ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಾಸಮತ ಸಾಬೀತುಪಡಿಸಲಿದ್ದೇವೆ: ಪ್ರಣಬ್  Search similar articles
ಯುಪಿಎ ಸರಕಾರವು 276 ಸಂಸದರ ಬೆಂಬಲವನ್ನು ಹೊಂದಿದ್ದು, ಇಲ್ಲಿಯವರೆಗೆ ಯುಪಿಎ ಅಲ್ಪಮತವನ್ನು ಹೊಂದಿಲ್ಲ ಎಂದು ಪ್ರಣಬ್ ಮುಖರ್ಜಿ ಸರಕಾರದ ಸ್ಥಿತಿಯ ಕುರಿತು ಸ್ಪಷ್ಟಪಡಿಸಿದ್ದಾರೆ.

ಅಣು ಒಪ್ಪಂದದ ವಾಸ್ತವವನ್ನು ಅಡ್ವಾಣಿ ಅಪಾರ್ಥ ಮಾಡಿಕೊಂಡಿದ್ದು, ಎಡಪಕ್ಷ ಮತ್ತು ವಿರೋಧ ಪಕ್ಷಗಳು ಅಣು ಒಪ್ಪಂದದ ವಾಸ್ತವವನ್ನು ತಿರುಚಬಾರದು ಎಂದು ಅವರು ಲೋಕಸಭೆಯಲ್ಲಿ ಒತ್ತಾಯಿಸಿದರು.

"ನಾವು ಸರಕಾರವನ್ನು ಅಸ್ಥಿರಗೊಳಿಸಲಿಲ್ಲ. ಇದಕ್ಕೆ ಎಡಪಕ್ಷಗಳೇ ಕಾರಣವಾಗುತ್ತದೆ. ಎಡಪಕ್ಷಗಳು ಬೆಂಬಲವನ್ನು ಹಿಂತೆಗೆದುಕೊಂಡರೆ, ಸಮಾಜವಾದಿ ಬೆಂಬಲಿಸಿದೆ. ಸಮಾಜವಾದಿ ಪಕ್ಷದ 39 ಸಂಸದರ ಬೆಂಬಲದೊಂದಿಗೆ, ಯುಪಿಎ ಸರಕಾರವು 276 ಸಂಖ್ಯಾಬಲವನ್ನು ಹೊಂದಿದೆ" ಎಂದು ಪ್ರಣಬ್ ಸ್ಪಷ್ಟಪಡಿಸಿದ್ದು, ಕರ್ನಾಟಕದಂತಹ ರಾಜ್ಯಗಳಲ್ಲಿ ಸರಕಾರವನ್ನು ಬಿಜೆಪಿ ಅಸ್ಥಿರಗೊಳಿಸಿದೆ ಎಂಬುದಾಗಿ ಆರೋಪಿಸಿದರು.

ಏನೇ ಆದರೂ, ದೇಶದ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ಯುಪಿಎ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಣಬ್ ಸ್ಪಷ್ಟಪಡಿಸಿದರು.
ಮತ್ತಷ್ಟು
ಮತಕ್ಕಾಗಿ ಅಮೆರಿಕದಿಂದ ಮರಳಿದ ಸಂಸದ ಧರ್ಮೇಂದ್ರ
ಪೋಖ್ರನ್-II ಟೀಕಿಸಿರಲಿಲ್ಲ: ಮನಮೋಹನ್ ಸಿಂಗ್
ಅಣುಒಪ್ಪಂದ ರದ್ದುಗೊಳಿಸಿ: ಮಾಯಾವತಿ ಆಗ್ರಹ
ಅಣುಬಂಧಕ್ಕೆ ವಿರೋಧವಿಲ್ಲ, ಮರುವಿಮರ್ಶೆಯಾಗಲಿ: ಆಡ್ವಾಣಿ
ಸಂಸತ್ತಿನಲ್ಲಿ ಪ್ರಸ್ತಾಪಗೊಳ್ಳದ ಸ್ಪೀಕರ್ ರಾಜೀನಾಮೆ ವಿವಾದ
ಸದನವನ್ನುದ್ದೇಶಿಸಿ ಮಾತನಾಡಲಿರುವ ರಾಹುಲ್ ಗಾಂಧಿ