ ದೆಹಲಿಗೆ ಬರುವಾಗ ಅವರು ವೈದ್ಯರ ಮೇಲುಸ್ತುವಾರಿಯಲ್ಲೇ ಆಗಮಿಸಿದ್ದರು.
|